ಕರ್ನಾಟಕ

karnataka

ETV Bharat / bharat

ಯುವತಿಯರ ಬಾಡಿ ಶೇಪ್​ ನೋಡಿ ದರ ನಿಗದಿ..ವೇಶ್ಯಾವಾಟಿಕೆ ಜಾಲ ಭೇದಿಸಿ, ಒಬ್ಬನ ಬಂಧಿಸಿದ ಪೊಲೀಸರು - ದೇಹದ ಆಕಾರದ ಮೇಲೆ ದರ ನಿಗದಿ

ಹೈದರಾಬಾದ್​ ಮತ್ತು ಕರ್ನಾಟಕದ ನಡುವೆ ವಿಸ್ತರಿಸಿದ್ದ ವೇಶ್ಯಾವಾಟಿಕೆ ಜಾಲವನ್ನು ಪೊಲೀಸರು ಭೇದಿಸಿದ್ದಾರೆ. ಯುವತಿಯರ ದೇಹದ ಆಕಾರದ ಮೇಲೆ ದರ ನಿಗದಿ ಮಾಡುವ ದಂಧೆಕೋರರನ್ನು ಬಂಧಿಸಲಾಗಿದೆ.

price-is-based-on-body-shape
ಯುವತಿಯರ ಬಾಡಿ ಶೇಪ್​ ನೋಡಿ ದರ ನಿಗದಿ

By

Published : Dec 5, 2022, 12:46 PM IST

ಹೈದರಾಬಾದ್:ಬಡತನ, ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ ಯುವತಿಯರನ್ನೇ ಬಂಡವಾಳವನ್ನಾಗಿ ಮಾಡಿಕೊಂಡು, ಅವರ ನಗ್ನ ಫೋಟೋ ತೆಗೆದು ವೇಶ್ಯಾವಾಟಿಕೆಗೆ ತಳ್ಳಲು ಅವರ ದೇಹದ ಆಕಾರದ ಮೇಲೆ ದರ ನಿಗದಿ ಮಾಡುತ್ತಿದ್ದ ಗ್ಯಾಂಗ್​ ಅನ್ನು ಹೈದರಾಬಾದ್​ ಪೊಲೀಸರು ಭೇದಿಸಿದ್ದಾರೆ. ಪ್ರಕರಣದಲ್ಲಿ ಒಬ್ಬ ಕೀಚಕನನ್ನು ಬಂಧಿಸಲಾಗಿದೆ.

ಬಡ ಮಕ್ಕಳನ್ನೇ ಗುರಿಯಾಗಿಸಿಕೊಂಡು ದಂಧೆ ಮಾಡುತ್ತಿದ್ದ ಕೀಚಕರ ಬಗ್ಗೆ ಸಮಾಜಸೇವಕರೊಬ್ಬರು ನೀಡಿದ ದೂರಿನ ಮೇರೆಗೆ ಪೊಲೀಸರು ಕಾರ್ಯಾಚರಣೆ ನಡೆಸಿದ್ದಾರೆ. ಬಂಧಿತನ ಮೊಬೈಲ್​ನಲ್ಲಿ ಹಲವು ಯುವತಿಯರ ನಗ್ನ ಚಿತ್ರಗಳು, ವಿಡಿಯೋಗಳು ಇವೆ. ಈತನ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.

ಬಂಧಿತ ಆರೋಪಿ ಸೈಯದ್​ ಹುಸೇನ್​

ಹೇಗೆ ನಡೀತಿತ್ತು ದಂಧೆ:ಪ್ರಕರಣದಲ್ಲಿ ಬಂಧಿತನಾಗಿರುವ ಕರ್ನಾಟಕದ ಬೀದರ್ ಜಿಲ್ಲೆಯ ಬಸವಕಲ್ಯಾಣ ತಾಲೂಕಿನ ಸೈಯದ್ ಹುಸೇನ್ (35) ಲಾರಿ ಚಾಲಕನಾಗಿದ್ದು, ಕಲಬುರಗಿಯ ವೇಶ್ಯಾಗೃಹದ ನಿರ್ವಾಹಕನಾದ ಗುಲಾಮ್‌ನಿಗೆ ಈ ದಂಧೆಯಲ್ಲಿ ನೆರವಾಗುತ್ತಿದ್ದ. ಗುಲಾಮ್​ನ ನಿರ್ದೇಶನದಂತೆ ಹೈದರಾಬಾದ್​ನಲ್ಲಿ ಯುವತಿಯರನ್ನು ಬುಕ್​ ಮಾಡಲು ಕಾರ್ಯಾಚರಣೆ ನಡೆಸುತ್ತಿದ್ದ.

ಸೈಯದ್​ ಹುಸೇನ್​ ತನ್ನ ಪತ್ನಿಯ ತಂಗಿಯ ನೆರವಿನಿಂದ ಮನೆಯೊಂದನ್ನು ಬಾಡಿಗೆಗೆ ಪಡೆದು, ಅದರಲ್ಲಿ ಯುವತಿಯರನ್ನು ವೇಶ್ಯಾವಾಟಿಕೆಗೆ ಬಳಸಿಕೊಳ್ಳುವ ಕಾರ್ಯದಲ್ಲಿ ತೊಡಗಿದ್ದ. ಬಡ ಮತ್ತು ಆರ್ಥಿಕವಾಗಿ ನಲುಗಿದ ಕುಟುಂಬದ ಯುವತಿಯರನ್ನು ರೂಮಿಗೆ ಕರೆದುಕೊಂಡು ಬಂದು ಅವರ ನಗ್ನ ಚಿತ್ರ ಮತ್ತು ವಿಡಿಯೋಗಳನ್ನು ಮಾಡುತ್ತಿದ್ದರು. ಬಳಿಕ ಅವರ ದೇಹಾಕಾರದ ಮೇಲೆ ಇಂತಿಷ್ಟು ಹಣ ನಿಗದಿ ಮಾಡಿ ಅವರನ್ನು ವೇಶ್ಯಾವಾಟಿಕೆಗೆ ಕರೆದೊಯ್ಯುತ್ತಿದ್ದರು.

ಹೇಗೆ ಹೊರಬಿತ್ತು ಪ್ರಕರಣ:ಯುವತಿಯರ ನಗ್ನ ಚಿತ್ರ, ವಿಡಿಯೋಗಳನ್ನು ಬಂಧಿತ ಹುಸೇನ್​ ಕಲಬುರಗಿಯ ಗುಲಾಮನಿಗೆ ಕಳುಹಿಸುತ್ತಿದ್ದ. ಆತ ಪರಿಶೀಲಿಸಿ ಲಲನೆಯರ ದೇಹಾಕಾರದ ಮೇಲೆ ಹಣವನ್ನು ನಿಗದಿ ಮಾಡುತ್ತಿದ್ದ. ಹೀಗೆ 10 ಕ್ಕೂ ಅಧಿಕ ಯುವತಿಯರನ್ನು ಈ ದಂಧೆಗೆ ಬಳಸಿಕೊಳ್ಳುವ ಯತ್ನ ನಡೆದಿತ್ತು.

ಆರೋಪಿ ಹುಸೇನ್​ ಇದ್ದ ಮನೆಗೆ ಯುವತಿಯರು ದಿನವೂ ಬಂದು ಹೋಗುತ್ತಿದ್ದನ್ನು ಕಂಡ ಸಮಾಜ ಸೇವಕರೊಬ್ಬರು ಅನುಮಾನಿಸಿ, ಮಹಿಳೆಯೊಬ್ಬಳನ್ನು ಇನ್ನೊಬ್ಬಾಕೆಯ ಜೊತೆಗೆ ಕಳುಹಿಸಲಾಗಿತ್ತು. ಈ ವೇಳೆ ಆಕೆ ಕುಳ್ಳಗಿರುವ ಕಾರಣ ಹುಸೇನ್​ ತಿರಸ್ಕರಿಸಿದ್ದ. ವೇಶ್ಯಾವಾಟಿಕೆಗೆ ಮಹಿಳೆಯರನ್ನು ಬಳಕೆ ಮಾಡುವ ದಂಧೆ ದೃಢಪಟ್ಟ ಹಿನ್ನೆಲೆಯಲ್ಲಿ ಸಮಾಜ ಸೇವಕ ಪೊಲೀಸರಿಗೆ ದೂರು ನೀಡಿದ್ದಾನೆ.

ದೂರಿನ ಆಧಾರದ ಮೇಲೆ ದಾಳಿ ನಡೆಸಿದ ಪೊಲೀಸರು ಪ್ರಮುಖ ಆರೋಪಿ ಹುಸೇನ್​ನನ್ನು ಬಂಧಿಸಿದ್ದಾರೆ. ಬಂಧಿತ ಮೊಬೈಲ್​ ಪರಿಶೀಲಿಸಿದಾಗ ದೊಡ್ಡ ಜಾಲವೇ ಬಯಲಾಗಿದೆ. ಈ ಗ್ಯಾಂಗ್​ ಬೀದರ್​ನಲ್ಲೂ ವೇಶ್ಯಾವಾಟಿಕೆ ಅಡ್ಡೆ ನಡೆಸುತ್ತಿದ್ದದ್ದು ಪತ್ತೆಯಾಗಿದೆ.

ಓದಿ:ತಮಾಷೆ ತಂದ ಆಪತ್ತು.. ಬಾಯಿಗೆ ಖುರ್ಪಿ ತುರುಕಿ ಪೇಚಿಗೆ ಸಿಲುಕಿದ ಯುವಕ

ABOUT THE AUTHOR

...view details