ಕರ್ನಾಟಕ

karnataka

ETV Bharat / bharat

ಡಿಸೆಂಬರ್ 5ರ ರಾತ್ರಿ 8 ಗಂಟೆಗೆ ತಾಯಿ ನಿಧನವಾಗಲಿದ್ದಾರೆ, ಎರಡು ದಿನ ರಜೆ ಬೇಕು: ಶಿಕ್ಷಕನ ಪತ್ರ ವೈರಲ್​ - ರಜೆ ಪತ್ರಗಳು ವೈರಲ್​

ಬಿಹಾರದಲ್ಲಿ ಶಾಲಾ ಶಿಕ್ಷಕರು ಬರೆದ ರಜೆ ಪತ್ರಗಳು ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಹರಿದಾಡುತ್ತಿವೆ.

banka-school-teacher-leave-application-goes-viral
ಡಿಸೆಂಬರ್ 5ರ ರಾತ್ರಿ 8 ಗಂಟೆಗೆ ತಾಯಿ ನಿಧನವಾಗಲಿದ್ದಾರೆ, ಎರಡು ದಿನ ರಜೆ ಬೇಕು: ಶಿಕ್ಷಕನ ಪತ್ರ ವೈರಲ್​

By

Published : Dec 2, 2022, 6:35 PM IST

ಬಂಕಾ (ಬಿಹಾರ): ಸರ್ಕಾರಿ ನೌಕಕರು ಮತ್ತು ಇತರ ಉದ್ಯೋಗಿಗಳು ರಜೆ ಪಡೆಯಲು ಕೆಲವೊಮ್ಮೆ ಸುಳ್ಳು ಹೇಳುವುದು ಸಾಮಾನ್ಯ. ಆದರೆ, ಬಿಹಾರದ ಶಿಕ್ಷಕರು ಬರೆದ ಕೆಲ ರಜೆ ಪತ್ರಗಳು ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿವೆ.

ತಾಯಿ ನಿಧನವಾಗಲಿದ್ದಾರೆ, ಎರಡು ದಿನ ರಜೆ ಬೇಕು: ಬಂಕಾ ಜಿಲ್ಲೆಯ ಕಟೋರಿಯಾದ ಶಿಕ್ಷಕಯೊಬ್ಬರು ಬರೆದ ರಜೆ ಪತ್ರವಂತೂ ವಿಚಿತ್ರವಾಗಿದೆ. ಅಜಯ್ ಕುಮಾರ್ ಎಂಬುವವರ ಹೆಸರಿನಲ್ಲಿ ರಜೆ ಅರ್ಜಿ ವೈರಲ್​ ಆಗಿದ್ದು, ನನ್ನ ತಾಯಿ ಡಿಸೆಂಬರ್ 5ರ ಸೋಮವಾರ ರಾತ್ರಿ 8 ಗಂಟೆಗೆ ನಿಧನವಾಗಲಿದ್ದಾರೆ. ಅದಕ್ಕಾಗಿಯೇ ನಾನು ಡಿಸೆಂಬರ್ 6 ಮತ್ತು ಡಿಸೆಂಬರ್ 7 ರವರೆಗೆ ಅವರ ಅಂತ್ಯಕ್ರಿಯೆಗೆ ನನ್ನ ಶಾಲೆಗೆ ಗೈರುಹಾಜರಾಗುತ್ತೇನೆ. ಆದುದರಿಂದ ದಯವಿಟ್ಟು ನನ್ನ ರಜೆಯನ್ನು ಅನುಮೋದಿಸಬೇಕೆಂದು ಬರೆಯಲಾಗಿದೆ.

ನಾನು ಅನಾರೋಗ್ಯಕ್ಕೆ ಒಳಗಾಗುತ್ತೇನೆ, ಎರಡು ದಿನ ರಜೆ ಕೊಡಿ: ಅದೇ ರೀತಿಯಾಗಿ ಬರಹತ್‌ನ ಖಾದಿಯಾರ ಶಿಕ್ಷಕ ರಾಜ್ ಗೌರವ್ ಬರೆದಿರುವ ಮತ್ತೊಂದು ರಜೆ ಅರ್ಜಿ ಪತ್ರ ಸಹ ವೈರಲ್ ಆಗಿದೆ. ಅದರಲ್ಲಿ ಡಿಸೆಂಬರ್ 4 ಮತ್ತು ಡಿಸೆಂಬರ್ 5 ರಂದು ನಾನು ಅನಾರೋಗ್ಯಕ್ಕೆ ಒಳಗಾಗುತ್ತೇನೆ. ಇದರಿಂದ ಶಾಲೆಗೆ ಬರಲು ಸಾಧ್ಯವಾಗುತ್ತಿಲ್ಲ. ಅದಕ್ಕಾಗಿಯೇ ಸಾಂದರ್ಭಿಕ ರಜೆಯನ್ನು ಅನುಮೋದಿಸಬೇಕೆಂದು ರಜೆ ಕೋರಲಾಗಿದೆ.

ಹೊಟ್ಟೆನೋವು ಬರುವ ಸಾಧ್ಯತೆ ಇದೆ, ಮೂರು ದಿನ ರಜೆ ನೀಡಿ: ಕಟೋರಿಯಾದ ಜಮದಾಹದ ಶಿಕ್ಷಕ ನೀರಜ್ ಕುಮಾರ್ ಬರೆದಿರುವ ರಜೆ ಪತ್ರ ಇನ್ನೂ ವಿಚಿತ್ರವಾಗಿದೆ. ನಾನು ಡಿಸೆಂಬರ್ 7ರಂದು ಮದುವೆ ಸಮಾರಂಭದಲ್ಲಿ ಭಾಗವಹಿಸಲಿದ್ದೇನೆ. ಮದುವೆ ಸಮಾರಂಭದಲ್ಲಿ ನಾನು ಊಟವನ್ನು ತುಂಬಾ ಸವಿಯುತ್ತೇನೆ ಎಂದು ನಿಮಗೆ ತಿಳಿದಿದೆ. ತುಂಬಾ ಊಟ ಸವಿದ ನಂತರ ಹೊಟ್ಟೆ ಉರಿಯುವುದು ನಿಶ್ಚಿತ. ಅದಕ್ಕಾಗಿಯೇ ದಯವಿಟ್ಟು ಮೂರು ದಿನಗಳ ರಜೆ ಕೊಡಿ ಎಂದು ಮುಂಚಿತವಾಗಿ ಮನವಿ ಮಾಡುತ್ತೇನೆ ಎಂದು ಪತ್ರ ಉಲ್ಲೇಖಿಸಲಾಗಿದೆ.

ಆಯುಕ್ತರ ಹೊಸ ಆದೇಶ: ಭಾಗಲ್ಪುರ ಆಯುಕ್ತ ದಯಾನಿಧನ್ ಪಾಂಡೆ ಅವರ ಹೊಸ ಆದೇಶದ ನಂತರ ಇಂತಹ ರಜೆ ಅರ್ಜಿಗಳು ಬರುತ್ತಿವೆ ಎನ್ನಲಾಗಿದೆ. ಕ್ಯಾಶುಯಲ್ ರಜೆಗೆ ಮುನ್ನ ಕಡ್ಡಾಯವಾಗಿ ಅನುಮೋದನೆ ಪಡೆಯಬೇಕು ಎಂದು ಮೂರು ದಿನಗಳ ಹಿಂದೆ ಅಂದರೆ ನವೆಂಬರ್ 29ರಂದು ಆದೇಶ ಹೊರಡಿಸಲಾಗಿದೆ.

ಶಾಲೆಯಲ್ಲಿ ಒಂದಕ್ಕಿಂತ ಹೆಚ್ಚು ಶಿಕ್ಷಕರಿಗೆ ಏಕಕಾಲದಲ್ಲಿ ರಜೆ ನೀಡಿರುವುದು ಬೋಧನಾ ಕೆಲಸದ ಮೇಲೆ ಪರಿಣಾಮ ಬೀರಿದೆ. ಇಂತಹ ಪರಿಸ್ಥಿತಿಯಲ್ಲಿ ಶಿಕ್ಷಕರಿಗೆ ಒಟ್ಟಿಗೆ ರಜೆ ನೀಡಬಾರದು. ಇದರೊಂದಿಗೆ ಮುಖ್ಯೋಪಾಧ್ಯಾಯರು ಬ್ಲಾಕ್ ಡೆವಲಪ್ಮೆಂಟ್ ಅಧಿಕಾರಿಯ ಅನುಮೋದನೆಯ ನಂತರವೇ ರಜೆ ಮಂಜೂರು ಮಾಡಬೇಕು ಎಂದೂ ಆದೇಶದಲ್ಲಿ ಉಲ್ಲೇಖಿಸಲಾಗಿದೆ.

ಆದರೆ, ಕ್ಯಾಶುಯಲ್ ರಜೆಗೆ ಮುನ್ನ ಕಡ್ಡಾಯವಾಗಿ ಅನುಮೋದನೆ ಪಡೆಯಬೇಕೆಂಬ ಅಂಶವನ್ನು ತಪ್ಪಾಗಿ ಅರ್ಥೈಸಿಕೊಂಡ ಶಿಕ್ಷಕರು ರಜೆ ಪಡೆಯಲು ಇಂತಹ ನೆಪಗಳನ್ನು ಮುಂಚಿತವಾಗಿಯೇ ಸೃಷ್ಟಿಕೊಂಡು ಪತ್ರಗಳನ್ನು ಬರೆದಿದ್ದಾರೆ ಎಂದು ಹೇಳಲಾಗುತ್ತಿದೆ. ಸದ್ಯ ಆಯುಕ್ತರ ಹೊಸ ಆದೇಶ ಪತ್ರ ಮತ್ತು ಶಿಕ್ಷಕರು ರಜೆ ಪತ್ರಗಳು ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಹರಿದಾಡುತ್ತಿವೆ.

ಇದನ್ನೂ ಓದಿ:8ನೇ ತರಗತಿ ಬಾಲಕಿಯ ಮೇಲೆ ಅತ್ಯಾಚಾರ: ಸಹಪಾಠಿಗಳಿಂದಲೇ ಕೃತ್ಯ!

ABOUT THE AUTHOR

...view details