ಇಂದೋರ್ (ಮಧ್ಯಪ್ರದೇಶ): ಇಲ್ಲಿ ವ್ಯಕ್ತಿಯೋರ್ವನನ್ನು ಜನರು ಹಿಗ್ಗಾಮುಗ್ಗ ಥಳಿಸುವ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಇಂದೋರ್ನ ಬಂಗಂಗಾ ಪೊಲೀಸ್ ಸ್ಟೇಷನ್ ಪ್ರದೇಶದ ಗೋವಿಂದ್ ನಗರದಲ್ಲಿ ಬಳೆ ಮಾರುವ ನೆಪದಲ್ಲಿ ವ್ಯಕ್ತಿ ಮಹಿಳೆಯರಿಗೆ ಕಿರುಕುಳ ನೀಡಿದ್ದಾನೆ ಎಂದು ಆರೋಪಿಸಿ ಸಾರ್ವಜನಿಕರು ಮನಬಂದಂತೆ ಹೊಡೆದಿದ್ದಾರೆ. ಈ ವಿಡಿಯೋ ಎಲ್ಲೆಡೆ ಹರಿದಾಡುತ್ತಿದ್ದು, ಸಖತ್ ವೈರಲ್ ಆಗಿದೆ.
ಆದರೆ, ಥಳಿತಕ್ಕೆ ಒಳಗಾದ ವ್ಯಕ್ತಿ ತಸ್ಲೀಮ್, ಗೋವಿಂದ್ ಕಾಲೋನಿಯಲ್ಲಿ ಬಳೆಗಳನ್ನು ಮಾರಾಟ ಮಾಡುತ್ತಿದ್ದ ವೇಳೆ ಜನರು ನನ್ನ ಜಾತಿ ಕೇಳಿದರು. ನಾನು ಜಾತಿ ಹೇಳಿದ ಬಳಿಕ ಅವರು ನನ್ನ ಮೇಲೆ ಹಲ್ಲೆ ಮಾಡಿ ನನ್ನ ಹತ್ತಿರವಿದ್ದ ಹಣ ಕಸಿದುಕೊಂಡಿದ್ದಾರೆ ಎಂದು ಆರೋಪಿಸಿದ್ದಾನೆ.