ಕರ್ನಾಟಕ

karnataka

ETV Bharat / bharat

ರಾಮಮಂದಿರ ಉದ್ಘಾಟನೆಯ ದಿನ ರಜೆ ಘೋಷಿಸಿ: ಸಿಜೆಐಗೆ ಪತ್ರ ಬರೆದ ಬಾರ್ ಕೌನ್ಸಿಲ್ ಆಫ್ ಇಂಡಿಯಾದ ಅಧ್ಯಕ್ಷ - ಸಿಜೆಐ ಡಿ ವೈ ಚಂದ್ರಚೂಡ್

ಬಾರ್ ಕೌನ್ಸಿಲ್ ಆಫ್ ಇಂಡಿಯಾದ ಅಧ್ಯಕ್ಷ ಮನನ್ ಕುಮಾರ್ ಮಿಶ್ರಾ ಅವರು ಸಿಜೆಐ ಡಿ ವೈ ಚಂದ್ರಚೂಡ್ ಅವರಿಗೆ ಪತ್ರ ಬರೆದು ಜನವರಿ 22 ರಂದು ದೇಶದ ಎಲ್ಲ ನ್ಯಾಯಾಲಯಗಳಿಗೆ ರಜೆ ನೀಡುವಂತೆ ಕೋರಿದ್ದಾರೆ.

Etv Bharatbci-chairman-writes-to-cji-requests-holiday-in-courts-on-ram-mandir-inauguration
ರಾಮಮಂದಿರ ಉದ್ಘಾಟನೆ ದಿನ ರಜೆ ಘೋಷಿಸಿ: ಸಿಜೆಐಗೆ ಪತ್ರ ಬರೆದ ಬಾರ್ ಕೌನ್ಸಿಲ್ ಆಫ್ ಇಂಡಿಯಾದ ಅಧ್ಯಕ್ಷ

By ETV Bharat Karnataka Team

Published : Jan 17, 2024, 10:01 PM IST

ನವದೆಹಲಿ:ರಾಮಮಂದಿರ ಉದ್ಘಾಟನೆ ಹಿನ್ನೆಲೆ ಜನವರಿ 22 ರಂದು ಸುಪ್ರೀಂ ಕೋರ್ಟ್ ಸೇರಿದಂತೆ ದೇಶಾದ್ಯಂತ ಹೈಕೋರ್ಟ್ ಮತ್ತು ಜಿಲ್ಲಾ ನ್ಯಾಯಾಲಯಗಳಿಗೆ ರಜೆ ಘೋಷಿಸುವಂತೆ ಕೋರಿ ಬಾರ್ ಕೌನ್ಸಿಲ್ ಆಫ್ ಇಂಡಿಯಾ (ಬಿಸಿಐ) ಅಧ್ಯಕ್ಷರು ಭಾರತದ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಡಿ ವೈ ಚಂದ್ರಚೂಡ್ ಅವರಿಗೆ ಪತ್ರ ಬರೆದಿದ್ದಾರೆ.

ಬಿಸಿಐನ ಅಧ್ಯಕ್ಷ ಹಾಗೂ ಹಿರಿಯ ವಕೀಲ ಮನನ್ ಕುಮಾರ್ ಮಿಶ್ರಾ ಅವರು ಸಿಜೆಐಗೆ ಬರೆದ ಪತ್ರದಲ್ಲಿ, "ಅಯೋಧ್ಯೆಯಲ್ಲಿ ಭವ್ಯವಾದ ರಾಮಮಂದಿರದ ನಿರ್ಮಾಣವು ಅತ್ಯಂತ ನಂಬಿಕೆಯ ವಿಷಯವಾಗಿದೆ ಮತ್ತು ನಾಗರಿಕರಲ್ಲಿ ಆಳವಾದ ಭಾವನೆಗಳನ್ನು ಹುಟ್ಟುಹಾಕಿದೆ. ಭಗವಾನ್ ರಾಮನ ಜನ್ಮಸ್ಥಳವನ್ನು ದೃಢೀಕರಿಸಿದ ಮತ್ತು ದೇವಾಲಯದ ನಿರ್ಮಾಣಕ್ಕಾಗಿ ವಿವಾದಿತ ಭೂಮಿಯನ್ನು ಹಂಚಿಕೆ ಮಾಡಿದ, 2019ರ ನವೆಂಬರ್ ರಂದು ಸುಪ್ರೀಂ ಕೋರ್ಟ್ ನೀಡಿದ ಐತಿಹಾಸಿಕ ತೀರ್ಪು ಹಿಂದೂ ಸಮುದಾಯದ ಸತ್ಯ ಮತ್ತು ನಂಬಿಕೆಗಳೊಂದಿಗೆ ಅನುರಣಿಸಿತು" ಎಂದು ಹೇಳಿದ್ದಾರೆ.

"ಈ ಕಾರ್ಯಕ್ರಮವು ದೇಶಾದ್ಯಂತ ಲಕ್ಷಾಂತರ ಜನರಿಗೆ ಧಾರ್ಮಿಕ, ಐತಿಹಾಸಿಕ ಮತ್ತು ಸಾಂಸ್ಕೃತಿಕ ಮಹತ್ವದ್ದಾಗಿದೆ. ಇದು ಬಹುನಿರೀಕ್ಷಿತ ಕನಸನ್ನು ನನಸಾಗಿಸುತ್ತದೆ. ಭಗವಾನ್ ರಾಮನ ಮಹತ್ವವು ಸಾಂಸ್ಕೃತಿಕ ಮತ್ತು ಧಾರ್ಮಿಕ ಗಡಿಗಳನ್ನು ಮೀರಿ ವಿಸ್ತರಿಸಿದೆ. ವಿವಿಧ ಸಮುದಾಯಗಳು ಮತ್ತು ದೇವರ ಮೇಲೆ ನಂಬಿಕೆವುಳ್ಳ ಜನರ ಹೃದಯ ಮತ್ತು ಮನಸ್ಸನ್ನು ಇದು ಸ್ಪರ್ಶಿಸುತ್ತದೆ. ಈ ಕಾರ್ಯಕ್ರಮದ ಧಾರ್ಮಿಕ, ಸಾಂಸ್ಕೃತಿಕ, ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಪ್ರಾಮುಖ್ಯತೆ ಹೊಂದಿದ್ದು, ಜನವರಿ 22 ರಂದು ಸುಪ್ರೀಂ ಕೋರ್ಟ್ ಸೇರಿ ದೇಶದ ಎಲ್ಲ ಹೈಕೋರ್ಟ್​ಗಳು, ಜಿಲ್ಲಾ ನ್ಯಾಯಾಲಯಗಳು ಮತ್ತು ಸ್ಥಳೀಯ ನ್ಯಾಯಾಲಯಗಳಿಗೆ ರಜಾ ದಿನವನ್ನು ಘೋಷಿಸಲು ಪರಿಗಣಿಸುವಂತೆ ನಾನು ವಿನಂತಿಸುತ್ತೇನೆ" ಎಂದಿದ್ದಾರೆ.

"ಮಿಶ್ರಾ ಅವರು ನ್ಯಾಯಾಂಗ ವ್ಯವಸ್ಥೆಯ ನಿರಂತರ ಕಾರ್ಯನಿರ್ವಹಣೆಯ ಪ್ರಾಮುಖ್ಯತೆ ಒತ್ತಿಹೇಳುತ್ತಾ, ಗಮನ ಅಗತ್ಯವಿರುವ ವಿಷಯಗಳನ್ನು ವಿಶೇಷ ವ್ಯವಸ್ಥೆಗಳ ಮೂಲಕ ಸರಿ ಹೊಂದಿಸಬಹುದು ಅಥವಾ ಅಗತ್ಯವಿದ್ದರೆ, ಮುಂದಿನ ಕೆಲಸದ ದಿನಕ್ಕೆ ಮರು ಹೊಂದಿಸಬಹುದು. ಇದು ಶ್ರೀರಾಮ ಮಂದಿರದ ಉದ್ಘಾಟನೆಯ ಆಳವಾದ ಸಾಂಸ್ಕೃತಿಕ ಮಹತ್ವವನ್ನು ಗುರುತಿಸುವುದಲ್ಲದೇ, ನಮ್ಮ ರಾಷ್ಟ್ರದ ಸಾಂಸ್ಕೃತಿಕ ನೀತಿಯೊಂದಿಗೆ ಕಾನೂನು ಪ್ರಕ್ರಿಯೆಗಳ ಸಾಮರಸ್ಯದ ಮಿಶ್ರಣವನ್ನು ಪ್ರದರ್ಶಿಸುತ್ತದೆ" ಎಂದು ಹೇಳಿದ್ದಾರೆ.

ಇದನ್ನೂ ಓದಿ:ಅಯೋಧ್ಯಾ: ಭಗವಾನ್ ರಾಮನ ಹೊಸ ವಿಗ್ರಹ ಹೇಗಿದೆ ಗೊತ್ತಾ?

ರಾಮಮಂದಿರದಲ್ಲಿ ಧಾರ್ಮಿಕ ವಿಧಿವಿಧಾನಗಳು ಆರಂಭ(ಉತ್ತರ ಪ್ರದೇಶ): ಭಗವಾನ್ ಶ್ರೀರಾಮನ ಪ್ರಾಣ ಪ್ರತಿಷ್ಠಾಪನಾ ಮಹೋತ್ಸವದ ಹಿನ್ನೆಲೆ ಮಂಗಳವಾರದಿಂದಲೇ ಧಾರ್ಮಿಕ ವಿಧಿವಿಧಾನಗಳು ಆರಂಭಗೊಂಡಿವೆ. ಮೊದಲ ದಿನವಾದ ಮಂಗಳವಾರ ಪ್ರಾಯಶ್ಚಿತ್ತ ಹಾಗೂ ಕರ್ಮಕುಟಿ ಪೂಜೆ ನಡೆಯಿತು. ವಾರಣಾಸಿಯ ವೇದ ವಿದ್ವಾಂಸರು ಈ ಕಾರ್ಯಕ್ರಮವನ್ನು ಆಯೋಜಿಸಿದ್ದರು. ಡಾ. ಅನಿಲ್ ಮಿಶ್ರಾ ಅವರು ಧಾರ್ಮಿಕ ವಿಧಿ ವಿಧಾನದ ಮುಖ್ಯ ಅತಿಥಿಯಾಗಿದ್ದರು. ಅದೇ ಅನುಕ್ರಮದಲ್ಲಿ ಇಂದು (ಬುಧವಾರ) ಆವರಣದಲ್ಲಿ ರಾಮಲಲ್ಲಾ ವಿಗ್ರಹದ ವಿಹಾರ ನೆರವೇರಿತು.

ABOUT THE AUTHOR

...view details