ನವದೆಹಲಿ:ಇಂದು ಬೆಳಗ್ಗೆ ದೆಹಲಿ-ಎನ್‌ಸಿಆರ್‌ನ ಕೆಲವು ಭಾಗಗಳಲ್ಲಿ ಗುಡುಗು ಸಹಿತ ಭಾರಿ ಮಳೆಯಾಗಿದೆ. ಭಾರಿ ಮಳೆಯಿಂದಾಗಿ ಹವಾಮಾನ ವೈಪರೀತ್ಯ ಉಂಟಾಗಿ ವಿಮಾನ ಸಂಚಾರಕ್ಕೆ ಅಡಚಣೆಯಾಗಿದೆ. ದೆಹಲಿಯ ಇಂದಿರಾಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ (ಇಂದು) ಶನಿವಾರ ಕೆಲವು ವಿಮಾನ ಹಾರಾಟಗಳ ಮೇಲೆ ಪ್ರತಿಕೂಲ ಹವಮಾನ ಪರಿಣಾಮ ಬೀರಿದೆ. ಇದರಿಂದ ವಿಮಾನ ನಿಲ್ದಾಣದ ಅಧಿಕಾರಿಗಳು ಜನರಿಗೆ ನವೀಕೃತ ವಿಮಾನ ಮಾಹಿತಿ ಪಡೆಯಲು ವಿಮಾನಯಾನ ಸಂಸ್ಥೆಗಳನ್ನು ಸಂಪರ್ಕಿಸುವಂತೆ ಸಲಹೆ ನೀಡಿದ್ದಾರೆ.
ಉತ್ತರದಲ್ಲಿ ಹಠಾತ್ ಬದಲಾವಣೆಯ ಹವಾಮಾನದಿಂದ ಈಗ ಇರುವ ಬಿಸಿಲಿನ ತಾಪಮಾನ ಸ್ವಲ್ಪ ಕಡಿಮೆಯಾಗಬಹುದೆಂದು ನಿರೀಕ್ಷಿಸಲಾಗಿದೆ. ಬಿಸಿಲಿನ ಝಳಕ್ಕೆ ಉತ್ತರ ಭಾರತದ ಮಂದಿ ನಲುಗಿ ಹೋಗಿದ್ದರು. ದೆಹಲಿಯಲ್ಲಿ ಮೊನ್ನೆ ದಾಖಲೆಯ ತಾಪಮಾನವು ಕಂಡು ಬಂದಿತ್ತು. ಇದೀಗ ವರುಣನ ಕೃಪೆಯಿಂದ ಜನರಿಗೆ ಅತಿಯಾದ ತಾಪಮಾನದಿಂದ ವಿರಾಮ ದೊರಕಿದಂತಾಗಿದೆ. ಇನ್ನು ಈ ಮೊದಲೇ ಭಾರತೀಯ ಹವಾಮಾನ ಇಲಾಖೆ ದೆಹಲಿ ಮತ್ತು ಅದರ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಶನಿವಾರ ಬೆಳಗ್ಗೆ ಮಳೆ ಮತ್ತು ಗುಡುಗು ಸಹಿತ ಮಳೆಯಾಗಲಿದೆ ಎಂದು ಮುನ್ಸೂಚನೆ ನೀಡಿತ್ತು.
ಎಲ್ಲೆಲ್ಲಿ ಸುರಿಯಲಿದೆ ಮಳೆ :ಮಧ್ಯಮ ತೀವ್ರತೆಯ ಮಳೆ-ಗುಡುಗು, ಧೂಳು ಸಹಿತ ಬಿರುಗಾಳಿ ಗಂಟೆಗೆ 40-70 ಕಿಮೀ ವೇಗದಲ್ಲಿ ದೆಹಲಿ, NCR (ಲೋನಿ ದೇಹತ್, ಹಿಂಡನ್ ಎಎಫ್ ಸ್ಟೇಷನ್, ಬಹದ್ದೂರ್ಗಢ್, ಘಾಜಿಯಾಬಾದ್, ಇಂದಿರಾಪುರಂ, ಛಾಪ್ರೌಲಾ, ಅಕ್ಕಪಕ್ಕದ ಪ್ರದೇಶಗಳಲ್ಲಿ ಸಂಭವಿಸುತ್ತದೆ. ನೋಯ್ಡಾ, ಗ್ರೇಟರ್ ನೋಯ್ಡಾ, ಗುರುಗ್ರಾಮ್, ಫರಿದಾಬಾದ್, ಮಾನೇಸರ್, ಬಲ್ಲಭಗಢ) ಯಮುನಾನಗರ, ಕುರುಕ್ಷೇತ್ರ, ಕೈತಾಲ್, ನರ್ವಾನಾ, ಕರ್ನಾಲ್, ರಾಜೌಂಡ್, ಅಸ್ಸಂದ್, ಸಫಿಡಾನ್, ಬರ್ವಾಲಾ, ಪಾಣಿಪತ್, ಆದಂಪುರ್, ಹಿಸ್ಸಾರ್, ಗೊಹಾನಾ, ಗನ್ನೌರ್, ಸಿವಾನಿ, ಮೆಹಮ್, ರೊಹ್ತ್ ತೋಕಸ್.