ಜಮ್ಮು ಕಾಶ್ಮೀರ:ಬುಡ್ಗಾಮ್ ಜಿಲ್ಲೆಯ ಚಂಡೀಪುರ ಪ್ರದೇಶದಲ್ಲಿ ಬಂದೂಕುಧಾರಿಗಳು ಸುಮಾರು 2 ಲಕ್ಷ ರೂ. ಲೂಟಿ ಮಾಡಿದ್ದಾರೆ. ಹಣದ ಜೊತೆಗೆ ಭದ್ರತಾ ಸಿಬ್ಬಂದಿಯ ಬಂದೂಕನ್ನು ಕೂಡಾ ಕಸಿದುಕೊಂಡು ಹೋಗಿದ್ದಾರೆ.
ಸೆಕ್ಯುರಿಟಿ ಗಾರ್ಡ್‌ಗಳು ಅವರನ್ನು ತಡೆಯಲು ಪ್ರಯತ್ನಿಸಿದಾಗ ಬಂದೂಕುಧಾರಿಗಳು ಗುಂಡು ಹಾರಿಸಿದ್ದು, ಒಮ್ಮೆಗೇ ಬ್ಯಾಂಕ್‌ನೊಳಗೆ ಪ್ರವೇಶಿಸಿದ್ದಾರೆ. ಅವರು ಮೊದಲು ಸಿಸಿಟಿವಿಯನ್ನು ಒಡೆದು ನಂತರ ಎಲ್ಲರನ್ನೂ ಬೆದರಿಸಿ ಬ್ಯಾಂಕಿನಲ್ಲಿ ಇಟ್ಟಿದ್ದ ಹಣವನ್ನು ಲೂಟಿ ಮಾಡಿದ್ದಾರೆ ಎಂದು ಬ್ಯಾಂಕ್ ನೌಕರರು ತಿಳಿಸಿದ್ದಾರೆ.