ಕರ್ನಾಟಕ

karnataka

ETV Bharat / bharat

ಪಾಟ್ನಾದಲ್ಲಿ ಬಾಂಗ್ಲಾದೇಶ ವಿಮಾನ ತುರ್ತು ಭೂಸ್ಪರ್ಶ - Bangladesh Airlines flight makes emergency landing

ಬಾಂಗ್ಲಾದೇಶ ಏರ್‌ಲೈನ್ಸ್ ವಿಮಾನದಲ್ಲಿದ್ದ ಎಲ್ಲಾ ಪ್ರಯಾಣಿಕರು ಸುರಕ್ಷಿತವಾಗಿದ್ದಾರೆ.

Bangladesh Airlines flight makes emergency landing
ಬಾಂಗ್ಲಾದೇಶ ಏರ್‌ಲೈನ್ಸ್ ವಿಮಾನ ತುರ್ತು ಭೂಸ್ಪರ್ಶ

By

Published : May 5, 2023, 9:40 PM IST

ಪಾಟ್ನಾ (ಬಿಹಾರ):ಢಾಕಾದಿಂದ ಕಠ್ಮಂಡುವಿಗೆ ತೆರಳುತ್ತಿದ್ದ ಬಿಮನ್ ಬಾಂಗ್ಲಾದೇಶ ಏರ್‌ಲೈನ್ಸ್ ವಿಮಾನವೊಂದು ತುರ್ತು ಭೂಸ್ಪರ್ಶ ಮಾಡಿದೆ. ತಾಂತ್ರಿಕ ದೋಷ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಶುಕ್ರವಾರ ಪಾಟ್ನಾದ ಜಯಪ್ರಕಾಶ್ ನಾರಾಯಣ ವಿಮಾನ ನಿಲ್ದಾಣದಲ್ಲಿ ತುರ್ತು ಭೂಸ್ಪರ್ಶ ಮಾಡಿದ್ದು, ವಿಮಾನದಲ್ಲಿ 70 ಮಂದಿ ಪ್ರಯಾಣಿಸುತ್ತಿದ್ದರು.

ನಾಗರಿಕ ವಿಮಾನಯಾನ ನಿರ್ದೇಶನಾಲಯದ (ಡಿಜಿಸಿಎ) ಹಿರಿಯ ಅಧಿಕಾರಿಯೊಬ್ಬರು ಹೇಳಿರುವ ಪ್ರಕಾರ, ವಿಮಾನ ಹಾರಾಟ ನಡೆಸುವಾಗ ಪೈಲಟ್​ಗೆ ಕೆಲವು ತಾಂತ್ರಿಕ ದೋಷ ಕಂಡು ಬಂದಿದೆ. ಈ ಹಿನ್ನೆಲೆ ಪಾಟ್ನಾದ ವಿಮಾನ ನಿಲ್ದಾಣದ ಅಧಿಕಾರಿಗಳು ಹಸಿರು ನಿಶಾನೆ ತೋರಿದ ನಂತರ, ವಿಮಾನವು ಮಧ್ಯಾಹ್ನ 12 ಗಂಟೆ ಸುಮಾರಿಗೆ ಯಶಸ್ವಿಯಾಗಿ ಟೇಕ್​ ಆಫ್​ ಮಾಡಲಾಗಿದೆ. ಹಾಗೂ ವಿಮಾನದಲ್ಲಿದ್ದ ಎಲ್ಲಾ ಪ್ರಯಾಣಿಕರು ಸುರಕ್ಷಿತವಾಗಿದ್ದಾರೆ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ :ಕಾಕ್‌ಪಿಟ್‌ನಲ್ಲಿ ನಾಗರಹಾವು ಪತ್ತೆ.. ವಿಮಾನ ತುರ್ತು ಭೂಸ್ಪರ್ಶ ಮಾಡಿಸಿದ ಪೈಲಟ್

ವಿಮಾನವನ್ನು ಪಾಟ್ನಾದಲ್ಲಿ ತುರ್ತು ಭೂಸ್ಪರ್ಶ ಮಾಡಬೇಕೆಂದು ತಿಳಿಸಿದಾಗ ವಿಮಾನದಲ್ಲಿದ್ದ ಜನರು ಭಯಭೀತರಾಗಿದ್ದರು. ತಾಂತ್ರಿಕ ಸಮಸ್ಯೆಯನ್ನು ಪೈಲಟ್ ಗಮನಿಸಿದ ಕಾರಣ ಭಾರೀ ಅನಾಹುತ ತಪ್ಪಿದೆ. ಸುರಕ್ಷಿತವಾಗಿ ಲ್ಯಾಂಡಿಂಗ್ ಆದ ಬಳಿಕ ವಿಮಾನದಲ್ಲಿದ್ದ ಪ್ರಯಾಣಿಕರು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದು, ವಿಮಾನದ ತಾಂತ್ರಿಕ ದೋಷ ಸರಿಪಡಿಸಲು ತಾಂತ್ರಿಕ ತಂಡ ಪ್ರಯತ್ನಿಸುತ್ತಿದೆ ಎಂದು ತಿಳಿದು ಬಂದಿದೆ.

ಕಳೆದ ವರ್ಷ ಜೂನ್ 19 ರಂದು ಸ್ಪೈಸ್‌ಜೆಟ್ ವಿಮಾನವೊಂದಕ್ಕೆ ಪಕ್ಷಿಯೊಂದು ಸಿಲುಕಿ ತುರ್ತು ಭೂಸ್ಪರ್ಶ ಮಾಡಿತ್ತು. 183 ಮಂದಿ ಪ್ರಯಾಣಿಕರಿದ್ದರು. ಬಳಿಕ ಪ್ರಯಾಣಿಕರಿಗೆ ಸ್ಪೈಸ್‌ಜೆಟ್ ಏರ್‌ಲೈನ್ಸ್ ಪರ್ಯಾಯ ವಿಮಾನದ ವ್ಯವಸ್ಥೆ ಮಾಡಲಾಗಿತ್ತು.

ಇದನ್ನೂ ಓದಿ :ಮುಂಬೈ ಕರಾವಳಿಯಲ್ಲಿ ನೌಕಾಪಡೆಯ ಹೆಲಿಕಾಪ್ಟರ್​ ತುರ್ತು ಭೂಸ್ಪರ್ಶ, ಮೂವರು ಸಿಬ್ಬಂದಿ ರಕ್ಷಣೆ

ತೆಲಂಗಾಣದ ಶಂಶಾಬಾದ್​ನಲ್ಲಿ ತುರ್ತು ಭೂಸ್ಪರ್ಶ : ಕಳೆದು ಏಪ್ರಿಲ್​ ತಿಂಗಳ 4 ರಂದು ಬೆಂಗಳೂರಿನಿಂದ ವಾರಾಣಸಿಗೆ ತೆರಳುತ್ತಿದ್ದ ಇಂಡಿಗೋ ವಿಮಾನ (6A897) ತುರ್ತು ಭೂಸ್ಪರ್ಶ ಮಾಡಿತ್ತು. ಬೆಳಗ್ಗೆ 6.15 ರ ಸುಮಾರಿಗೆ ತೆಲಂಗಾಣದ ಶಂಶಾಬಾದ್ ವಿಮಾನ ನಿಲ್ದಾಣದಲ್ಲಿ ವಿಮಾನವನ್ನು ತುರ್ತು ಭೂಸ್ಪರ್ಶ ಮಾಡಲಾಗಿತ್ತು. ಈ ವಿಮಾನದಲ್ಲಿ 137 ಮಂದಿ ಪ್ರಯಾಣಿಸುತ್ತಿದ್ದರು ಎಂದು ತಿಳಿದು ಬಂದಿತ್ತು. ವಿಮಾನ ತುರ್ತು ಭೂಸ್ಪರ್ಶದ ಹಿಂದೆ ತಾಂತ್ರಿಕ ದೋಷವಿದೆ ಎಂದು ಹೇಳಲಾದರೂ, ವಿಮಾನದಲ್ಲಿ ಯಾವ ರೀತಿಯ ತಾಂತ್ರಿಕ ದೋಷ ಕಂಡುಬಂದಿದೆ ಎಂಬ ಸಂಪೂರ್ಣ ಮಾಹಿತಿ ಬಹಿರಂಗವಾಗಿರಲಿಲ್ಲ.

ಇದನ್ನೂ ಓದಿ :ಬೆಂಳೂರಿನಿಂದ ಹೊರಟಿದ್ದ ವಿಮಾನ ಹೈದರಾಬಾದ್​ನಲ್ಲಿ ತುರ್ತು ಭೂ ಸ್ಪರ್ಶ!

ABOUT THE AUTHOR

...view details