ಕರ್ನಾಟಕ

karnataka

ETV Bharat / bharat

ನೀಲಗಿರಿ ಬೆಟ್ಟದಲ್ಲಿ ಬೈಕ್‌ ಸವಾರರಿಗೆ ಕರಡಿಗಳ ದರ್ಶನ: ಮುಂದೇನಾಯ್ತು ನೋಡಿ.. - ಕೈಗಾರಿಕೋದ್ಯಮಿ ಆನಂದ್​ ಮಹೇಂದ್ರ ಸುದ್ದಿ

ಬೈಕ್​ ಸವಾರರಿಗೆ ಕರಡಿಗಳು ಎದುರಾದ ವಿಡಿಯೋವೊಂದನ್ನು ಕೈಗಾರಿಕೋದ್ಯಮಿ ಆನಂದ್​ ಮಹೀಂದ್ರ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

Bear Charges At Tamil Nadu Biker, Bear Charges At Tamil Nadu Biker news, Anand Mahindra shared a video, Industrialist Anand Mahindra, Industrialist Anand Mahindra news, ತಮಿಳುನಾಡು ಬೈಕ್​ ಸವಾರರ ಮೇಲೆ ಕರಡಿ ದಾಳಿ, ತಮಿಳುನಾಡು ಬೈಕ್​ ಸವಾರರ ಮೇಲೆ ಕರಡಿ ದಾಳಿ ಸುದ್ದಿ, ವಿಡಿಯೋ ಹಂಚಿಕೊಂಡ ಆನಂದ್​ ಮಹೇಂದ್ರ, ಕೈಗಾರಿಕೋದ್ಯಮಿ ಆನಂದ್​ ಮಹೇಂದ್ರ, ಕೈಗಾರಿಕೋದ್ಯಮಿ ಆನಂದ್​ ಮಹೇಂದ್ರ ಸುದ್ದಿ,
ಕೃಪೆ: Twitter

By

Published : Jun 25, 2021, 10:10 AM IST

ನೀಲಗಿರಿ ಬೆಟ್ಟ:ನೀಲಗಿರಿ ಬೆಟ್ಟಗಳ ರಸ್ತೆಯ ಮೇಲೆ ಕರಡಿಗಳು ಓಡಾಡುವ ಬಗ್ಗೆ ಅಲ್ಲಿನ ಸ್ಥಳೀಯರಿಗೆ ತಿಳಿದಿದೆ. ಇದನ್ನು ಚಿತ್ರೀಕರಿಸಲು ತಮಿಳುನಾಡಿನ ಇಬ್ಬರು ಬೈಕ್​ ಸವಾರರು ತೆರಳಿದ್ದಾರೆ. ಈ ವೇಳೆ ಕರಡಿಗಳು ಗೋಚರಿಸುತ್ತಿದಂತೆಯೇ ಬೈಕ್​ ನಿಲ್ಲಿಸಿ ಅವರು ವಿಡಿಯೋ ಚಿತ್ರೀಕರಿಸುತ್ತಿದ್ದರು. ಸುದೈವವಶಾತ್ ಸವಾರರ ಮೇಲೆ ಕರಡಿಗಳು ದಾಳಿ ಮಾಡದೆ ತಮ್ಮಷ್ಟಕ್ಕೆ ತಾವು ಗುಡ್ಡ ಹತ್ತಿ ಹೋಗಿವೆ.

ಈ ಕುರಿತ ವಿಡಿಯೋವನ್ನು ಕೈಗಾರಿಕೋದ್ಯಮಿ ಆನಂದ್‌ ಮಹಿಂದ್ರಾ ಟ್ವಿಟರ್‌ನಲ್ಲಿ ಶೇರ್ ಮಾಡಿದ್ದಾರೆ. ಇದಕ್ಕೆ ಪ್ರತಿಕ್ರಿಸಿಯಿದ ನೆಟ್ಟಿಗರೊಬ್ಬರು, ಬೈಕ್​ ಸವಾರರು ಕರಡಿ ದಾಳಿಯಿಂದ ತಪ್ಪಿಸಿಕೊಂಡು ಮನೆಗೆ ತೆರಳಿದ್ದಾರೆ. ಅವರಿಗೆ ಈ ಘಟನೆಯಲ್ಲಿ ಯಾವುದೇ ಹಾನಿ ಸಂಭವಿಸಿಲ್ಲ ಎಂದು ತಿಳಿಸಿದ್ದಾರೆ.

ಈ ವಿಡಿಯೋ 1.2 ಲಕ್ಷ ಬಾರಿ ವೀಕ್ಷಣೆಯಾಗಿದೆ. 4,200 ಕ್ಕೂ ಹೆಚ್ಚು ಲೈಕ್‌ಗಳು ಬಂದಿವೆ. ಅನೇಕ ಕಮೆಂಟ್​ಗಳು ಬಂದಿವೆ. ವಿಡಿಯೋ ನೋಡಿದ ನೆಟ್ಟಿಗರು ಆತಂಕಗೊಂಡಿದ್ದು ಕರಡಿಗಳನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಬೇಕೆಂದು ಒತ್ತಾಯಿಸಿದ್ದಾರೆ.

ABOUT THE AUTHOR

...view details