ಕರ್ನಾಟಕ

karnataka

ETV Bharat / bharat

ಬ್ಯಾಡ್ಮಿಂಟನ್​ ಆಟಗಾರ್ತಿ ಆತ್ಮಹತ್ಯೆ.. ಸಾವಿಗೂ ಮುನ್ನ ಸಹೋದರಿಗೆ ಬಂತು WhatsApp ಸಂದೇಶ! - ಆಂಧ್ರಪ್ರದೇಶದಲ್ಲಿ ಬ್ಯಾಡ್ಮಿಂಟನ್​ ಆಟಗಾರ್ತಿ ಆತ್ಮಹತ್ಯೆ

Badminton Player Suicide: ಖಾಸಗಿ ಕಾಲೇಜ್​​ನಲ್ಲಿ ವ್ಯಾಸಂಗ ಮಾಡ್ತಿದ್ದ ವಿದ್ಯಾರ್ಥಿನಿಯೋರ್ವಳು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಆಂಧ್ರಪ್ರದೇಶದಲ್ಲಿ ನಡೆದಿದೆ.

Badminton Player Suicide in Andra pradesh
Badminton Player Suicide in Andra pradesh

By

Published : Dec 28, 2021, 3:32 PM IST

ಪೂರ್ವ ಗೋದಾವರಿ(ಆಂಧ್ರಪ್ರದೇಶ):ಕಿರಿಯರ ವಿಭಾಗದ ಬ್ಯಾಡ್ಮಿಂಟನ್​ ಟೂರ್ನಿಯಲ್ಲಿ ಗಮನಾರ್ಹ ಪ್ರದರ್ಶನ ನೀಡಿದ್ದ ಆಟಗಾರ್ತಿಯೋರ್ವಳು ಆತ್ಮಹತ್ಯಗೆ ಶರಣಾಗಿದ್ದಾಳೆ. ಆಂಧ್ರಪ್ರದೇಶದ ಪೂರ್ವ ಗೋದಾವರಿ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ.

ಇವರ ತಂದೆ ಮೀನು ವ್ಯಾಪಾರಿ ಆಗಿದ್ದು, ಮನೆಯ ಬಗ್ಗೆ ಹೆಚ್ಚಿನ ತಲೆ ಕೆಡಿಸಿಕೊಳ್ಳುತ್ತಿರಲಿಲ್ಲ. ಹೀಗಾಗಿ, ಭವಿಷ್ಯದಲ್ಲಿ ಆರ್ಥಿಕ ತೊಂದರೆಯಾಗಬಹುದೆಂಬ ಕಾರಣದಿಂದಾಗಿ ವಿದ್ಯಾರ್ಥಿನಿ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ತಿಳಿದು ಬಂದಿದೆ.

ಪೂರ್ವ ಗೋದಾವರಿ ಜಿಲ್ಲೆಯ ಜಿಎಂಸಿ ಬಾಲಯೋಗಿ ಕಾಲೋನಿಯಲ್ಲಿ ವಾಸವಾಗಿದ್ದ ಧರ್ಮರಾವ್​ ಅವರ ಕಿರಿಯ ಪುತ್ರಿ ಆದಿಲಕ್ಷ್ಮಿ ಆತ್ಮಹತ್ಯೆಗೆ ಶರಣಾದವಳು. 2019 ಮತ್ತು 2020ರಲ್ಲಿ ನಡೆದ ಜೂನಿಯರ್​ ನ್ಯಾಷನಲ್ಸ್​ ಬ್ಯಾಡ್ಮಿಂಟನ್​​ ಟೂರ್ನಿಯಲ್ಲಿ ಆದಿಲಕ್ಷ್ಮಿ ಗಮನಾರ್ಹ ಪ್ರದರ್ಶನ ನೀಡಿದ್ದಳು.

ಇದನ್ನೂ ಓದಿರಿ:ದೇಶದಲ್ಲಿ ಮತ್ತೆ ಕೋವಿಡ್​ ಉಲ್ಬಣ​.. ಮಹಾರಾಷ್ಟ್ರದ ಶಿಕ್ಷಣ ಸಚಿವೆ, ಟಿಎಂಸಿ ಸಂಸದನಿಗೆ ಕೊರೊನಾ

ಸಹೋದರಿಗೆ ವಾಟ್ಸಾಪ್​ ಸಂದೇಶ

ಆತ್ಮಹತ್ಯೆ ಮಾಡಿಕೊಳ್ಳುವುದಕ್ಕೂ ಮುಂಚಿತವಾಗಿ ಸಹೋದರಿಗೆ ವಾಟ್ಸಾಪ್​ ಸಂದೇಶ ರವಾನೆ ಮಾಡಿರುವ ಆದಿಲಕ್ಷ್ಮಿ, ಸಾಯುವುದಕ್ಕೆ ಇಷ್ಟವಿಲ್ಲ. ಆದರೆ, ನಮ್ಮ ಭವಿಷ್ಯಕ್ಕಾಗಿ ಅಜ್ಜಿ ಹೆದರುತ್ತಾರೆ. ಅಪ್ಪ ಮನೆಯ ಯಾವುದೇ ವಿಚಾರದ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ. ಸದ್ಯ ಅಜ್ಜಿಯ ಆರೋಗ್ಯ ಕೂಡ ಸರಿಯಿಲ್ಲ. ಭವಿಷ್ಯದಲ್ಲಿ ಏನಾಗುತ್ತದೆ ಎಂಬ ಭಯವಿದೆ. ಹೀಗಾಗಿ ಬದುಕಲು ಇಷ್ಟವಿಲ್ಲ. ಕ್ಷಮಿಸಿ, ಕುಟುಂಬದ ಸಂಪೂರ್ಣ ಜವಾಬ್ದಾರಿ ನೋಡಿಕೋ ಎಂಬ ಸಂದೇಶ ರವಾನಿಸಿದ್ದಾಳೆ.

ಇದರ ಬೆನ್ನಲ್ಲೇ ಸೋಮವಾರ ಬೆಳಗ್ಗೆ ದೇವರಕೋಣೆಗೆ ತೆರಳಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ತಕ್ಷಣವೇ ಆಕೆಯನ್ನ ಆಸ್ಪತ್ರೆಗೆ ದಾಖಲು ಮಾಡಲಾಯಿತು. ಆದ್ರೆ ಅಷ್ಟರಲ್ಲಿ ಆಕೆ ಸಾವನ್ನಪ್ಪಿದ್ದಾಗಿ ವೈದ್ಯರು ದೃಢಪಡಿಸಿದ್ದಾರೆ. ಖಾಸಗಿ ಕಾಲೇಜ್​​ನಲ್ಲಿ ಶಿಕ್ಷಣ ಪಡೆಯುತ್ತಿದ್ದ ಆದಿಲಕ್ಷ್ಮಿ ಜನವರಿ ತಿಂಗಳಲ್ಲಿ ನಡೆಯಲಿರುವ ಶಾಲಾ ಕ್ರೀಡಾಕೂಟಕ್ಕಾಗಿ ಭರ್ಜರಿ ತಯಾರಿ ನಡೆಸಿದ್ದಳು.

For All Latest Updates

ABOUT THE AUTHOR

...view details