ಡೆಹ್ರಾಡೂನ್ (ಉತ್ತರಾಖಂಡ):ಕೇದಾರನಾಥ ದೇಗುಲದಲ್ಲಿನ ಚಿನ್ನದ ಲೇಪನ ಹಗರಣ ಕುರಿತ ವಿವಾದ ಮತ್ತೆ ಭುಗಿಲೆದಿದ್ದೆ. ವಿರೋಧ ಪಕ್ಷದ ನಾಯಕರು ಮಾತ್ರ ಪ್ರಸ್ತಾಪಿಸುತ್ತಿದ್ದ ವಿಷಯವನ್ನು, ಇದೀಗ ದೇವಸ್ಥಾನದ ಸಮಿತಿ ಸದಸ್ಯರು ಈ ಬಗ್ಗೆ ಎಸ್‌ಐಟಿ ತನಿಖೆ ನಡೆಸುವಂತೆ ಒತ್ತಾಯಿಸಿ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಅವರಿಗೆ ಪತ್ರ ಬರೆದಿದ್ದಾರೆ. ಈ ಬಗ್ಗೆ ಉನ್ನತ ಮಟ್ಟದ ತನಿಖೆ ನಡೆಸಬೇಕು ಎಂದು ಕಾಂಗ್ರೆಸ್ ಕೂಡ ಆಗ್ರಹಿಸಿದೆ. ಆದರೆ, ಈ ಕುರಿತು ಬಿಕೆಟಿಸಿ ಅಧ್ಯಕ್ಷ ಅಜೇಂದ್ರ ಅಜಯ್ ಸದಸ್ಯರ ವಿರುದ್ಧವೇ ವಾಗ್ದಾಳಿ ನಡೆಸಿದ್ದಾರೆ. ಅಕ್ರಮಗಳ ಬಗ್ಗೆ ತನಿಖೆ ಆರಂಭಿಸಿದ ಸದಸ್ಯರೇ ಈಗ ಸಿಎಂಗೆ ಪತ್ರ ಬರೆದಿದ್ದಾರೆ ಎಂದು ತಿರುಗೇಟು ಕೊಟ್ಟಿದ್ದಾರೆ.
ದೇವಸ್ಥಾನ ಸಮಿತಿಯ ಹಲವು ಸದಸ್ಯರು ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಅವರಿಗೆ 18 ಮೇ 2023 ರಂದು ಮತ್ತು ಸಮಿತಿ ಅಧ್ಯಕ್ಷ ಅಜೇಂದ್ರ ಅಜಯ್ ಅವರಿಗೆ 12 ಜುಲೈ 2023 ರಂದು ಬರೆದ ಪತ್ರಗಳಲ್ಲಿ, ಅಜೇಂದ್ರ ಅಜಯ್ ಅವರ ಸಹೋದರನ ಸಂಬಳ, ದೇವಸ್ಥಾನದಲ್ಲಿ ಮಲಗುವುದು, ಪಾಲಿಕೆ ಸಭೆಯಲ್ಲಿ ಸದಸ್ಯರನ್ನು ನಿರ್ಲಕ್ಷಿಸಿರುವುದು, ವಿಐಪಿ ಪ್ರೋಟೋಕಾಲ್‌ನಲ್ಲಿ ಸದಸ್ಯರನ್ನು ನಿರ್ಲಕ್ಷಿಸಿರುವುದು, ಗರ್ಭಗುಡಿಯಲ್ಲಿ ಫೋಟೋ ತೆಗೆಯುವುದು ಮತ್ತು ರೀಲ್ಸ್ ಮಾಡುವ ಬಗ್ಗೆ ಪ್ರಶ್ನೆಗಳು ಸೇರಿದಂತೆ 21 ಅಂಶಗಳ ಬಗ್ಗೆ ಪ್ರಸ್ತಾಪಿಸಿದ್ದರು.
2023ರ ಜುಲೈ 12ರಂದು ದೇವಸ್ಥಾನ ಸಮಿತಿ ಅಧ್ಯಕ್ಷ ಅಜೇಂದ್ರ ಅಜಯ್ ಅವರಿಗೆ ಬರೆದಿರುವ ಪತ್ರದಲ್ಲಿ ಈಗಿನ ಕೇದಾರನಾಥ ದೇವಾಲಯದ ಗರ್ಭಗುಡಿಯಲ್ಲಿ ಚಿನ್ನ ಲೇಪನ ವಿವಾದವ ಬಗ್ಗೆ ಪ್ರಶ್ನಿಸಲಾಗಿದೆ . ಈ ವಿವಾದದ ನಂತರ, ಯಾವುದೇ ದಾನಿ ಇನ್ನು ಮುಂದೆ ದಾನ ಮಾಡಲು ಆಸಕ್ತಿ ತೋರುವುದಿಲ್ಲ, ಏಕೆಂದರೆ ಈ ವಿವಾದವು ಪ್ರಪಂಚದಾದ್ಯಂತ ಚರ್ಚೆಯ ವಿಷಯವಾಗಿದೆ ಮತ್ತು ಜನರು ತಮ್ಮ ಚಿನ್ನವೂ ಹಿತ್ತಾಳೆಯಾಗಬಹುದು ಎಂದು ಯೋಚಿಸುತ್ತಿದ್ದಾರೆ ಎಂದು ಪತ್ರದಲ್ಲಿ ಉಲ್ಲೆಖಿಸಿಲಾಗಿದೆ. ಪತ್ರದಲ್ಲಿ ಕೇದಾರನಾಥನ ಗರ್ಭಗುಡಿಯಲ್ಲಿ ಚಿನ್ನ ಲೇಪನ ಮಾಡುವ ಪ್ರಸ್ತಾವನೆಯನ್ನು ಯಾವ ಸಭೆಯಲ್ಲಿ ಅಂಗೀಕರಿಸಲಾಗಿದೆ ಎಂಬ ಬಗ್ಗೆ ಅಧ್ಯಕ್ಷರಿಂದ ಸ್ಪಷ್ಟನೆ ಕೇಳಲಾಗಿದೆ.