ಕರ್ನಾಟಕ

karnataka

ETV Bharat / bharat

ಸ್ವಾತಂತ್ರ್ಯ ನನ್ನ ಜನ್ಮಸಿದ್ಧ ಹಕ್ಕು ಎಂದು ಘರ್ಜಿಸಿದ್ದ ತಿಲಕ್

ದೇಶ 75ನೇ ವರ್ಷದ ಸ್ವಾತಂತ್ರ್ಯೋತ್ಸವದ ಸಂಭ್ರಮದಲ್ಲಿದೆ. ಲೋಕಮಾನ್ಯ ಬಾಲಗಂಗಾಧರ ತಿಲಕ್ ಅವರು ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ತಮ್ಮದೇ ಆದ ಕೊಡುಗೆಯನ್ನು ನೀಡಿದ್ದಾರೆ. ಇಂತಹ ಮಹಾನ್ ನಾಯಕರ ನೆನೆಯುವುದು ನಮ್ಮೆಲ್ಲರ ಕರ್ತವ್ಯವಾಗಿದೆ.

Bal Gangadhar Tilak
ಬಾಲಗಂಗಾಧರ ತಿಲಕ್

By

Published : Nov 7, 2021, 12:24 AM IST

ಪುಣೆ (ಮಹಾರಾಷ್ಟ್ರ):ಸ್ವಾತಂತ್ರ್ಯ ನನ್ನ ಜನ್ಮಸಿದ್ದ ಹಕ್ಕು ಮತ್ತು ಅದನ್ನು ಪಡದೇ ತೀರುತ್ತೇನೆ ಎಂದು ಲೋಕಮಾನ್ಯ ಬಾಲಗಂಗಾಧರ ತಿಲಕ್ ಅವರು ಭಾರತದ ನೆಲದಲ್ಲಿ ನಿಂತು ಬ್ರಿಟಿಷರ ಎದುರು ಗುಡುಗಿದ್ದರು.

ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ಅವರು ಮಹತ್ವದ ಕೊಡುಗೆ ನೀಡಿದ್ದಾರೆ. ಮುಖ್ಯವಾಗಿ ಮರಾಠ ಮತ್ತು ಕೇಸರಿ ಪತ್ರಿಕೆಯಲ್ಲಿ ಪ್ರಕಟವಾದ ತಮ್ಮ ಲೇಖನಗಳ ಮೂಲಕ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಲು ಜನರನ್ನು ಪ್ರೇರೇಪಿಸಿದರು. ಆದ್ದರಿಂದಲೇ ಅವರನ್ನು ಭಾರತೀಯ ರಾಷ್ಟ್ರಿಯತಾವಾದದ ಪಿತಾಮಹಾ ಎಂದೂ ಕರೆಯಲಾಯಿತು.

ಸ್ವಾತಂತ್ರ್ಯ ನನ್ನ ಜನ್ಮಸಿದ್ಧ ಹಕ್ಕು ಎಂದು ಘರ್ಜಿಸಿದ್ದ ತಿಲಕ್

ಲೋಕಮಾನ್ಯ ತಿಲಕರು 23 ಜುಲೈ 1856 ರಂದು ರತ್ನಗಿರಿಯಲ್ಲಿ ಜನಿಸಿದರು. 1866ರಲ್ಲಿ ರತ್ನಗಿರಿಯಿಂದ ಪೋಷಕರೊಂದಿಗೆ ಪುಣೆಗೆ ಬಂದು ನೆಲೆಸಿದರು. ಇಲ್ಲಿಯೇ ಅವರು 1872ರಲ್ಲಿ ತಮ್ಮ ಮೆಟ್ರಿಕ್ಯುಲೇಷನ್ ಅನ್ನು ಪೂರ್ಣಗೊಳಿಸಿದರು. ಅದಕ್ಕೂ ಮೊದಲು, 1871ರಲ್ಲಿ ಕೊಂಕಣದಲ್ಲಿ ಬಲ್ಲಾಳ್ ಬಾಳ್ ಕುಟುಂಬದ ಸತ್ಯಭಾಮಾಬಾಯಿ ಅವರನ್ನು ವಿವಾಹವಾದರು. ಮೆಟ್ರಿಕ್ಯುಲೇಷನ್ ನಂತರ ಪುಣೆಯ ಡೆಕನ್ ಕಾಲೇಜಿಗೆ ಪ್ರವೇಶ ಪಡೆದು ಬಿಎ ಉತ್ತೀರ್ಣರಾದರು. ಇಲ್ಲಿಯೇ ಅವರು ಹೋರಾಟಗಾರ ಅಗರ್ಕರ್ ಅವರನ್ನು ಭೇಟಿಯಾಗಿ ಸ್ವಾತಂತ್ರ್ಯ ಹೋರಾಟದಲ್ಲಿ ಪಾಲ್ಗೊಳ್ಳಲು ನಿರ್ಧರಿಸಿದರು.

ಬಂಗಾಳ ವಿಭಜನೆಯ ನಂತರ ದೇಶದಾದ್ಯಂತ ಗಲಭೆಗಳು ಭುಗಿಲೆದ್ದವು. ಹಿಂಸಾತ್ಮಕ ಆಂದೋಲನ ಪ್ರಾರಂಭವಾಯಿತು. ಚಳವಳಿಯನ್ನು ಬೆಂಬಲಿಸಿ ತಿಲಕರು ನಾಲ್ಕು ಘೋಷಣೆ ಮೊಳಗಿಸಿದರು. ಸ್ವದೇಶಿ, ಬಹಿಷ್ಕಾರ, ರಾಷ್ಟ್ರೀಯ ಶಿಕ್ಷಣ ಮತ್ತು ಸ್ವರಾಜ್ಯ. ಬ್ರಿಟಿಷರ ವಿರುದ್ಧ ಜನರನ್ನು ಒಗ್ಗೂಡಿಸುವ ಉದ್ದೇಶದಿಂದ ಸಾರ್ವಜನಿಕ ಗಣೇಶೋತ್ಸವವನ್ನೂ ಆರಂಭಿಸಿದ್ದರು.

ಇಡೀ ದೇಶ 75ನೇ ವರ್ಷದ ಸ್ವಾತಂತ್ರ್ಯೋತ್ಸವದ ಸಂಭ್ರಮದಲ್ಲಿದೆ. ಈ ವೇಳೆ ಇಂತಹ ಮಹಾನ್ ನಾಯಕರ ನೆನೆಯುವುದು ನಮ್ಮೆಲ್ಲರ ಕರ್ತವ್ಯವಾಗಿದೆ. ಜೊತೆಗೆ ಲೋಕಮಾನ್ಯರಿಗೆ ನಮಿಸುವುದು ಪ್ರತಿಯೊಬ್ಬರ ಜವಾಬ್ದಾರಿಯೂ ಆಗಿದೆ.

ABOUT THE AUTHOR

...view details