ನವದೆಹಲಿ:ಬ್ಯಾಂಕ್ ವಂಚನೆಗೆ ಸಂಬಂಧಿಸಿದಂತೆ ಬೆಂಗಳೂರಿನಲ್ಲಿ ದಾಖಲಾದ ಪ್ರಕರಣವೊಂದರ ಅಪರಾಧಿಯನ್ನು ಇಂಟರ್ಪೋಲ್ ಸಹಾಯದಿಂದ ಕೇಂದ್ರೀಯ ತನಿಖಾ ಸಂಸ್ಥೆಯ (ಸಿಬಿಐ) ಅಧಿಕಾರಿಗಳು ಅಮೆರಿಕದಿಂದ ಇಂದು ಭಾರತಕ್ಕೆ ಕರೆತಂದಿದ್ದಾರೆ. ಟಿ.ರವಿಂದ್ರನಾಥ್ ಗುಪ್ತಾ ಎಂಬಾತ ಅಪರಾಧಿಯಾಗಿದ್ದು, ಸಿಬಿಐ ನ್ಯಾಯಾಲಯ ದೋಷಿ ತೀರ್ಪು ಪ್ರಕಟಿಸಿದ ಬಳಿಕ ಪಲಾಯನಗೊಂಡಿದ್ದ.
''ಇದಕ್ಕಾಗಿ ಸಿಬಿಐನ ಜಾಗತಿಕ ಕಾರ್ಯಾಚರಣೆಯ ಕೇಂದ್ರವು ಇಂಟರ್‌ಪೋಲ್‌ನೊಂದಿಗೆ ನಿಕಟ ಸಮನ್ವಯ ನಡೆಸಿತ್ತು. ಇದೀಗ ಅಪರಾಧಿಯನ್ನು ಅಮೆರಿಕದಿಂದ ಭಾರತಕ್ಕೆ ಕರೆತರಲಾಗದೆ. ಈತ ಇನ್ಲ್ಯಾಂಡ್ ಲೆಟರ್ ಆಫ್ ಕ್ರೆಡಿಟ್‌ಗಳನ್ನು ನಕಲಿಸುವ ಮೂಲಕ ಬ್ಯಾಂಕ್ಗೆ ವಂಚನೆ ಹಾಗೂ ಫೋರ್ಜರಿ ಮಾಡಿರುವ ಕುರಿತು ಬೆಂಗಳೂರಿನಲ್ಲಿ ದಾಖಲಾದ ಪ್ರಕರಣದಲ್ಲಿ ಸಿಬಿಐಗೆ ಬೇಕಾಗಿದ್ದ'' ಎಂದು ಸಿಬಿಐ ಅಧಿಕೃತ ಹೇಳಿಕೆ ಬಿಡುಗಡೆ ಮಾಡಿದೆ.