ಪುರಿ(ಒಡಿಶಾ): ಗುಂಡಿಚಾ ದೇವಸ್ಥಾನದಲ್ಲಿ 9 ದಿನಗಳ ವಾರ್ಷಿಕ ವಾಸ್ತವ್ಯದ ನಂತರ, ಭಗವಾನ್ ಬಲಭದ್ರ, ದೇವಿ ಸುಭದ್ರ ಮತ್ತು ಭಗವಾನ್ ಜಗನ್ನಾಥ ಇಂದು ಪುರಿಯ ನಿವಾಸ ಶ್ರೀಮಂದಿರಕ್ಕೆ ವಾಪಸ್ ಆಗಲಿದ್ದಾರೆ. ಹೀಗೆ ಗುಂಡಿಚಾ ದೇವಸ್ಥಾನದಿಂದ ತಮ್ಮ ಮೂಲ ದೇವಸ್ಥಾನಕ್ಕೆ ಹಿಂದಿರುಗುವ ಪ್ರಯಾಣವನ್ನು ಬಹುದಾ ಯಾತ್ರೆ ಎಂದು ಕರೆಯಲಾಗುತ್ತದೆ. ಬಹುದಾ ಯಾತ್ರೆ ಸುಗಮವಾಗಿ ನೆರವೇರಿಸಲು ಒಡಿಶಾ ಸರ್ಕಾರ ಸಕಲ ವ್ಯವಸ್ಥೆಯನ್ನೂ ಮಾಡಿದೆ.
ಗುಂಡಿಚಾ ದೇವಸ್ಥಾನದೊಳಗೆ ಒಂದು ವಾರ ಕಳೆದ ನಂತರ, ದೇವತೆಗಳು 10 ನೇ ದಿನದಂದು ತಮ್ಮ ಬಹುದಾ ಯಾತ್ರೆ ನಡೆಯಲಿದೆ. ರಥ ಯಾತ್ರೆಯ ಸಮಯದಲ್ಲಿ ನಡೆಯುವ ಆಚರಣೆಯೇ ಬಹುದಾಯಾತ್ರೆ ವೇಳೆಯೂ ನಡೆಯಲಿದೆ. ಜಗನ್ನಾಥನ ರಥಯಾತ್ರೆಯಂದು ನಡೆಯುವ ಎಲ್ಲ ನಿಯಮಗಳು ಈ ಯಾತ್ರೆಯಲ್ಲೂ ಪಾಲನೆ ಆಗಲಿವೆ. ಭಗವಾನ್ ಜಗನ್ನಾಥ, ಬಲಭದ್ರ ಹಾಗೂ ಸುಭದ್ರಾ ತಮ್ಮ ಮೂಲ ಆವಾಸಕ್ಕೆ ಹಿಂದಿರುಗುವ ಪ್ರಯಾಣದ ಸಮಯದಲ್ಲಿ, ಮೂರು ರಥಗಳು ಅರ್ಧಸಾನಿ ದೇವಾಲಯ ಎಂದೂ ಕರೆಯಲ್ಪಡುವ ಮೌಸಿಮಾ ದೇವಾಲಯದಲ್ಲಿ ಸ್ವಲ್ಪ ಸಮಯದವರೆಗೆ ವಿರಮಿಸುತ್ತವೆ. ಈ ದೇವಾಲಯವು ಜಗನ್ನಾಥನ ಚಿಕ್ಕಮ್ಮನಿಗೆ ಸಮರ್ಪಿತವಾಗಿದೆ. ಇಲ್ಲಿ ಮೂರು ದೇವತೆಗಳಿಗೆ ಅಕ್ಕಿ, ತೆಂಗಿನಕಾಯಿ, ಉದ್ದಿನಬೇಳೆ ಮತ್ತು ಬೆಲ್ಲದಿಂದ ಮಾಡಿದ ವಿಶೇಷ ಸಿಹಿಯಾದ 'ಪೋಡಾ ಪಿತಾ'ವನ್ನು ಅರ್ಪಿಸಲಾಗುತ್ತದೆ.
ಒಡಿಸ್ಸಿ ಮತ್ತು ಗೋಟಿಪುವಾ ನೃತ್ಯಗಾರರು ರಥಗಳ ಮುಂದೆ ಸಂಗೀತದ ಟ್ಯೂನ್‌ಗೆ ಸೆರೆನೇಡ್ ಮಾಡುತ್ತಾರೆ. ಸಮರ ಕಲಾವಿದರು ದೇವತೆಗಳ ಮುಂದೆ ಸಾಂಪ್ರದಾಯಿಕ ಸಮರ ಕಲೆಯಾದ ಬಾನಾಟಿಯನ್ನು ಪ್ರದರ್ಶಿಸುತ್ತಾರೆ. ದೇವತೆಗಳನ್ನು ಅವರು ಬರುವ ಅದೇ ರಥಗಳಲ್ಲಿ ಕರೆದೊಯ್ಯಲಾಗುತ್ತದೆ, ಭಕ್ತರು ಮತ್ತೆ ಮುಖ್ಯ ದೇವಾಲಯಕ್ಕೆ ಎಳೆಯುತ್ತಾರೆ. ತಮ್ಮ ರಥಗಳ ಮೇಲೆ ದೇವತೆಗಳ ದರ್ಶನ ಪಡೆಯುವುದು ಮಂಗಳಕರ ಎಂದು ಪರಿಗಣಿಸಲಾಗಿದೆ.