ಹೈದರಾಬಾದ್(ತೆಲಂಗಾಣ): ದೇಶಾದ್ಯಂತ ಇದೀಗ ಇದೀಗ ನವರಾತ್ರಿಯ ಸಂಭ್ರಮ. ಪ್ರಮುಖವಾಗಿ ತೆಲಗು ನಾಡಿನಲ್ಲಿ ಹೂವುಗಳನ್ನ ದೇವರ ರೂಪದಲ್ಲಿರಿಸಿ 'ಬತುಕಮ್ಮ' ಹಬ್ಬ ಆಚರಣೆ ಮಾಡಲಾಗ್ತಿದ್ದು,ಅದಕ್ಕಾಗಿ ವಿಶೇಷವಾದ ಹಾಡು ರಿಲೀಸ್ ಮಾಡಲಾಗಿದೆ.
ತೆಲುಗು ನಾಡಿನಲ್ಲಿ 'ಬತುಕಮ್ಮ' ಆಚರಣೆ ಸಂಭ್ರಮ: AR ರಹಮಾನ್ ಸಂಯೋಜನೆಯ ವಿಶೇಷ ಸಾಂಗ್ ರಿಲೀಸ್ - 'ಬತುಕಮ್ಮ' ಆಚರಣೆ ಸಂಭ್ರಮ
ಬತುಕಮ್ಮ ದೇವಿ ತೆಲಂಗಾಣದ ಸಾಂಸ್ಕೃತಿಕ ವೈಭವವನ್ನು ಪ್ರತಿಬಿಂಬಿಸುತ್ತದೆ. ಈ ಹಬ್ಬದಲ್ಲಿ ಒಂದು ಸುಂದರವಾದ ಹೂವಿನ ರಾಶಿಯನ್ನು, ವಿವಿಧ ವಿಶಿಷ್ಟವಾದ ಕಾಲೋಚಿತ ಹೂವುಗಳಿಂದ ಮತ್ತು ಔಷಧೀಯ ಗುಣಗಳನ್ನು ಹೊಂದಿರುವ ಹೂಗಳಿಂದ ಗುಮ್ಮಟದ ಆಕಾರದಲ್ಲಿ (ಗೋಪುರ) ಆಕಾರದಲ್ಲಿ ನಿರ್ಮಿಸಿ ಪೂಜಿಸಲಾಗುತ್ತದೆ. ತೆಲುಗಿನಲ್ಲಿ, 'ಬತುಕಮ್ಮ' ಎಂದರೆ 'ಅಮ್ಮನಂತಿರುವ ನವಶಕ್ತಿ ಜೀವಂತವಾಗಿ ಬಂದಳು' ಎಂದರ್ಥ.
ತೆಲುಗು ನಾಡಿನಲ್ಲಿ 'ಬತುಕಮ್ಮ' ಆಚರಣೆ ಸಂಭ್ರಮ
ಖ್ಯಾತ ಸಂಗೀತ ಸಂಯೋಜಕ, ಆಸ್ಕರ್ ಅವಾರ್ಡ್ ವಿಜೇತ ಎ.ಆರ್ ರೆಹಮಾನ್ ಅವರ ರಾಗ ಸಂಯೋಜನೆಯಲ್ಲಿ ಬತುಕಮ್ಮ ಹಾಡು ರಿಲೀಸ್ ಆಗಿದೆ. ತೆಲಗು ಚಿತ್ರದ ಡೈರೆಕ್ಟರ್ ಗೌತಮ್ ವಾಸುದೇವ್ ಹಾಗೂ ಎಂಎಲ್ಸಿ ಕೆ. ಕವಿತಾ ಜೊತೆಯಾಗಿ ಈ ಹಾಡು ರಿಲೀಸ್ ಮಾಡಿದ್ದಾರೆ.
ತೆಲಂಗಾಣ ಹಾಗೂ ಆಂಧ್ರದಲ್ಲಿ ನಾಳೆಯಿಂದ ಬತುಕಮ್ಮ ಹಬ್ಬದ ಸಂಭ್ರಮ ಆರಂಭಗೊಳ್ಳಲಿದ್ದು, ಸುಮಾರು 9 ದಿನಗಳ ಕಾಲ ಪ್ರತಿ ಮನೆಯಲ್ಲೂ ಸಂಭ್ರಮಾಚರಣೆ ಮನೆ ಮಾಡಲಿದೆ.