ಬರೈಲಿ, ಉತ್ತರ ಪ್ರದೇಶ:ಬ್ಯಾಂಕ್ಗೆ ತೆರಳಿದ ಗ್ರಾಹಕನೋರ್ವ ಮಾಸ್ಕ್ ಧರಿಸದ ಕಾರಣಕ್ಕೆ ಅಲ್ಲಿನ ಭದ್ರತಾ ಸಿಬ್ಬಂದಿ ಗ್ರಾಹಕನ ಮೇಲೆ ಗುಂಡು ಹಾರಿಸಿದ ಘಟನೆ ಉತ್ತರ ಪ್ರದೇಶದ ಬರೈಲಿಯಲ್ಲಿ ನಡೆದಿದೆ. ಘಟನೆಯಲ್ಲಿ ಗ್ರಾಹಕ ಗಾಯಗೊಂಡಿದ್ದಾನೆ.
ಬರೋಡಾದ ಸ್ಟೇಷನ್ ರಸ್ತೆಯಲ್ಲಿರುವ ಬರೈಲಿ ಬ್ರಾಂಚ್ನಲ್ಲಿ ಘಟನೆ ನಡೆದಿದ್ದು, ಗಾಯಾಳುವನ್ನು ರಾಜೇಶ್ಕುಮಾರ್ ಎಂದು ಗುರುತಿಸಲಾಗಿದೆ. ರಾಜೇಶ್ ಕುಮಾರ್ ಕಾಲಿಗೆ ಗಾಯವಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.
ಇದನ್ನೂ ಓದಿ:DRDOದಿಂದ ಮತ್ತೊಂದು ಮೈಲಿಗಲ್ಲು.. ಸುಧಾರಿತ ಪಿನಾಕಾ ರಾಕೆಟ್ ಪ್ರಯೋಗ ಸಕ್ಸಸ್
ಶುಕ್ರವಾರ ತನ್ನ ಖಾತೆಯಿಂದ ಹಣವನ್ನು ಪಡೆಯುವ ಸಲುವಾಗಿ ರಾಜೇಶ್ಕುಮಾರ್ ಬ್ಯಾಂಕ್ಗೆ ತೆರಳಿದ್ದನು. ಈ ವೇಳೆ ಮಾಸ್ಕ್ ಧರಿಸದ ಕಾರಣ ಅಲ್ಲಿನ ಬ್ಯಾಂಕ್ ಭದ್ರತಾ ಸಿಬ್ಬಂದಿಯಾಗಿ ಕೆಲಸ ಮಾಡುತ್ತಿದ್ದ ಕೇಶವ್ ಅವರು ರಾಜೇಶ್ಕುಮಾರ್ನನ್ನು ತಡೆದಿದ್ದಾರೆ. ಈ ವೇಳೆ ಮಾತಿನ ಚಕಮಕಿ ನಡೆದಿದ್ದು, ಭದ್ರತಾ ಸಿಬ್ಬಂದಿ ಕೇಶವ್ ಗ್ರಾಹಕನ ಗುಂಡು ಹಾರಿಸಿದ್ದಾರೆ.
ಸದ್ಯಕ್ಕೆ ಪೊಲೀಸರು ಕೇಶವ್ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ರಾಜೇಶ್ಗೆ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.