ಬಂಡಿಪೋರಾ(ಜಮ್ಮು ಕಾಶ್ಮೀರ): ಲಷ್ಕರ್-ಎ-ತೋಯ್ಬಾ ಸಂಘಟನೆಗೆ ಸೇರಿದ ಓರ್ವ ಭಯೋತ್ಪಾದಕನನ್ನು ಜಮ್ಮು ಕಾಶ್ಮೀರದ ಬಂಡಿಪೋರಾದಲ್ಲಿ ಬಂಧಿಸಲಾಗಿದೆ.
ಗುಂದ್ ಜಹಾಂಗೀರ್ ಗ್ರಾಮದಲ್ಲಿ ಭದ್ರತೆಗಾಗಿ ನಿಯೋಜಿಸಿದ್ದ ಪೊಲೀಸರು ಭಯೋತ್ಪಾದಕನನ್ನು ಸೆರೆಹಿಡಿದಿದ್ದು, ಸೆರೆಯಾದ ಭಯೋತ್ಪಾದಕ ಹಾಜಿನ್ ಸೋನಾವರಿ ಪ್ರದೇಶದನಾದ ಮುಜಾಮ್ಮಿಲ್ ಶೇಖ್ ಅಲಿಯಾಸ್ ಅಬು ಮಾವಿಯಾ ತಿಳಿದುಬಂದಿದೆ.
ಜಪ್ತಿ ಮಾಡಿದ ಶಸ್ತ್ರಾಸ್ತ್ರಗಳೊಂದಿಗೆ ಸೆರೆಸಿಕ್ಕ ಉಗ್ರ ಈ ಕುರಿತು ಶುಕ್ರವಾರ ಪೊಲೀಸರು ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದೆ. ಗುಂದ್ ಜಹಾಂಗೀರ್ ಗ್ರಾಮದಲ್ಲಿ ಪೊಲೀಸರ ತಪಾಸಣೆ ವೇಳೆ ಸಂಶಯಾಸ್ಪವಾಗಿ ವರ್ತಿಸಿದ ಕಾರಣ, ಸೂಕ್ಷ್ಮವಾಗಿ ಪರಿಶೀಲನೆ ನಡೆಸಿ, ಆತನನ್ನು ಬಂಧಿಸಲಾಗಿದೆ. ಉಗ್ರನ ಬಳಿಯಿದ್ದ ಮದ್ದುಗುಂಡು ಮತ್ತು ಶಸ್ತ್ರಾಸ್ತ್ರಗಳನ್ನು ಜಪ್ತಿ ಮಾಡಲಾಗಿದೆ.
ಇದನ್ನೂ ಓದಿ:ಟೋಕಿಯೋ ಒಲಿಂಪಿಕ್ನಲ್ಲಿ ಭಾಗವಹಿಸುವ ಅಥ್ಲೀಟ್ಗಳ ಸಿದ್ಧತೆ ಬಗ್ಗೆ ಪ್ರಧಾನಿ ಮೋದಿ ಸಭೆ
ಇತ್ತೀಚೆಗಷ್ಟೇ ಮುಜಾಮ್ಮಿಲ್ ಲಷ್ಕರ್ ಎ ತೋಯ್ಬಾ ಸೇರ್ಪಡೆಯಾಗಿದ್ದನು. ಹಾಜಿನ್ ಪಟ್ಟಣದಲ್ಲಿ ವಿದ್ವಂಸಕ ಕೃತ್ಯಗಳನ್ನು ನಡೆಸಲು ಆತನನ್ನು ಲಷ್ಕರ್ ಎ ತೋಯ್ಬಾದಿಂದ ನೇಮಿಸಲಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.