ನವದೆಹಲಿ: ಬೇಟಿ ಬಚಾವೋ, ಬೇಟಿ ಪಡಾವೋ ಯೋಜನೆ ಜನರ ಮೇಲೆ ವಿಶ್ವಾಸಾರ್ಹ ಪರಿಣಾಮ ಬೀರಿದೆ. ಇದರಿಂದಾಗಿ ಲಿಂಗಾನುಪಾತದಲ್ಲಿ 16 ಅಂಕಗಳಷ್ಟು ಸುಧಾರಣೆಯಾಗಿದೆ ಎಂದು ಕೇಂದ್ರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಸ್ಮೃತಿ ಇರಾನಿ ತಿಳಿಸಿದ್ದಾರೆ.
ಹೆಣ್ಣು ಮಕ್ಕಳ ಜನನ ಮತ್ತು ದಾಖಲಾತಿ ಅನುಪಾತ ಹೆಚ್ಚಾಗಿದ್ದರೂ ಆರೋಗ್ಯ ಮತ್ತು ಶಿಕ್ಷಣ ಸಚಿವಾಲಯಗಳು ಬೇಟಿ ಬಚಾವೋ, ಬೇಟಿ ಪಡಾವೋ ಮೂಲಕ ಮತ್ತಷ್ಟು ಸುಧಾರಣೆ ಮಾಡಲು ನಿರಂತರವಾಗಿ ಯತ್ನಿಸುತ್ತಿವೆ ಎಂದು ತಿಳಿಸಿದ್ದಾರೆ.
2015ರಲ್ಲಿ ಪ್ರಧಾನಿ ಮೋದಿಯವರು, ಸಮಾಜದಲ್ಲಿ ಬದಲಾವಣೆ ತರಲು ಯತ್ನಿಸಿದರು. ಅದರ ಭಾಗವಾಗಿ ಬೇಟಿ ಬಚಾವೋ, ಬೇಟಿ ಪಡಾವೋ (ಬಿಬಿಬಿಪಿ) ಕಾರ್ಯಕ್ರಮವನ್ನು ಜಾರಿಗೆ ತಂದರು. ಕಳೆದ ಆರು ವರ್ಷಗಳಲ್ಲಿ ಈ ಯೋಜನೆ ಜನರ ಮೇಲೆ ಭಾರಿ ಪರಿಣಾಮ ಬೀರಿದ್ದು, 16 ಅಂಕಗಳಷ್ಟು ಸುಧಾರಣೆಯಾಗಿದೆ ಎಂದು ಸಚಿವೆ ಸ್ಮೃತಿ ಇರಾನಿ ಟ್ವೀಟ್ ಮಾಡಿದ್ದಾರೆ.
2015ರ ಜನವರಿಯಲ್ಲಿ ಹರಿಯಾಣದ ಪಾಣಿಪತ್ನಲ್ಲಿ ಈ ಯೋಜನೆಯನ್ನು ಜಾರಿಗೆ ತಂದರು. 2011ರ ಜನಗಣತಿಯಲ್ಲಿ ಕಳಪೆ ಮಟ್ಟದ ಲಿಂಗಾನುಪಾತ (ಸಿಎಸ್‌ಆರ್)ವಿದ್ದ ಜಿಲ್ಲೆಗಳ ಮೇಲೆ ಈ ಯೋಜನೆ ಪರಿಣಾಮ ಬೀರಿದೆ.