ಮಣಿಪುರ/ಅರುಣಾಚಲ ಪ್ರದೇಶ: ಭಾರತದ ಈಶಾನ್ಯ ಭಾಗದಲ್ಲಿ ತಡರಾತ್ರಿ ಭೂಮಿ ನಡುಗಿದ ಅನುಭವವಾಗಿದೆ. ಅರುಣಾಚಲ ಪ್ರದೇಶ ಹಾಗೂ ಮಣಿಪುರದ ಎರಡು ಪ್ರದೇಶಗಳ ಜನರಿಗೆ ಭೂಮಿ ಕಂಪಿಸಿದ ಅನುಭವವಾಗಿದೆ. ಈ ಘಟನೆಗಳಲ್ಲಿ ಯಾವುದೇ ಸಾವು-ನೋವು ಅಥವಾ ಆಸ್ತಿಗೆ ಹಾನಿ ವರದಿಯಾಗಿಲ್ಲ ಎಂದು ರಾಷ್ಟ್ರೀಯ ಭೂಕಂಪನಶಾಸ್ತ್ರ ಕೇಂದ್ರ (ಎನ್ಸಿಎಸ್) ಮಾಹಿತಿ ನೀಡಿದೆ.
ಮೊದಲು ಅರುಣಾಚಲ ಪ್ರದೇಶದ ಪಂಗಿನ್ ಬಳಿ ತಡರಾತ್ರಿ 1.02 ಗಂಟೆಯ ಸುಮಾರಿಗೆ ಭೂಕಂಪನ ಉಂಟಾಗಿದ್ದು, ರಿಕ್ಟರ್ ಮಾಪಕದಲ್ಲಿ 3.1ರಷ್ಟು ತೀವ್ರತೆ ದಾಖಲಾಗಿದೆ. ಪಂಗಿನ್‌ನಿಂದ ವಾಯುವ್ಯಕ್ಕೆ 95 ಕಿಲೋ ಮೀಟರ್ ದೂರದಲ್ಲಿ ಹಾಗೂ 17 ಕಿಲೋ ಮೀಟರ್ ಆಳದ ಭೂಕಂಪನದ ಕೇಂದ್ರ ಬಿಂದು ದಾಖಲಾಗಿದೆ.