ಹತ್ರಾಸ್ (ಉತ್ತರ ಪ್ರದೇಶ):ಹಥ್ರಾಸ್ ಯುವತಿ ಮೇಲಿನ ಸಾಮೂಹಿಕ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ನಾಲ್ವರು ಆರೋಪಿಗಳ ಪೈಕಿ ಇಬ್ಬರು ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ವಿಶೇಷ ಎಸ್‌ಸಿ/ಎಸ್‌ಟಿ ನ್ಯಾಯಾಲಯ ವಜಾಗೊಳಿಸಿದೆ.
ಪ್ರಕರಣದ ಆರೋಪಿಗಳಾದ ರವಿ ಮತ್ತು ಲವ್‌ಕುಶ್ ಜಾಮೀನು ಕೋರಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಅರ್ಜಿ ವಿಚಾರಣೆ ನಡೆಸಿದ ಹಥ್ರಾಸ್‌ನ ನ್ಯಾಯಾಧೀಶೆ ಬಿ ಡಿ ಭಾರತಿಯವರು, ವಾದ-ಪ್ರತಿವಾದ ಆಲಿಸಿದರು. ಅರ್ಜಿಯನ್ನ ವಜಾಗೊಳಿಸಿ ಆದೇಶ ಹೊರಡಿಸಿದ್ದಾರೆ ಎಂದ ಸಂತ್ರಸ್ತೆಯ ಪರ ವಕೀಲ ಭಾಗೀರಥ್ ಸಿಂಗ್ ತಿಳಿಸಿದ್ದಾರೆ.