ಕರ್ನಾಟಕ

karnataka

ETV Bharat / bharat

ಚಮೋಲಿಯಲ್ಲಿ ಭಾರಿ ಮಳೆ.. ಬದ್ರಿನಾಥ್ ರಾಷ್ಟ್ರೀಯ ಹೆದ್ದಾರಿಗೆ ಹಾನಿ - ಲಂಬಗಡ್ ಪ್ರದೇಶದಲ್ಲಿ ಭಾರೀ ಮಳೆ

ಚಮೋಲಿಯಲ್ಲಿ ಸುರಿಯುತ್ತಿರುವ ಭಾರಿ ಮಳೆಯಿಂದ ನದಿಗಳು ಮತ್ತು ತೊರೆಗಳು ತುಂಬಿ ಹರಿಯುತ್ತಿದ್ದು, ಲಂಬಗಡ್ ಪ್ರದೇಶದಲ್ಲಿ ಚರಂಡಿಗಳು ಉಕ್ಕಿ ಹರಿದು ಹಲವು ಅನಾಹುತಗಳಿಗೆ ಕಾರಣವಾಗಿದೆ.

badrinath-national-highway-damaged-due-to-heavy-rain-in-chamoli
ಚಮೋಲಿಯಲ್ಲಿ ಸುರಿದ ಭಾರೀ ಮಳೆಗೆ ಬದ್ರಿನಾಥ್​ ರಾಷ್ಟ್ರೀಯ ಹೆದ್ದಾರಿಗೆ ಹಾನಿಯಾಗಿದೆ

By

Published : May 20, 2021, 5:09 PM IST

ಚಮೋಲಿ(ಉತ್ತರಾಖಂಡ):ಲಂಬಗಡ್ ಪ್ರದೇಶದಲ್ಲಿ ಸುರಿದ ಭಾರಿ ಮಳೆಯಿಂದಾಗಿ ಖಚರಾ ಮತ್ತು ಲಂಬಗಡ್ ಚರಂಡಿಗಳಲ್ಲಿ ನೀರು ತುಂಬಿದ ಪರಿಣಾಮ ಬದ್ರಿನಾಥ್ ರಾಷ್ಟ್ರೀಯ ಹೆದ್ದಾರಿ -7ರ ಅನೇಕ ಸ್ಥಳಗಳಲ್ಲಿ ಹಾನಿಯಾಗಿದೆ.

ಇಲ್ಲಿನ ಹಿಮನದಿ ತುಂಬಿ ಹರಿದು ಹತ್ತಿರದ ಅಂಗಡಿಗಳಿಗೂ ಹಾನಿಯಾಗಿದ್ದು, ಅಲ್ಲದೇ ಬದ್ರಿನಾಥ್‌ಗೆ ಹೋಗುವ ರಸ್ತೆ ಲಂಬಾದ್‌ನಲ್ಲಿ ಕೊಚ್ಚಿಹೋಗಿದೆ. ಹಾಗೆಯೇ ಒಂದು ಟ್ರಕ್ ಕೂಡ ಮಧ್ಯದ ಚರಂಡಿಯಲ್ಲಿ ಸಿಲುಕಿರುವುದು ಕಂಡುಬಂದಿದೆ.

ಚಮೋಲಿಯಲ್ಲಿ ಸುರಿದ ಭಾರಿ ಮಳೆಗೆ ಬದ್ರಿನಾಥ್​ ರಾಷ್ಟ್ರೀಯ ಹೆದ್ದಾರಿಗೆ ಹಾನಿಯಾಗಿರುವ ದೃಶ್ಯ

ಹವಾಮಾನ ಇಲಾಖೆಯ ಮುನ್ಸೂಚನೆಯ ಪ್ರಕಾರ, ಚಮೋಲಿಯಲ್ಲಿ ಸುರಿಯುತ್ತಿರುವ ಭಾರಿ ಮಳೆಯಿಂದ ನದಿಗಳು ಮತ್ತು ತೊರೆಗಳು ತುಂಬಿ ಹರಿಯುತ್ತಿದ್ದು, ಲಂಬಗಡ್ ಪ್ರದೇಶದಲ್ಲಿ ಚರಂಡಿಗಳು ಉಕ್ಕಿ ಹರಿದು ಹಲವು ಅನಾಹುತಗಳಿಗೆ ಕಾರಣವಾಗಿದೆ.

ಬದ್ರಿನಾಥ್ ರಾಷ್ಟ್ರೀಯ ಹೆದ್ದಾರಿಯ ಲಂಬಗಡ್‌ನಲ್ಲಿ ಸುರಿದ ಮಳೆಗೆ ಚರಂಡಿ ಹಠಾತ್ತನೆ ತುಂಬಿದ ಪರಿಣಾಮ ಸರಕಿನ ಟ್ರಕ್ ರಸ್ತೆ ಮಧ್ಯದ ಚರಂಡಿಗೆ ಸಿಲುಕಿಕೊಂಡಿತ್ತು. ಈ ವೇಳೆ ಚಾಲಕ ಮತ್ತು ಸಹಾಯಕ ಅದೃಷ್ಟವಶಾತ್​​ ಅಪಾಯದಿಂದ ಪಾರಾಗಿದ್ದಾರೆ.

ಓದಿ:ಕೋವಿಡ್​ ಸೋಂಕಿತೆ ಮೇಲೆ ಆಸ್ಪತ್ರೆಯಲ್ಲಿ ಗ್ಯಾಂಗ್​ರೇಪ್; ಮಹಿಳೆ ಸಾವು

ABOUT THE AUTHOR

...view details