ಬಂಡಿಪೋರಾ:ಉತ್ತರ ಕಾಶ್ಮೀರದಲ್ಲಿ ಇಬ್ಬರು ಲಷ್ಕರ್-ಎ-ತೈಬಾ (ಎಲ್‌ಇಟಿ) ಭಯೋತ್ಪಾದಕ ಸಹಚರರನ್ನು ಜಮ್ಮು-ಕಾಶ್ಮೀರ ಪೊಲೀಸರು ಬಂಧಿಸಿದ್ದಾರೆ.
ಅಬಿದ್ ವಾಜಾ ಮತ್ತು ಶಬೀರ್ ಅಹ್ಮದ್ ಗೊಜರ್ ಬಂಧಿತ ಭಯೋತ್ಪಾದಕ ಸಹಚರರಾಗಿದ್ದಾರೆ. ಇವರಿಬ್ಬರನ್ನು ಪಾಪಚನ್ ಬಂಡಿಪೋರ್ ಸೇತುವೆ ಬಳಿ ಬಂಧಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಪಾಪಾಚನ್ ಬಂಡಿಪೋರ್ ಸೇತುವೆ ಬಳಿ ಪೊಲೀಸರು ತಪಾಸಣೆ ನಡೆಸುತ್ತಿದ್ದ ವೇಳೆ ಆರೋಪಿಗಳು ತಪ್ಪಿಸಿಕೊಳ್ಳಲು ಪ್ರಯತ್ನಿಸಿದ್ದಾರೆ. ಕೂಡಲೇ ಇಬ್ಬರನ್ನು ಬಂಧಿಸಿ ಅವರಿಂದ ಎರಡು ಲೈವ್ ಹ್ಯಾಂಡ್ ಗ್ರೆನೇಡ್‌ಗಳನ್ನು ವಶಕ್ಕೆ ಪಡೆಯಲಾಗಿದೆ.