ಕರ್ನಾಟಕ

karnataka

ನೌಕಾ ದುರಂತ: ​ಮೃತರ ಕುಟುಂಬಕ್ಕೆ ಪರಿಹಾರ ಘೋಷಿಸಿದ ಒಎನ್‌ಜಿಸಿ, ಅಫ್ಕಾನ್‌

By

Published : May 22, 2021, 8:08 AM IST

ಬಾರ್ಜ್​ P-305 ದುರಂತದ ಮೃತರ ಪ್ರತಿ ಕುಟುಂಬಕ್ಕೆ 35 ರಿಂದ 75 ಲಕ್ಷ ರೂಪಾಯಿವರೆಗೆ ಪರಿಹಾರ ನೀಡುವುದಾಗಿ ಅಫ್ಕಾನ್ಸ್, ಮೃತರ ಮತ್ತು ನಾಪತ್ತೆಯಾದವರ ಕುಟುಂಬಕ್ಕೆ ತಲಾ 2 ಲಕ್ಷ ರೂ. ಹಾಗೂ ಬದುಕುಳಿದವರಿಗೆ ತಲಾ 1 ಲಕ್ಷ ರೂ. ಪರಿಹಾರ ನೀಡುವುದಾಗಿ ಒಎನ್‌ಜಿಸಿ ತಿಳಿಸಿದೆ.

Cyclone Tauktae
ನೌಕಾ ದುರಂತ

ಮುಂಬೈ:ತೌಕ್ತೆ ಚಂಡಮಾರುತದ ಅಬ್ಬರದಿಂದುಂಟಾದ ಬಾರ್ಜ್​ P-305 ದುರಂತದಲ್ಲಿ ಮೃತಪಟ್ಟವರ ಕುಟುಂಬಕ್ಕೆ ಮುಂಬೈ ಮೂಲದ ನಿರ್ಮಾಣ ಮತ್ತು ಎಂಜಿನಿಯರಿಂಗ್ ಕಂಪನಿಯಾದ ಅಫ್ಕಾನ್ಸ್ ಇನ್ಫ್ರಾಸ್ಟ್ರಕ್ಚರ್ ಲಿಮಿಟೆಡ್ ಹಾಗೂ ತೈಲ ಮತ್ತು ನೈಸರ್ಗಿಕ ಅನಿಲ ನಿಗಮ (ಒಎನ್‌ಜಿಸಿ) ಪರಿಹಾರ ನೀಡುವುದಾಗಿ ಘೋಷಿಸಿವೆ.

ಮೇ 17ರಂದು ತೌಕ್ತೆ ಚಂಡಮಾರುತದ ಆರ್ಭಟದಿಂದಾಗಿ ಮುಂಬೈ ತಟದ ಅರಬ್ಬೀ ಸಮುದ್ರದಲ್ಲಿ P-305 ನೌಕೆ​ ಕೊಚ್ಚಿಹೋಗಿತ್ತು. ನೌಕೆಯಲ್ಲಿದ್ದ 261 ಜನರ ಪೈಕಿ 188 ಮಂದಿಯನ್ನು ರಕ್ಷಿಸಲಾಗಿದ್ದು, ಈವರೆಗೆ 51 ಜನರ ಮೃತದೇಹಗಳು ಪತ್ತೆಯಾಗಿವೆ. ಉಳಿದವರಿಗಾಗಿ ನೌಕಾಪಡೆ ರಕ್ಷಣಾ-ಶೋಧ ಕಾರ್ಯಾಚರಣೆ ಮುಂದುವರೆಸಿದೆ.

ಇದನ್ನೂ ಓದಿ: ಪಿ–305 ಬಾರ್ಜ್‌ ದುರಂತದಲ್ಲಿ 51 ಜನ ಸಾವು: ಶೋಧಕಾರ್ಯ ಮುಂದುವರಿಕೆ

P-305, ಇದು ಅಫ್ಕಾನ್ಸ್ ಕಂಪನಿಗೆ ಸೇರಿದ ಬಾರ್ಜ್​ ಆಗಿದೆ. ಇದೀಗ ಮೃತರ ಪ್ರತಿ ಕುಟುಂಬಕ್ಕೆ 35 ರಿಂದ 75 ಲಕ್ಷ ರೂಪಾಯಿವರೆಗೆ ಪರಿಹಾರ ನೀಡಲಾಗುವುದು. ದುರಂತದಲ್ಲಿ ಸಾವನ್ನಪ್ಪಿದ ಉದ್ಯೋಗಿಗಳ ಮುಂದಿನ ಸೇವಾವಧಿಯ 10 ವರ್ಷಗಳವರೆಗಿನ ವೇತನವನ್ನು ಪರಿಹಾರ ಮತ್ತು ವಿಮೆ ಮೂಲಕ ನೀಡಲಿದ್ದೇವೆ. ಅಲ್ಲದೇ ಟ್ರಸ್ಟ್​ವೊಂದನ್ನು ಸ್ಥಾಪಿಸಿ ಮೃತ ಸಿಬ್ಬಂದಿಯ ಮಕ್ಕಳ ಶಿಕ್ಷಣಕ್ಕೆ ಸಹಾಯವಾಗಲು ವಿದ್ಯಾರ್ಥಿ ವೇತನವನ್ನು ನೀಡಲಾಗುವುದು ಎಂದು ಅಫ್ಕಾನ್ಸ್ ತಿಳಿಸಿದೆ.

ಇದನ್ನೂ ಓದಿ:'ನಿರ್ಲಕ್ಷ್ಯದಿಂದ ದುರಂತ': ಇಂಜಿನಿಯರ್​ ದೂರು ಆಧರಿಸಿ P-305 ನೌಕೆ ಕ್ಯಾಪ್ಟನ್ ವಿರುದ್ಧ FIR

ಮೃತರ ಮತ್ತು ನಾಪತ್ತೆಯಾದವರ ಕುಟುಂಬಕ್ಕೆ ತಲಾ 2 ಲಕ್ಷ ರೂ. ಹಾಗೂ ಬದುಕುಳಿದವರಿಗೆ ತಲಾ 1 ಲಕ್ಷ ರೂ. ಪರಿಹಾರ ನೀಡುವುದಾಗಿ ತೈಲ ಮತ್ತು ನೈಸರ್ಗಿಕ ಅನಿಲ ನಿಗಮ ಘೋಷಿಸಿದೆ. ಬೋಟ್​ನಲ್ಲಿದ್ದ ಯಾವೊಬ್ಬ ನೌಕರರೂ ಕೂಡ ಒಎನ್‌ಜಿಸಿ ಸಿಬ್ಬಂದಿಯಾಗಿರಲಿಲ್ಲ. ಆದರೆ ಅವರೆಲ್ಲರೂ ಒಎನ್‌ಜಿಸಿ ಯೋಜನೆಗೆಗಾಗಿ ಕೆಲಸ ಮಾಡುತ್ತಿದ್ದರು.

ABOUT THE AUTHOR

...view details