ಛಿಂದ್ವಾರ:ಜಿಲ್ಲಾಡಳಿತ ಕಚೇರಿಯಲ್ಲಿ ವಿಚಿತ್ರ ಪ್ರಕರಣವೊಂದು ಬೆಳಕಿಗೆ ಬಂದಿದೆ. 60 ಸಾವಿರ ರೂಪಾಯಿಗಳ ನಾಣ್ಯ ಸಂಗ್ರಹಿಸಿದ್ದ ದಿನಸಿ ಅಂಗಡಿ ಮಾಲಕಿಯೊಬ್ಬಳು ಸಂಕಷ್ಟ ಸಿಲುಕಿದ್ದಾರೆ. ನಾಣ್ಯಗಳನ್ನು ಬ್ಯಾಂಕ್‌ಗೆ ಜಮಾ ಮಾಡಲು ಹೋದಾಗ ಅಲ್ಲಿನ ಅಧಿಕಾರಿಗಳು ಠೇವಣಿಗೆ ನಿರಾಕರಿಸಿದ್ದರಿಂದ ಯುವತಿ ಬೇಸರ ವ್ಯಕ್ತಪಡಿಸಿದ್ದಾರೆ.
ಛಿಂದ್ವಾರದ ಗುಲಾಬ್ರಾ ಪ್ರದೇಶದಲ್ಲಿ ದಿನಸಿ ಅಂಗಡಿ ನಡೆಸುತ್ತಿರುವ ದೀಕ್ಷಾ ಮಾಳವಿಯಾ ಸುಮಾರು 60 ಸಾವಿರ ರೂಪಾಯಿಗಳಷ್ಟು ನಾಣ್ಯಗಳನ್ನು ಸಂಗ್ರಹಿಸಿದ್ದಾರೆ. ಇದನ್ನು ಬ್ಯಾಂಕ್‌ಗೆ ಜಮೆ ಮಾಡಲು ತೆರಳಿದ್ದಾರೆ. ಆದ್ರೆ ಬ್ಯಾಂಕ್ನವರು ನಾಣ್ಯಗಳನ್ನು ತೆಗೆದುಕೊಳ್ಳಲು ನಿರಾಕರಿಸಿದ್ದಾರೆ.
ನಾಣ್ಯಗಳ ಠೇವಣಿಗೆ ನಿರಾಕರಿಸಿದ ಬ್ಯಾಂಕ್ ಮಂಗಳವಾರ 60,000 ನಾಣ್ಯಗಳೊಂದಿಗೆ ಜಿಲ್ಲಾಧಿಕಾರಿಗಳ ಸಾರ್ವಜನಿಕ ವಿಚಾರಣೆಗೆ ದೀಕ್ಷಾ ಹಾಜರಾದರು. ಜಿಲ್ಲಾಧಿಕಾರಿ ಸೌರಭ್ ಕುಮಾರ್ ಸುಮನ್ ಅವರನ್ನು ಭೇಟಿ ಮಾಡಿದ ದೀಕ್ಷಾ ತಮ್ಮ ಸಮಸ್ಯೆಯನ್ನು ಹೇಳಿಕೊಂಡರು. ನಾನು ಹಲವಾರು ತಿಂಗಳಿನಿಂದ ಈ ನಾಣ್ಯಗಳನ್ನು ಸಂಗ್ರಹಿಸಿದ್ದೇನೆ. ಆದ್ರೆ ಬ್ಯಾಂಕ್ನವರು ತೆಗೆದುಕೊಳ್ಳುಲು ನಿರಾಕರಿಸಿದ್ದಾರೆ. ನನಗೆ ಮುಂದಿನ ದಾರಿ ಯಾವುದೆಂದು ದೋಚುತ್ತಿಲ್ಲ. ಈ ಸಮಸ್ಯೆ ನೀವೇ ಬಗೆಹರಿಸಿಕೊಡಬೇಕೆಂದು ಕೇಳಿಕೊಂಡಿದ್ದಾರೆ.
ಅಂಗಡಿ ಯಜಮಾನಿಯ ಸಮಸ್ಯೆ ಆಲಿಸಿದ ಜಿಲ್ಲಾಧಿಕಾರಿ ಸೌರಭ್, ಭಾರತೀಯ ರಿಸರ್ವ್ ಬ್ಯಾಂಕ್‌ನ ಮಾರ್ಗಸೂಚಿಗಳ ಪ್ರಕಾರ ಯಾವುದೇ ವ್ಯಕ್ತಿಯಿಂದ ದಿನಕ್ಕೆ 1000 ನಾಣ್ಯಗಳನ್ನು ಪಡೆಯಬಹುದು. ಬ್ಯಾಂಕ್ನವರು ಇವರ ಬಳಿ ದಿನಕ್ಕೆ 1000 ನಾಣ್ಯಗಳು ಸಂಗ್ರಹಿಸಿಕೊಳ್ಳಬಹುದೆಂದು ಬ್ಯಾಂಕ್‌ಗೆ ಆದೇಶಿಸಿದರು. ಇದರ ಪ್ರಕಾರ ಬ್ಯಾಂಕ್ನವರು ಪ್ರತಿ ದಿನ ಸಾವಿರ ನಾಣ್ಯ ಜಮೆ ಮಾಡುವಂತೆ ಅಂಗಡಿ ಮಾಲಕಿಗೆ ಲಿಖಿತ ಭರವಸೆ ನೀಡಿದ್ದಾರೆ.
ಡಿಸಿ ಆದೇಶದಂತೆ ರಜಾ ದಿನಗಳನ್ನು ಹೊರತುಪಡಿಸಿ ಮಹಿಳೆ ಪ್ರತಿದಿನ ಸಾವಿರ ರೂಪಾಯಿ ನಾಣ್ಯಗಳನ್ನು ಬ್ಯಾಂಕ್‌ಗೆ ಜಮಾ ಮಾಡಬಹುದಾಗಿದೆ. ಒಟ್ಟು ನಾಣ್ಯಗಳನ್ನು ಬ್ಯಾಂಕಿಗೆ ಜಮಾ ಮಾಡಲು ಆ ಮಹಿಳೆ ಸರಿ ಸುಮಾರು ಎರಡೂವರೆ ತಿಂಗಳ ಸಮಯವಾದ್ರೂ ಬೇಕಾಗುತ್ತದೆ.