ಕರ್ನಾಟಕ

karnataka

ETV Bharat / bharat

ಬಾರ್ಜ್​ P-305 ದುರಂತ: 61 ಮೃತದೇಹಗಳು ಪತ್ತೆ.. ಕೊಳೆತ ಸ್ಥಿತಿಯಲ್ಲಿ ಹಲವು ಶವಗಳು - Mumbai Police

ತೌಕ್ತೆ ಚಂಡಮಾರುತದ ಆರ್ಭಟದಿಂದಾಗಿ ಮುಂಬೈ ತಟದ ಅರಬ್ಬೀ ಸಮುದ್ರದಲ್ಲಿ P-305 ಬೋಟ್ ಕೊಚ್ಚಿಹೋಗಿ ನಡೆದ ದುರಂತದಲ್ಲಿ 61 ಮಂದಿ ಮೃತಪಟ್ಟಿದ್ದಾರೆ.

Barge P305 incident
ಬಾರ್ಜ್​ P-305 ದುರಂತ

By

Published : May 22, 2021, 12:03 PM IST

ಮುಂಬೈ (ಮಹಾರಾಷ್ಟ್ರ): ಮುಂಬೈ ಸಮುದ್ರದಿಂದ ಮತ್ತೆ 10 ಮೃತದೇಹಗಳನ್ನು ಭಾರತೀಯ ನೌಕಾಪಡೆ ಹೊರತೆಗೆದಿದ್ದು, ಬಾರ್ಜ್​ P-305 ದುರಂತದಲ್ಲಿ 61 ಮಂದಿ ಮೃತಪಟ್ಟಿರುವುದು ದೃಢವಾಗಿದೆ.

ಮರಣೋತ್ತರ ಪರೀಕ್ಷೆ ಮತ್ತು ಇತರ ವಿಧಿವಿಧಾನಗಳ ನಂತರ 61ರ ಪೈಕಿ 26 ಮೃತದೇಹಗಳನ್ನು ಮೃತರ ಸಂಬಂಧಿಕರಿಗೆ ಹಸ್ತಾಂತರಿಸಲಾಗಿದೆ. ಆದರೆ ಬೋಟ್​ ದುರಂತ ನಡೆದು ಐದು ದಿನಗಳು ಕಳೆದಿದ್ದು, ಸಾಕಷ್ಟು ಶವಗಳು ಕೊಳೆತ ಮತ್ತು ಗುರುತಿಸಲಾಗದ ಸ್ಥಿತಿಯಲ್ಲಿ ಪತ್ತೆಯಾಗುತ್ತಿವೆ. ಹೀಗಾಗಿ ಸಂಬಂಧಿಕರ ಡಿಎನ್‌ಎ ಮಾದರಿಯನ್ನು ಪಡೆಯಲಾಗುತ್ತಿದೆ ಎಂದು ಮುಂಬೈ ಪೊಲೀಸರು ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: ನೌಕಾ ದುರಂತ: ​ಮೃತರ ಕುಟುಂಬಕ್ಕೆ ಪರಿಹಾರ ಘೋಷಿಸಿದ ಒಎನ್‌ಜಿಸಿ, ಅಫ್ಕಾನ್‌

ಮೇ 17ರಂದು ತೌಕ್ತೆ ಚಂಡಮಾರುತದ ಆರ್ಭಟದಿಂದಾಗಿ ಮುಂಬೈ ತಟದ ಅರಬ್ಬೀ ಸಮುದ್ರದಲ್ಲಿ P-305 ಬೋಟ್​ ಕೊಚ್ಚಿಹೋಗಿತ್ತು. ನೌಕೆಯಲ್ಲಿದ್ದ 261 ಜನರ ಪೈಕಿ 188 ಮಂದಿಯನ್ನು ರಕ್ಷಿಸಲಾಗಿದ್ದು, ಈವರೆಗೆ 61 ಜನರ ಮೃತದೇಹ ಸಿಕ್ಕಿದೆ. ಉಳಿದವರಿಗಾಗಿ ನೌಕಾಪಡೆ ಹಾಗೂ ವಾಯುಪಡೆ ರಕ್ಷಣಾ-ಶೋಧ ಕಾರ್ಯಾಚರಣೆ ಮುಂದುವರೆಸಿದೆ.

ನೌಕಾ ದುರಂತದ ಮೃತರ ಪ್ರತಿ ಕುಟುಂಬಕ್ಕೆ 35 ರಿಂದ 75 ಲಕ್ಷ ರೂಪಾಯಿವರೆಗೆ ಪರಿಹಾರ ನೀಡುವುದಾಗಿ ಮುಂಬೈ ಮೂಲದ ನಿರ್ಮಾಣ ಮತ್ತು ಎಂಜಿನಿಯರಿಂಗ್ ಕಂಪನಿಯಾದ ಅಫ್ಕಾನ್ಸ್ ಇನ್ಫ್ರಾಸ್ಟ್ರಕ್ಚರ್ ಲಿಮಿಟೆಡ್ ಘೋಷಿಸಿದೆ. ಮೃತರ ಮತ್ತು ನಾಪತ್ತೆಯಾದವರ ಕುಟುಂಬಕ್ಕೆ ತಲಾ 2 ಲಕ್ಷ ರೂ. ಹಾಗೂ ಬದುಕುಳಿದವರಿಗೆ ತಲಾ 1 ಲಕ್ಷ ರೂ. ಪರಿಹಾರ ನೀಡುವುದಾಗಿ ತೈಲ ಮತ್ತು ನೈಸರ್ಗಿಕ ಅನಿಲ ನಿಗಮ (ಒಎನ್‌ಜಿಸಿ) ತಿಳಿಸಿದೆ.

ABOUT THE AUTHOR

...view details