ಜಮ್ಮು( ಜಮ್ಮು- ಕಾಶ್ಮೀರ): ಮುಖ್ಯ ಕಾರ್ಯದರ್ಶಿ ಅರುಣ್ ಕುಮಾರ್ ಮೆಹ್ತಾ ಅಧ್ಯಕ್ಷತೆಯಲ್ಲಿ ಬ್ಯಾಕ್ ಟು ವಿಲೇಜ್ ಕಾರ್ಯಕ್ರಮ ಯಶಸ್ವಿಯಾಗಿ ಮುಂದುವರೆದಿದೆ. ನವೆಂಬರ್ 8 ರಂದು ನಡೆದ ನಾಲ್ಕನೇ ಹಂತದ ಬ್ಯಾಕ್-ಟು-ವಿಲೇಜ್ ಕಾರ್ಯಕ್ರಮದಲ್ಲಿ ಶಾಲೆ ಬಿಟ್ಟ ಸುಮಾರು 14,000 ಮಕ್ಕಳು, ಶಾಲೆಗಳಿಗೆ ಮರು ಸೇರ್ಪಡೆಗೊಂಡಿದ್ದಾರೆ ಎಂದು ಮುಖ್ಯ ಕಾರ್ಯದರ್ಶಿ ಅರುಣ್ ಕುಮಾರ್ ಮೆಹ್ತಾ ಹೇಳಿದ್ದಾರೆ.
ಮಕ್ಕಳು ಮರಳಿ ಶಾಲೆಗೆ ಬಂದಿರುವುದು ಬ್ಯಾಕ್ ಟು ವಿಲೇಜ್ ಕಾರ್ಯಕ್ರಮದ ದೊಡ್ಡ ಸಾಧನೆಯಾಗಿದೆ ಎಂದ ಮುಖ್ಯ ಕಾರ್ಯದರ್ಶಿ, ಶಾಲೆಗೆ ಸೇರಿರುವ ಮಕ್ಕಳಿಗೆ ಉತ್ತಮ ಗುಣಮಟ್ಟದ ಶಿಕ್ಷಣ ನೀಡುವ ಭರವಸೆ ನೀಡಿದರು.
ಕೋಳಿ ಸಾಕಾಣಿಕೆ, ವಸತಿ, ಸಾರಿಗೆ ಮತ್ತು ಆರೋಗ್ಯದಂತಹ ಕ್ಷೇತ್ರಗಳಲ್ಲಿ ಒಟ್ಟು 277 ಸಹಕಾರ ಸಂಘಗಳನ್ನು ನೋಂದಾಯಿಸಲಾಗಿದೆ. ಬ್ಯಾಕ್ ಟು ವಿಲೇಜ್ ಯೋಜನೆಯ ಭಾಗಔಆಗಿ 8.46 ಲಕ್ಷ ಜನರನ್ನು 'ಅಪ್ಕಿ ಜಮೀನ್ ಆಪ್ಕಿ ನಿಗ್ರಾನಿ' ಪೋರ್ಟಲ್‌ಗೆ ಪರಿಚಯಿಸಲಾಗಿದ್ದು, ಮೂಲ ದಾಖಲೆಗಳನ್ನು ಪೋರ್ಟಲ್ ಮೂಲಕ ಅಪ್ಲೋಡ್ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.