ನವದೆಹಲಿ: ಇಂದು ದೇಶಾದ್ಯಂತ 72 ನೇ ಗಣರಾಜ್ಯೋತ್ಸವದ ಸಂಭ್ರಮ ಮನೆ ಮಾಡಿದೆ. ಬೆಳಗ್ಗೆ ದೆಹಲಿಯ ರಾಜಪಥದಲ್ಲಿ ರಾಷ್ಟ್ರಪತಿ ರಾಮನಾಥ ಕೋವಿಂದ್ ಧ್ವಜಾರೋಹಣ ನೆರವೇರಿಸಿದ ಬಳಿಕ ನಡೆದ ಪಥಸಂಚಲನದಲ್ಲಿ ಭಾರತದ ಸೇನಾ ಶಕ್ತಿ ಪ್ರದರ್ಶನಗೊಂಡಿತು.
ಗಣರಾಜ್ಯೋತ್ಸವದ ಪರೇಡ್ನಲ್ಲಿ ಬಾಂಗ್ಲಾ ಸೇನೆ ಭಾಗಿ ಇನ್ನೊಂದು ವಿಶೇಷ ಎಂದರೆ ಈ ಬಾರಿ ಬಾಂಗ್ಲಾದೇಶದ ಸೇನೆ ಗಣರಾಜ್ಯೋತ್ಸವದ ಪರೇಡ್ನಲ್ಲಿ ಭಾಗಿಯಾಗಿರುವುದು. ಪರೇಡ್ನಲ್ಲಿ ಭಾರತ ಮತ್ತು ಬಾಂಗ್ಲಾ ಸೇನೆಗಳು ಒಟ್ಟಿಗೆ ಪಾಲ್ಗೊಂಡಿದ್ದವು.
1971ರಲ್ಲಿ ನಡೆದ ಯುದ್ಧದಲ್ಲಿ ಭಾರತವು ಪಾಕ್ ಅನ್ನು ಮಣ್ಣು ಮುಕ್ಕಿಸಿತ್ತು. ಅಂದೇ ಪಾಕಿಸ್ತಾನದ ಆಡಳಿತದಿಂದ ಬಾಂಗ್ಲಾದೇಶ ವಿಮೋಚನೆಯಾಯಿತು. ಈ ಸುದಿನಕ್ಕೆ 50 ವರ್ಷಗಳಾಗಿವೆ. ಈ ಯುದ್ಧದ 50 ನೇ ವಾರ್ಷಿಕೋತ್ಸವದ ನೆನಪಿಗಾಗಿ ಭಾರತ-ಬಾಂಗ್ಲಾ ಸೇನೆಗಳು ಒಟ್ಟಿಗೆ ಪರೇಡ್ನಲ್ಲಿ ಭಾಗಿಯಾಗಿವೆ.
122 ಸದಸ್ಯರಿದ್ದ ಬಾಂಗ್ಲಾದೇಶ ಸೇನಾದಳದ ನೇತೃತ್ವವನ್ನು ಲೆಫ್ಟಿನೆಂಟ್ ಕರ್ನಲ್ ಅಬು ಮೊಹಮ್ಮದ್ ಶಹನೂರ್ ಶವಾನ್ ವಹಿಸಿದ್ದರು.