ಬಾರಾಮುಲ್ಲಾ(ಜಮ್ಮು ಕಾಶ್ಮೀರ):ಕಣಿವೆ ರಾಜ್ಯಗಳಲ್ಲಿ ಉಗ್ರರ ಉಪಟಳ ಹೆಚ್ಚಾಗಿದೆ. ಇದಕ್ಕೆ ಕಡಿವಾಣ ಹಾಕಲು ನಮ್ಮ ಸೇನೆ ಸದಾ ಸಕ್ರಿಯವಾಗಿರುತ್ತದೆ. ಭಾನುವಾರದಂದು ಜಂಟಿ ಕಾರ್ಯಾಚರಣೆ ನಡೆಸಿದ ಭದ್ರತಾ ಪಡೆಗಳು ಇಬ್ಬರು ಶಂಕಿತ ಉಗ್ರರನ್ನು ಬಂಧಿಸಿವೆ. ಲಷ್ಕರ್ ಜೊತೆ ನಂಟು ಹೊಂದಿರುವ ಇಬ್ಬರು ಶಂಕಿತರನ್ನು ಭದ್ರತಾ ಪಡೆಯ ಸೈನಿಕರು ಬಂಧಿಸಿದ್ದಾರೆ. ಬಂಧಿತ ಆರೋಪಿಗಳಿಂದ ಅಪಾರ ಪ್ರಮಾಣದ ಶಸ್ತ್ರಾಸ್ತ್ರ ಮತ್ತು ಮದ್ದು ಗುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ. ತನಿಖಾ ಸಂಸ್ಥೆ ಇಬ್ಬರನ್ನೂ ಕೂಲಂಕಷವಾಗಿ ವಿಚಾರಣೆ ನಡೆಸುತ್ತಿದೆ. ಇವರ ಜಾಲದಲ್ಲಿ ಇನ್ನೂ ಎಷ್ಟು ಮಂದಿ ಭಾಗಿಯಾಗಿದ್ದಾರೆ ಎಂಬುದನ್ನು ಪತ್ತೆ ಹಚ್ಚಲು ತನಿಖಾ ಪ್ರಯತ್ನಿಸುತ್ತಿದೆ.
ಮಾಹಿತಿಯ ಪ್ರಕಾರ, ಜಮ್ಮು ಕಾಶ್ಮೀರ ಪೊಲೀಸರು ಗುಪ್ತಚರ ಆಧಾರದ ಮೇಲೆ ಜಮ್ಮು ಕಾಶ್ಮೀರದ ಬಾರಾಮುಲ್ಲಾದಲ್ಲಿ ಲಷ್ಕರ್‌ನ ಇಬ್ಬರು ಒಜಿಡಬ್ಲ್ಯೂಗಳನ್ನು ಬಂಧಿಸಿದ್ದಾರೆ. ಪೊಲೀಸರ ಪ್ರಕಾರ, ಶಂಕಿತರು ವಾಗುರಾ ಸೇತುವೆಯತ್ತ ನಡೆದುಕೊಂಡು ಹೋಗುತ್ತಿರುವುದು ಕಂಡುಬಂದಿದೆ. ಭದ್ರತಾ ಪಡೆಗಳನ್ನು ನೋಡಿದ ಬಳಿಕ ಇಬ್ಬರು ಆರೋಪಿಗಳು ಅಲ್ಲಿಂದ ಪರಾರಿಯಾಗಲು ಯತ್ನಿಸಿದ್ದಾರೆ. ಅಲರ್ಟ್ ಆದ ಜಮ್ಮು-ಕಾಶ್ಮೀರ ಪೊಲೀಸರು ಮತ್ತು ಭದ್ರತಾ ಪಡೆಗಳು ಇಬ್ಬರನ್ನೂ ಹಿಡಿದಿವೆ. ಬಂಧಿತರನ್ನು ತೌಸೀಫ್ ರಂಜಾನ್ ಭಟ್ ಮತ್ತು ಮೊಯಿನ್ ಅಮೀನ್ ಭಟ್ ಅಲಿಯಾಸ್ ಮೋಮಿನ್ ಎಂದು ಗುರುತಿಸಲಾಗಿದೆ.