ಕರ್ನಾಟಕ

karnataka

By

Published : Oct 11, 2021, 9:44 PM IST

ETV Bharat / bharat

ಕಾಲೇಜ್​ನಲ್ಲಿ 'ಗರ್ಬಾ ಡ್ಯಾನ್ಸ್​'​ ಕಾರ್ಯಕ್ರಮದ ವೇಳೆ ಬಜರಂಗ ದಳದ ಗಲಾಟೆ

ಕಾಲೇಜ್​​ವೊಂದರಲ್ಲಿ ಗರ್ಬಾ ಡ್ಯಾನ್ಸ್​​ ಆಯೋಜನೆ ಮಾಡಿದ್ದ ಸಂದರ್ಭದಲ್ಲಿ ಬಜರಂಗ ದಳದ ಸಿಬ್ಬಂದಿ ಅಲ್ಲಿಗೆ ತೆರಳಿ ಗಲಾಟೆ ಮಾಡಿರುವ ಘಟನೆ ನಡೆದಿದೆ.

Garba dance
Garba dance

ಇಂದೋರ್​(ಮಧ್ಯಪ್ರದೇಶ):ಕಾಲೇಜ್​​ವೊಂದರಲ್ಲಿ ಆಯೋಜನೆ ಮಾಡಲಾಗಿದ್ದ ಗರ್ಬಾ ಡ್ಯಾನ್ಸ್​​​ ವೇಳೆ ಬಜರಂಗ ದಳದ ಕಾರ್ಯಕರ್ತರು ಏಕಾಏಕಿ ನುಗ್ಗಿ ಗಲಾಟೆ ಮಾಡಿರುವ ಘಟನೆ ನಡೆದಿದೆ. ಮಧ್ಯಪ್ರದೇಶದ ಇಂದೋರ್​​ನಲ್ಲಿ ಕಾರ್ಯಕ್ರಮ ನಡೆಯುತ್ತಿದ್ದ ಸಂದರ್ಭದಲ್ಲಿ ಗದ್ದ ಸೃಷ್ಟಿಸಿದ್ದಾರೆ.

ಗರ್ಬಾ ಡ್ಯಾನ್ಸ್ ಆಯೋಜನೆ ಮಾಡಿರುವ ಸಂಘಟಕರು ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿದ ವಿದ್ಯಾರ್ಥಿಗಳಿಗೆ ಲವ್​-ಜಿಹಾದ್​ನಲ್ಲಿ ಭಾಗಿಯಾಗುವಂತೆ ಪ್ರೋತ್ಸಾಹಿಸುತ್ತಿದ್ದಾರೆಂದು ಬಜರಂಗದಳ ಆರೋಪ ಮಾಡಿದೆ. ಜೊತೆಗೆ ಕಾರ್ಯಕ್ರಮ ಆಯೋಜನೆ ಮಾಡಿರುವ ಸಂಘಟಕರು ಸೇರಿದಂತೆ ಹಲವರ ವಿರುದ್ಧ ಎಫ್​ಐಆರ್​ ದಾಖಲಾಗಿದೆ.

ಕಾಲೇಜ್​ನಲ್ಲಿ 'ಗರ್ಬಾ ಡ್ಯಾನ್ಸ್​'​ ಕಾರ್ಯಕ್ರಮದ ವೇಳೆ ಬಜರಂಗ ದಳದ ಗಲಾಟೆ

ಭಾನುವಾರ ನಗರದ ಆಕ್ಸ್​ಫರ್ಡ್​ ಕಾಲೇಜ್​​ನಲ್ಲಿ ಸಮುದಾಯವೊಂದರ ಕೆಲ ವಿದ್ಯಾರ್ಥಿಗಳು ಗರ್ಭಾ ಸಮಾರಂಭದಲ್ಲಿ ಭಾಗಿಯಾಗಿದ್ದರು. ಇದರ ಬಗ್ಗೆ ಮಾಹಿತಿ ಗೊತ್ತಾಗುತ್ತಿದ್ದಂತೆ ಬಜರಂಗದಳದ ಕಾರ್ಯಕರ್ತರು ಸ್ಥಳಕ್ಕಾಗಮಿಸಿ, ಲವ್ ​ ​- ಜಿಹಾದ್​​ಗೆ ಕಾಲೇಜ್​ ಆಡಳಿತ ಮಂಡಳಿ ಉತ್ತೇಜನ ನೀಡುತ್ತಿದೆ ಎಂದು ಆರೋಪಿಸಿ ಗದ್ದಲ ಸೃಷ್ಟಿ ಮಾಡಿದೆ.

ಗರ್ಬಾ ಡ್ಯಾನ್ಸ್​ ವೇಳೆ ಬಜರಂಗ ದಳದ ಗದ್ದಲ

ಘಟನೆ ಬಗ್ಗೆ ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕಾಗಮಿಸಿ, ಪರಿಸ್ಥಿತಿ ನಿಯಂತ್ರಣಕ್ಕೆ ತಂದಿದ್ದಾರೆ. ಜೊತೆಗೆ ಕಾಲೇಜ್​ ನಿರ್ದೇಶಕ ಅಕ್ಷಯ್ ತಿವಾರಿ ಸೇರಿದಂತೆ ಹಲವರ ವಿರುದ್ಧ ದೂರು ದಾಖಲು ಮಾಡಿಕೊಂಡಿದ್ದಾರೆ. ಕಾರ್ಯಕ್ರಮ ಆಯೋಜನೆ ಮಾಡಿದ್ದ ಸ್ಥಳದಲ್ಲಿ ಶೇ. 50ಕ್ಕಿಂತಲೂ ಹೆಚ್ಚಿನ ಜನರಿಗ 4 ಅವಕಾಶ ನೀಡಿದ್ದಕ್ಕಾಗಿ ಕೋವಿಡ್ ಮಾರ್ಗಸೂಚಿ ಉಲ್ಲಂಘನೆ ಮಾಡಿದ್ದಕ್ಕಾಗಿ ದೂರು ದಾಖಲಾಗಿದೆ.

ಇದನ್ನೂ ಓದಿರಿ:ಗುಜರಾತ್​​ನಲ್ಲಿ 'ಗರ್ಬಾ'ಕ್ಕೆ ನಿರ್ಬಂಧ, ರಾಜಕೀಯ ರ್ಯಾಲಿಗಳಿಗೆ ಅನುಮತಿ: ಕೋರ್ಟ್​ ಮೊರೆ ಹೋದ ಸಂಘಟಕರು

ಅಕ್ಟೋಬರ್ 7 ರಿಂದ ಒಂಬತ್ತು ದಿನಗಳ ಅವಧಿಯ ನವರಾತ್ರಿ ಉತ್ಸವ ಆರಂಭಗೊಂಡಿದ್ದು, ಈ ವೇಳೆ ಮಧ್ಯಪ್ರದೇಶ, ಗುಜರಾತ್ ಸೇರಿದಂತೆ ಅನೇಕ ರಾಜ್ಯಗಳಲ್ಲಿ ಗರ್ಬಾ ಡ್ಯಾನ್ಸ್ ಮಾಡುವುದು ಸರ್ವೆ ಸಾಮಾನ್ಯವಾಗಿದೆ.

ABOUT THE AUTHOR

...view details