ಮುಂಬೈ:ಸದಾ ಒಂದಿಲ್ಲೊಂದು ವಿವಾದಗಳಿಂದಲೇ ಸುದ್ದಿಯಾಗುತ್ತಿರುವ ಬಾಲಿವುಡ್ ನಟಿ ಕಂಗನಾ ರಣಾವತ್ ವಿರುದ್ಧ ಜಾಮೀನು ರಹಿತ ವಾರಂಟ್ ಜಾರಿಯಾಗಿದೆ.
ಗೀತ ರಚನೆಕಾರ ಜಾವೇದ ಅಖ್ತರ್ ಸಲ್ಲಿಸಿದ್ದ ಮಾನಹಾನಿ ಪ್ರಕರಣದಲ್ಲಿ ವಿಚಾರಣೆಗೆ ಹಾಜರಾಗದೇ ಇದ್ದುದರಿಂದ ಅಂಧೇರಿ ಮೆಟ್ರೋಪಾಲಿಟ್ ಮ್ಯಾಜಿಸ್ಟ್ರೇಟ್ ಕೋರ್ಟ್ ಜಾಮೀನು ರಹಿತ ವಾರಂಟ್ ಜಾರಿಮಾಡಿದೆ.
ಇದಕ್ಕೂ ಮೊದಲು ಫೆ.1ರಂದು ಇದೇ ಕೋರ್ಟ್ ಮಾರ್ಚ್ 1ರ ಒಳಗೆ ವಿಚಾರಣೆಗೆ ಹಾಜರಾಗುವಂತೆ ಕಂಗನಾಗೆ ಸಮನ್ಸ್ ಜಾರಿಮಾಡಿತ್ತು. ಈ ಹಿನ್ನೆಲೆ ಕಂಗನಾ ವಿರುದ್ಧ ಸಮನ್ಸ್ ಜಾರಿಯಾಗಿದ್ದರೂ ವಿಚಾರಣೆಗೆ ಹಾಜರಾಗದಿರುವುದರಿಂದ ಜಾಮೀನು ರಹಿತ ವಾರಂಟ್ ಜಾರಿಮಾಡಲಾಗಿದೆ.