ಶ್ರೀನಗರ (ಜಮ್ಮು ಮತ್ತು ಕಾಶ್ಮೀರ): ಇಲ್ಲಿನ ಬಾದಾಮ್ವಾರಿ ಉದ್ಯಾನ ಬಾದಾಮಿ ಹೂವುಗಳಿಂದ ಸಂಪೂರ್ಣವಾಗಿ ಕಂಗೊಳಿಸುತ್ತಿದ್ದು, ಪ್ರವಾಸಿಗರನ್ನು ಆಕರ್ಷಸುತ್ತಿದೆ. ಈ ಪ್ರಕೃತಿ ಸೌಂದರ್ಯವನ್ನು ಸವಿಯಲು ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಉದ್ಯಾನಕ್ಕೆ ಆಗಮಿಸುತ್ತಿದ್ದಾರೆ. ಕಳೆದ ವಾರದಿಂದ ಬಾದಮ್ವಾರಿ ಉದ್ಯಾನಕ್ಕೆ ಅಧಿಕೃತವಾಗಿ ಸಾರ್ವಜನಿಕರಿಗೆ ಪ್ರವೇಶವನ್ನು ಕಲ್ಪಿಸಲಾಗಿದ್ದು, ಪ್ರತಿದಿನ ಸಾವಿರಾರು ಪ್ರವಾಸಿಗರು ಉದ್ಯಾನಕ್ಕೆ ಆಗಮಿಸುತ್ತಿದ್ದಾರೆ.
ಕೋಹ್-ಎ-ಮರನ್ ತಪ್ಪಲಿನಲ್ಲಿ ನೆಲಗೊಂಡಿರುವ ಬಾದಾಮ್ವಾರಿ ಉದ್ಯಾನವು ಛಾಯಗ್ರಾಹಕರ ಸ್ವರ್ಗ ಎಂದೇ ಹೇಳಬಹುದು. ಎತ್ತರದ ಜಬರ್ವಾನ್ ಪರ್ವತ ಶ್ರೇಣಿಗಳೊಂದಿಗೆ ಬಾದಮಿ ಹೂವುಗಳು ಕ್ಯಾಮರಾದಲ್ಲಿ ಅದ್ಭುತವಾದ ದೃಶ್ಯ ಸೆರೆಹಿಡಿಯುತ್ತದೆ. ಉದ್ಯಾನದ ಸೌಂದರ್ಯವನ್ನು ಆನಂದಿಸಲು ನೋಯ್ಡಾದಿಂದ ಆಗಮಿಸಿದ್ದ ಪ್ರವಾಸಿಗರರೊಬ್ಬರು ಮಾತನಾಡಿ, ‘‘ಬಾದಾಮ್ವಾರಿ ಗಾರ್ಡನ್ಗೆ ಬರುವುದು ‘‘ಸ್ವರ್ಗದಂತಹ ಅನುಭವ’’ವನ್ನು ನೀಡುತ್ತದೆ. ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಕಾಶ್ಮೀರಕ್ಕೆ ಭೇಟಿ ನೀಡಬೇಕು, ವಿಶೇಷವಾಗಿ ವಸಂತಕಾಲದ ಬಾದಾಮ್ವಾರಿ ಗಾರ್ಡನ್ಗೆ ಬಂದು ಬಾದಮಿ ಹೂವುಗಳನ್ನು ಕಣ್ತುಂಬಿಕೊಳ್ಳಬೇಕು. ಈ ಪ್ರದೇಶವು ಮಾಲಿನ್ಯಗಳಿಂದ ದೂರವಿರುವ ಸುಂದರ ಸ್ಥಳವಾಗಿದೆ’’ ಎಂದು ಹೇಳಿದರು.
ನೋಯ್ಡಾದ ಮತ್ತೋರ್ವ ಪ್ರವಾಸಿ ಮಾತನಾಡಿ, ಈ ಸ್ಥಳವು ‘‘ಮನಸ್ಸಿಗೆ ಶಾಂತಿಯನ್ನು ನೀಡುತ್ತದೆ ಮತ್ತು ಜನರು ಇಲ್ಲಿಗೆ ಬಂದು ಪ್ರಕೃತಿಯ ಸೌಂದರ್ಯವನ್ನು ಸವಿಯಬೇಕು ಎಂದು ಹೇಳಿದರು. ದೆಹಲಿ ಛಾಯಗ್ರಾಹಕ ಜಾವೇದ್-ಉಲ್-ಇಸ್ಲಾಂ ಮಾತನಾಡಿ, ‘‘ಕಾಶ್ಮೀರವು ಸುಂದರವಾದ ಸ್ಥಳಗಳಿಂದ ಆಶೀರ್ವಧಿಸಲ್ಪಟ್ಟಿದೆ, ಅದರಲ್ಲಿ ಬಾದಾಮ್ವಾರಿ ಉದ್ಯಾನವು ಒಂದು. ಅದ್ಭುತವಾದ ಚಿತ್ರಗಳನ್ನು ಕ್ಲಿಕ್ಕಿಸಲು ಇದು ಸುಂದರವಾದ ಸ್ಥಳವಾಗಿದೆ. ಹೆಚ್ಚಿನ ಸಂಖ್ಯೆಯಲ್ಲಿ ಬೇರೆ ಬೇರೆ ರಾಜ್ಯದ ಪ್ರವಾಸಿಗರು ಇಲ್ಲಿಗೆ ಭೇಟಿ ನೀಡಬೇಕು’’ ಎಂದು ಹೇಳಿದರು.