ಕರ್ನಾಟಕ

karnataka

ETV Bharat / bharat

ಗ್ರಾಹಕರ ಗಮನಕ್ಕೆ: ಇಂದಿನಿಂದ ಏ. 4ರವರೆಗೆ ಏಳು ದಿನ ಬ್ಯಾಂಕ್​ ಬಂದ್! - ಇಂದಿನಿಂದ ಏ. 4ರವರೆಗೆ ಏಳು ದಿನ ಬ್ಯಾಂಕ್​ ಬಂದ್

ಇಂದಿನಿಂದ ಏಪ್ರಿಲ್​ 4ರವರೆಗೆ ಖಾಸಗಿ ಹಾಗೂ ಸಹಕಾರಿ ವಲಯದ ಬ್ಯಾಂಕ್​ಗಳು​ ಸಂಪೂರ್ಣವಾಗಿ ಬಂದ್ ಇರಲಿವೆ.

Bank to remain close
Bank to remain close

By

Published : Mar 27, 2021, 6:26 AM IST

ಹೈದರಾಬಾದ್​:ಸಾರ್ವಜನಿಕ ಹಾಗೂ ಖಾಸಗಿ ವಲಯದ ಎಲ್ಲ ಬ್ಯಾಂಕ್​ಗಳು ಇಂದಿನಿಂದ ಮುಂದಿನ ಏಳು ದಿನಗಳ ಕಾಲ ಸಂಪೂರ್ಣವಾಗಿ ಬಂದ್​ ಇರಲಿದ್ದು, ​ಹಣಕಾಸಿನ ವ್ಯವಹಾರಕ್ಕೆ ತೊಂದರೆ ಆಗುವ ಎಲ್ಲ ಲಕ್ಷಣಗಳು ಗೋಚರಿಸುತ್ತಿವೆ.

ಮಾರ್ಚ್​ 27ರಿಂದ ಮಾರ್ಚ್​ 29ರವರೆಗೆ ಬ್ಯಾಂಕ್​ಗಳಿಗೆ ಸತತ ಮೂರು ದಿನ ಬಂದ್ ಇರಲಿವೆ. ಮಾರ್ಚ್​ 27 ನಾಲ್ಕನೇ ಶನಿವಾರ, ಮಾರ್ಚ್​ 28 ರವಿವಾರ ಹಾಗೂ ಮಾರ್ಚ್​ 29ರಂದು ಹೋಳಿ ಹಬ್ಬದ ಪ್ರಯುಕ್ತ ರಜೆ ನೀಡಲಾಗಿದೆ.

ರಾಷ್ಟ್ರೀಯ ರಜಾದಿನಗಳು:

  • 2021ರ ಮಾರ್ಚ್ 27- ನಾಲ್ಕನೇ ಶನಿವಾರ
  • 2021ರ ಮಾರ್ಚ್ 28- ವಾರದ ರಜೆ (ಭಾನುವಾರ)
  • 2021ರ ಮಾರ್ಚ್ 29 ಹೋಳಿ (ಎರಡನೇ ದಿನ)
  • 2021ರ ಮಾರ್ಚ್ 31- 2021ರ ಹಣಕಾಸು ವರ್ಷ ಮುಕ್ತಾಯ
  • 2021ರ ಏಪ್ರಿಲ್ 01- ಬ್ಯಾಂಕ್​ಗಳು ಅಕೌಂಟ್​ ಕ್ಲೋಸಿಂಗ್ ಡೇ
  • 2021ರ ಏಪ್ರಿಲ್ 02 - ಗುಡ್​ ಫ್ರೈಡೇ
  • 2021ರ ಏಪ್ರಿಲ್ 04- ವಾರದ ರಜೆ (ಭಾನುವಾರ)

ಉಳಿದಂತೆ ಮಾರ್ಚ್​ 31 ಹಣಕಾಸು ವರ್ಷ ಮುಕ್ತಾಯಗೊಳ್ಳಲಿದ್ದು, ಅದಕ್ಕಾಗಿ ರಜೆ ಘೋಷಣೆಯಾಗಿದ್ದು, ಉಳಿದಂತೆ 2021ರ ಏಪ್ರಿಲ್​ 1ರಂದು ಅಕೌಂಟ್​ ಕ್ಲೋಸಿಂಗ್ ಡೇ ಹಾಗೂ ಏಪ್ರಿಲ್​​ 2ರಂದು ಗುಡ್​ ಫ್ರೈಡೆ ಹಾಗೂ ಏ 4ರಂದು ಭಾನುವಾರ ರಜೆ ಇರಲಿದೆ. ಆದರೆ ಮಾರ್ಚ್ 30(ಮಂಗಳವಾರ) ಮತ್ತು ಏಪ್ರಿಲ್ 3(ಶನಿವಾರ) ಎರಡು ದಿನಗಳಲ್ಲಿ ಮಾತ್ರ ಬ್ಯಾಂಕ್ ಸೇವೆ ಲಭ್ಯವಿರಲಿದೆ. ಆದರೆ ಬಿಹಾರದಲ್ಲಿ ಬಿಹಾರ ರಾಜ್ಯ ಸಂಸ್ಥಾಪನಾ ದಿನಾಚರಣೆ ಅಂಗವಾಗಿ ಮಾರ್ಚ್ 30ರಂದು ಬ್ಯಾಂಕುಗಳಿಗೆ ರಜೆ ನೀಡಲಾಗಿದೆ.

ABOUT THE AUTHOR

...view details