ಕರ್ನಾಟಕ

karnataka

ETV Bharat / bharat

ಭಾರತದ ನಕಾರಾತ್ಮಕ ಪ್ರಚಾರಕ್ಕಾಗಿ ಬಿಬಿಸಿ ಸಾಕ್ಷ್ಯಚಿತ್ರ: ಕೇರಳ ಗವರ್ನರ್ - ಬ್ರಿಟಿಷ್ ಬ್ರಾಡ್‌ಕಾಸ್ಟಿಂಗ್ ಕಾರ್ಪೊರೇಷನ್

ಪ್ರಧಾನಿ ನರೇಂದ್ರ ಮೋದಿ ಅವರು ಗುಜರಾತ್ ಪ್ರಧಾನಿಯಾಗಿದ್ದಾಗಿನ ಆಡಳಿತವನ್ನು ಟೀಕಿಸಿ ತಯಾರಿಸಲಾದ ಬಿಬಿಸಿ ಸಾಕ್ಷ್ಯಚಿತ್ರವನ್ನು ಕೇರಳ ಗವರ್ನರ್ ಆರಿಫ್ ಮುಹಮ್ಮದ್ ಖಾನ್ ಖಂಡಿಸಿದ್ದಾರೆ.

Kerala Governor On BBC Series On PM
Kerala Governor On BBC Series On PM

By

Published : Jan 29, 2023, 1:34 PM IST

ತಿರುವನಂತಪುರಂ: ಬಿಬಿಸಿ ಸಾಕ್ಷ್ಯಚಿತ್ರವನ್ನು ಟೀಕಿಸಿರುವ ಕೇರಳ ಗವರ್ನರ್ ಆರಿಫ್ ಮುಹಮ್ಮದ್ ಖಾನ್, ಭಾರತವನ್ನು ನೂರು ಚೂರಾಗುವುದನ್ನು ನೋಡಲು ಬಯಸುವವರು ಅಸಮಾಧಾನಗೊಂಡಿದ್ದಾರೆ. ಹೀಗಾಗಿಯೇ ಅವರು ಇಂಥ ನಕಾರಾತ್ಮಕ ಪ್ರಚಾರದಲ್ಲಿ ತೊಡಗುತ್ತಾರೆ ಎಂದು ಹೇಳಿದ್ದಾರೆ. "ಭಾರತದ ಭವಿಷ್ಯ ಅಂಧಕಾರದಿಂದ ಕೂಡಿದೆ ಎಂದು ಭವಿಷ್ಯ ಹೇಳಿದವರು ಮತ್ತು ಭಾರತ ನೂರಾರು ತುಂಡುಗಳಾಗಿ ಒಡೆಯುವುದನ್ನು ನೋಡಲು ಬಯಸಿದ್ದವರು ಬೇಸರಗೊಂಡಿದ್ದಾರೆ. ಹಾಗಾಗಿಯೇ ಈ ರೀತಿಯ ನಕಾರಾತ್ಮಕ ಪ್ರಚಾರ ನಡೆಸುವ ಪಿತೂರಿಗಳು ಮತ್ತು ವಿಭಿನ್ನ ಪ್ರಚಾರಗಳನ್ನು ನೀವು ನೋಡುತ್ತಿರುವಿರಿ. ಬ್ರಿಟಿಷರು ಭಾರತಕ್ಕೆ ಬಂದ ಸಮಯದ ಬಗೆಗಿನ ಬಗ್ಗೆ ಸಾಕ್ಷ್ಯಚಿತ್ರವನ್ನು ಇವರು ಏಕೆ ಮಾಡಬಾರದು" ಎಂದು ಹೇಳಿದರು.

ಉತ್ತರ ಅಮೆರಿಕದಲ್ಲಿ ನೆಲೆಸಿರುವ ಮಲಯಾಳಿ ಹಿಂದೂಗಳು ಆಯೋಜಿಸಿದ್ದ 'ಹಿಂದೂ ಸಮಾವೇಶ' ಉದ್ಘಾಟಿಸಿದ ನಂತರ ಕೇರಳ ರಾಜ್ಯಪಾಲ ಆರಿಫ್ ಮುಹಮ್ಮದ್ ಖಾನ್ ಅವರು ಜನರನ್ನು ಉದ್ದೇಶಿಸಿ ಮಾತನಾಡಿದರು. "ಭಾರತ ಬಡ ರಾಷ್ಟ್ರವಲ್ಲ. ಅದರಲ್ಲಿರುವ ಅಸಾಧಾರಣ ಸಂಪತ್ತಿನ ಕಾರಣದಿಂದಾಗಿಯೇ ಹೊರಗಿನ ಜನ ಭಾರತಕ್ಕೆ ಬಂದರು. ಆದರೆ 1947 ರ ಹೊತ್ತಿಗೆ ನಾವು ದಕ್ಷಿಣ ಏಷ್ಯಾದಲ್ಲಿ ಬಹುತೇಕ ಬಡತನದ ಸಂಕೇತವಾಗಿದ್ದೆವು. ಆದರೆ ಈಗ ಎಲ್ಲವೂ ಬದಲಾಗಿದೆ" ಎಂದರು.

"ಇಂದು ಬಹುರಾಷ್ಟ್ರೀಯ ಕಂಪನಿಗಳು ಭಾರತೀಯ ಮೂಲದ ಜನರ ನೇತೃತ್ವದಲ್ಲಿ ನಡೆಯುತ್ತಿವೆ ಮತ್ತು ಜಗತ್ತು ಭಾರತದ ಸಾಮರ್ಥ್ಯವನ್ನು ಅರಿತುಕೊಳ್ಳುತ್ತಿದೆ. ನಾವು ಶಕ್ತಿಯುತರಾಗಿದ್ದರೆ ಯಾರೂ ನಮ್ಮನ್ನು ಬೆದರಿಸಲು ಸಾಧ್ಯವಿಲ್ಲ ಎಂದು ಜಗತ್ತಿಗೆ ನಮ್ಮ ಇತಿಹಾಸದಿಂದ ತಿಳಿದಿದೆ. ನಾವು ಇತರರ ಮೇಲೆ ಪ್ರಾಬಲ್ಯ ಸಾಧಿಸಲು ಈ ಅಧಿಕಾರವನ್ನು ಎಂದಿಗೂ ಬಳಸಲಿಲ್ಲ. ಬದಲಿಗೆ ನಾವು ಪುರುಷ ಮತ್ತು ಮಹಿಳೆಯ ಅಂತರ್ಗತ ದೈವತ್ವವನ್ನು ನಂಬುತ್ತೇವೆ" ಎಂದು ಗವರ್ನರ್‌ ತಿಳಿಸಿದರು.

"ಭಾರತ ಒಡೆಯುತ್ತದೆ ಮತ್ತು ದೇಶದಲ್ಲಿ ಅಂತಃಕಲಹ ಉಂಟಾಗುತ್ತದೆ ಎಂದು ಭವಿಷ್ಯ ನುಡಿದ ಜನರ ಮನಸ್ಥಿತಿ ನಿರಾಶಾದಾಯಕವಾಗಿದೆ. ಭಾರತ ಉತ್ತಮವಾಗಿ ಮುನ್ನಡೆಯುತ್ತಿರುವುದರಿಂದ ಅವರು ನಿರಾಶೆಗೊಂಡಿದ್ದಾರೆ" ಎಂದರು. "ಬ್ರಿಟಿಷರ ಆಳ್ವಿಕೆಯ ಬಗ್ಗೆ ಸಾಕ್ಷ್ಯಚಿತ್ರ ಏಕೆ ಮಾಡಲಿಲ್ಲ? ಕಲಾವಿದನ ಕೈಗಳನ್ನು ಕತ್ತರಿಸಿದಾಗ ಏಕೆ ಸಾಕ್ಷ್ಯಚಿತ್ರ ಮಾಡಲಿಲ್ಲ?" ಎಂದು ಅವರು ಪ್ರಶ್ನಿಸಿದರು. "ದೇಶದ ನ್ಯಾಯಾಂಗಕ್ಕಿಂತ ಸಾಕ್ಷ್ಯಚಿತ್ರ ತಯಾರಕರ ಮೇಲೆ ಹೆಚ್ಚಿನ ನಂಬಿಕೆ ಹೊಂದಿರುವ ಜನರ ಬಗ್ಗೆ ನನಗೆ ವಿಷಾದವಿದೆ" ಎಂದು ರಾಜ್ಯಪಾಲರು ನುಡಿದರು.

"ಭಾರತ ಸ್ವತಂತ್ರವಾಗುವ ಕೆಲ ಸಮಯದ ಮುಂಚೆ, ಕೆಲ ಗೂಂಡಾಗಳು ಭಾರತ ಸ್ವತಂತ್ರವಾದರೆ ಅದು ಕೆಲವೇ ವರ್ಷ ಕಾಲ ತನ್ನ ಸ್ವಾತಂತ್ರ್ಯ ಉಳಿಸಿಕೊಳ್ಳಲು ಸಾಧ್ಯವಿಲ್ಲ ಎಂದಿದ್ದರು. ಭಾರತ ಒಡೆದು ಚೂರಾಗುತ್ತದೆ, ನಾವು ನಮ್ಮೊಳಗೆ ಜಗಳವಾಡುತ್ತೇವೆ ಎಂದು ಹೇಳಿದ್ದರು. ಆದರೆ ಅವೆಲ್ಲವನ್ನೂ ನಾವು ಇಂದು ತಪ್ಪು ಎಂದು ಸಾಬೀತುಪಡಿಸಿದ್ದೇವೆ" ಎಂದು ತಿಳಿಸಿದರು. "ಭಾರತವು ತನ್ನ ಸ್ವಾತಂತ್ರ್ಯ, ಪ್ರಜಾಪ್ರಭುತ್ವ ಮತ್ತು ತನ್ನ ವ್ಯವಸ್ಥೆಯನ್ನು ಬಲಪಡಿಸುವುದು ಮಾತ್ರವಲ್ಲ, ಇಂದು ಭಾರತೀಯ ಮೂಲದ ವ್ಯಕ್ತಿಯೊಬ್ಬರು ಭಾರತವನ್ನು ಕ್ರೂರವಾಗಿ ಆಳಿದ ರಾಷ್ಟ್ರದ ಪ್ರಧಾನಿಯಾಗಿದ್ದಾರೆ" ಎಂದರು.

ಯುಕೆಯ ಬ್ರಿಟಿಷ್ ಬ್ರಾಡ್‌ಕಾಸ್ಟಿಂಗ್ ಕಾರ್ಪೊರೇಷನ್ (ಬಿಬಿಸಿ) 2002 ರ ಗುಜರಾತ್ ಗಲಭೆಯ ಸಂದರ್ಭದಲ್ಲಿ ಪಿಎಂ ಮೋದಿ ಗುಜರಾತ್ ಮುಖ್ಯಮಂತ್ರಿಯಾಗಿದ್ದ ಅವಧಿಯ ಆಡಳಿತವನ್ನು ಟೀಕಿಸುವ ಹಾಗೂ ಪ್ರಧಾನಿ ಮೋದಿಯವರ ತೇಜೋವಧೆ ಮಾಡುವ ಡಾಕ್ಯುಮೆಂಟರಿಯೊಂದನ್ನು ಪ್ರಸಾರ ಮಾಡಿತ್ತು. ಈ ಡಾಕ್ಯುಮೆಂಟರಿ ಬಗ್ಗೆ ಭಾರತದಲ್ಲಿ ಆಕ್ರೋಶ ವ್ಯಕ್ತವಾದ ನಂತರ ಅದನ್ನು ಇಂಟರ್ನೆಟ್​​ನಿಂದ ತೆಗೆದುಹಾಕಲಾಗಿದೆ.

ಇದನ್ನೂ ಓದಿ: 'ದೇಶ ಒಡೆಯುವ ಶಕ್ತಿಗಳಿಂದ ಎಚ್ಚರದಿಂದಿರಿ': ಬಿಬಿಸಿ ಸಾಕ್ಷ್ಯಚಿತ್ರಕ್ಕೆ ಪ್ರಧಾನಿ ಮೋದಿ ಪರೋಕ್ಷ ಟೀಕೆ

ABOUT THE AUTHOR

...view details