ಕರ್ನಾಟಕ

karnataka

ETV Bharat / bharat

ಸಿನಿಮೀಯ ಸ್ಟೈಲ್​ನಲ್ಲಿ ಬ್ಯಾಂಕ್​ ದರೋಡೆ.. 2 ಕೋಟಿ ಮೌಲ್ಯದ ಚಿನ್ನ, 31 ಲಕ್ಷ ರೂ.ದೋಚಿದ ಕಳ್ಳರು - ಸಿನಿಮೀಯ ಸ್ಟೈಲ್​ನಲ್ಲಿ ಬ್ಯಾಂಕ್​ ದರೋಡೆ

ಸಿನಿಮೀಯ ರೀತಿಯಲ್ಲಿ ಬ್ಯಾಂಕ್​​​ ಕಳ್ಳತನ ಮಾಡಿರುವ ಐವರು ದುಷ್ಕರ್ಮಿಗಳು ಅಪಾರ ಪ್ರಮಾಣದ ಚಿನ್ನಾಭರಣ ಹಾಗೂ 31 ಲಕ್ಷ ರೂ.ನಗದು ಕದ್ದು ಪರಾರಿಯಾಗಿದ್ದಾರೆ.

Bank robbery at Pimparkhed
Bank robbery at Pimparkhed

By

Published : Oct 21, 2021, 7:00 PM IST

ಪುಣೆ(ಮಹಾರಾಷ್ಟ್ರ): ಬ್ಯಾಂಕ್​​ನೊಳಗೆ ನುಗ್ಗಿರುವ ಕಳ್ಳರು ಸಿನಿಮೀಯ ಸ್ಟೈಲ್​​ನಲ್ಲಿ ದರೋಡೆ ಮಾಡಿದ್ದು, ಕೃತ್ಯದ ದೃಶ್ಯಾವಳಿ ಸಿಸಿಟಿವಿಯಲ್ಲಿ ಸೆರೆಯಾಗಿವೆ. ಕೈಯಲ್ಲಿ ಗನ್​ ಹಿಡಿದುಕೊಂಡು ಸಿಬ್ಬಂದಿಗಳಿಗೆ ಬೆದರಿಕೆ ಹಾಕಿದ್ದು, ದಾಖಲೆಯ 2 ಕೋಟಿ ಮೌಲ್ಯದ ಚಿನ್ನ ಹಾಗೂ 31 ಲಕ್ಷ ರೂ. ನಗದು ಕದ್ದು ಪರಾರಿಯಾಗಿದ್ದಾರೆ.

ಸಿನಿಮೀಯ ಸ್ಟೈಲ್​ನಲ್ಲಿ ಬ್ಯಾಂಕ್​ ದರೋಡೆ ಮಾಡಿದ ಕಳ್ಳರು

ಮಹಾರಾಷ್ಟ್ರದ ಶಿರೂರು​ ತಾಲೂಕಿನ ಪಿಂಪಾರಖೇಡಿಯಲ್ಲಿರುವ ಬ್ಯಾಂಕ್​ ಆಫ್​ ಮಹಾರಾಷ್ಟ್ರ ಶಾಖೆಯಲ್ಲಿ ಈ ಕಳ್ಳತನ ನಡೆದಿದೆ. ಐವರು ದರೋಡೆಕೋರರು ರಿವಾಲ್ವರ್​ನಿಂದ ಬ್ಯಾಂಕ್​ ಉದ್ಯೋಗಿಗಳಿಗೆ ಬೆದರಿಸಿದ್ದಾರೆ.

ಇದನ್ನೂ ಓದಿರಿ:ಆರ್ಯನ್​ ಖಾನ್​ಗೆ ಜೈಲೇ ಗತಿ.. ಅ.30ರವರೆಗೆ ನ್ಯಾಯಾಂಗ ಬಂಧನ ವಿಸ್ತರಣೆ

ಮಧ್ಯಾಹ್ನ 1:30ರ ಸುಮಾರಿಗೆ ಕಳ್ಳತನ ನಡೆದಿದ್ದು, ಕೈಯಲ್ಲಿ ಗನ್​​ ಹಿಡಿದುಕೊಂಡು ಎಲ್ಲರೂ ಒಳಗೆ ನುಗ್ಗಿದ್ದಾರೆ. ಈ ವೇಳೆ, ಮ್ಯಾನೇಜರ್​ ಹಾಗೂ ಕ್ಯಾಷಿಯರ್​​ನನ್ನ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿ, ಲಾಕರ್​ಗಳ ಕೀ ತೆಗೆದುಕೊಂಡಿದ್ದಾರೆ. ತದನಂತರ ​2 ಕೋಟಿ ಮೌಲ್ಯದ ಚಿನ್ನ ಹಾಗೂ 31 ಲಕ್ಷ ರೂ. ನಗದು ಕದ್ದು ಪರಾರಿಯಾಗಿದ್ದಾರೆ. ಘಟನೆ ಬಗ್ಗೆ ಮಾಹಿತಿ ಗೊತ್ತಾಗುತ್ತಿದ್ದಂತೆ ಸ್ಥಳಕ್ಕೇ ಭೇಟಿ ನೀಡಿರುವ ಪೊಲೀಸ್ ಅಧಿಕಾರಿಗಳು ಸಿಸಿಟಿವಿ ದೃಶ್ಯಾವಳಿ ವಶಕ್ಕೆ ಪಡೆದುಕೊಂಡಿದ್ದು, ಆರೋಪಿಗಳಿಗಾಗಿ ಶೋಧಕಾರ್ಯ ಆರಂಭಿಸಿದ್ದಾರೆ.

ABOUT THE AUTHOR

...view details