ಕರ್ನಾಟಕ

karnataka

ETV Bharat / bharat

'ಹೋರಾಟಕ್ಕೆ ತಯಾರಾಗಿರಿ': ಎನ್​ಸಿಪಿ ಕಾರ್ಯಕರ್ತರಿಗೆ ಶರದ್ ಪವಾರ್ ಸೂಚನೆ - ಏಕನಾಥ್ ಶಿಂದೆ ಬಂಡಾಯ

ಶಿವಸೇನೆ ನಾಯಕ ಏಕನಾಥ್ ಶಿಂದೆ ಅವರ ಬಂಡಾಯದ ಬೆನ್ನಲ್ಲೇ ಮಹಾವಿಕಾಸ ಆಘಾಡಿ ಸರ್ಕಾರವು ಅಲುಗಾಡತೊಡಗಿದೆ. ಈ ಹಿನ್ನೆಲೆಯಲ್ಲಿ ಶರದ್ ಪವಾರ್ ಪಕ್ಷದ ಎಲ್ಲ ಹಿರಿಯ ಮುಖಂಡರೊಂದಿಗೆ ಸಭೆ ನಡೆಸುತ್ತಿದ್ದಾರೆ.

http://10.10.50.85//maharashtra/23-June-2022/mh-mum-sharadpawar-7209727_23062022133816_2306f_1655971696_1025.jpg
http://10.10.50.85//maharashtra/23-June-2022/mh-mum-sharadpawar-7209727_23062022133816_2306f_1655971696_1025.jpg

By

Published : Jun 23, 2022, 2:41 PM IST

ಮುಂಬೈ: ಕಾಂಗ್ರೆಸ್ ಪಕ್ಷದ ನಾಯಕರು, ಶಾಸಕರು ಹಾಗೂ ಕಾರ್ಯಕರ್ತರು ಹೋರಾಟಕ್ಕೆ ಅಣಿಯಾಗಿರಬೇಕು. ಎಂಥದ್ದೇ ಪರಿಸ್ಥಿತಿ ಎದುರಾದರೂ ಪಕ್ಷದ ಬೆನ್ನಿಗೆ ನಿಂತು ಹೋರಾಡಬೇಕು ಎಂದು ಎನ್​ಸಿಪಿ ಅಧ್ಯಕ್ಷ ಶರದ್ ಪವಾರ್ ಸೂಚನೆ ನೀಡಿದ್ದಾರೆ.

ಮಹಾರಾಷ್ಟ್ರದಲ್ಲಿನ ರಾಜಕೀಯ ಬೆಳವಣಿಗೆಗಳ ಬಗ್ಗೆ ಸಿಎಂ ಉದ್ಧವ್ ಠಾಕ್ರೆ ಕಠಿಣ ನಿಲುವು ತಳೆಯಬೇಕು ಎಂದು ಇದೇ ಸಂದರ್ಭದಲ್ಲಿ ಹೇಳಿದ್ದಾರೆ.

ಶಿವಸೇನೆ ನಾಯಕ ಏಕನಾಥ್ ಶಿಂದೆ ಅವರ ಬಂಡಾಯದ ಬೆನ್ನಲ್ಲೇ ಮಹಾವಿಕಾಸ ಆಘಾಡಿ ಸರ್ಕಾರವು ಅಲುಗಾಡತೊಡಗಿದೆ. ಈ ಹಿನ್ನೆಲೆಯಲ್ಲಿ ಶರದ್ ಪವಾರ್ ಪಕ್ಷದ ಎಲ್ಲ ಹಿರಿಯ ಮುಖಂಡರೊಂದಿಗೆ ಸಭೆ ನಡೆಸುತ್ತಿದ್ದಾರೆ.

ನಿನ್ನೆ ಸೋಷಿಯಲ್ ಮೀಡಿಯಾ ಮೂಲಕ ಸಿಎಂ ಉದ್ಧವ್ ಠಾಕ್ರೆ ಜನತೆಯೊಂದಿಗೆ ಸಂವಾದ ನಡೆಸಿದ್ದರು. ಈ ಸಂವಾದದ ನಂತರ ಸಿಎಂ ನಿವಾಸಕ್ಕೆ ಭೇಟಿ ನೀಡಿದ ಶರದ್ ಪವಾರ್, ತಮ್ಮ ಪಕ್ಷವು ಸಿಎಂ ಜೊತೆಗಿರಲಿದೆ ಎಂದು ಭರವಸೆ ತುಂಬಿದರು.

ABOUT THE AUTHOR

...view details