ಕರ್ನಾಟಕ

karnataka

ETV Bharat / bharat

ಬೆಡ್​ ಸಿಗದೆ ಒಂದೂವರೆ ವರ್ಷದ ಕೋವಿಡ್ ಸೋಂಕಿತ ಹೆಣ್ಣು ಮಗು ಸಾವು - ಬೆಡ್​ಗಳ ಕೊರತೆಯಿಂದ ಮಗು ಸಾವು

ವಿಶಾಖಪಟ್ಟಣಂನಲ್ಲಿರುವ ಕಿಂಗ್ ಜಾರ್ಜ್ ಆಸ್ಪತ್ರೆಯಲ್ಲಿ ಬೆಡ್ ಸಿಗದೆ ಒಂದೂವರೆ ವರ್ಷದ ಹೆಣ್ಣು ಮಗು ಸಾವನ್ನಪ್ಪಿದ್ದು, ಆಸ್ಪತ್ರೆ ಬಳಿ ಉದ್ವಿಗ್ನ ಸ್ಥಿತಿಗೆ ಕಾರಣವಾಗಿತ್ತು.

Baby girl dies of Covid waiting for a hospital bed in Vizag
ಬೆಡ್​ ಸಿಗದೆ ಒಂದೂವರೆ ವರ್ಷದ ಕೋವಿಡ್ ಸೋಂಕಿತ ಹೆಣ್ಣು ಮಗು ಸಾವು

By

Published : Apr 28, 2021, 9:23 AM IST

ವಿಶಾಖಪಟ್ಟಣಂ, ಆಂಧ್ರ ಪ್ರದೇಶ:ಆಸ್ಪತ್ರೆಯಲ್ಲಿ ಬೆಡ್ ಸಿಗದೇ ಒಂದೂವರೆ ವರ್ಷದ ಹೆಣ್ಣು ಮಗು ಸಾವನ್ನಪ್ಪಿರುವ ಹೃದಯ ವಿದ್ರಾವಕ ಘಟನೆ ಬಂದರು ನಗರಿ ವಿಶಾಖಪಟ್ಟಣಂನ ಕಿಂಗ್ ಜಾರ್ಜ್ ಆಸ್ಪತ್ರೆಯಲ್ಲಿ ನಡೆದಿದೆ.

ಮೂಲಗಳ ಪ್ರಕಾರ ವಿಶಾಖಪಟ್ಟಣಂ ಜಿಲ್ಲೆಯ ಅಚ್ಚುತಪುರಂ ಮಂಡಲಕ್ಕೆ ಸೇರಿದ ವೀರಬಾಬು ಎಂಬಾತನ ಮಗಳು ಜಾನ್ವಿಕ ಸಾವನ್ನಪ್ಪಿದ್ದಾಳೆ. ಇದಕ್ಕೂ ಮೊದಲು ಆಕೆಗೆ ಶೀತವಿದ್ದ ಕಾರಣ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ವೈದ್ಯರು ಪರೀಕ್ಷಿಸಿ, ಕೋವಿಡ್ ತಪಾಸಣೆಗೆ ಸೂಚಿಸಿದಾಗ ಕೋವಿಡ್ ದೃಢಪಟ್ಟಿದೆ.

ಇದನ್ನೂ ಓದಿ:ಆಮ್ಲಜನಕ ಸಿಗದೆ ಜೈಪುರದ ಆಸ್ಪತ್ರೆಯಲ್ಲಿ ನಾಲ್ವರು ಸೋಂಕಿತರು ಸಾವು

ವೈದ್ಯರ ಸೂಚನೆ ಮೇರೆಗೆ ವಿಶಾಖಪಟ್ಟಣಂನಲ್ಲಿರುವ ಕಿಂಗ್ ಜಾರ್ಜ್ ಆಸ್ಪತ್ರೆಗೆ ತೆರಳಿದ ಅವರು, ಬೆಡ್ ಸಿಗದ ಕಾರಣ ಹೊರಗಡೆಯೇ ಕಾಯುತ್ತಿದ್ದರು. ಸುಮಾರು 90 ನಿಮಿಷಗಳ ಕಾಲ ಕಾದರೂ ಬೆಡ್ ಸಿಕ್ಕಿರಲಿಲ್ಲ. ಆ್ಯಂಬುಲೆನ್ಸ್​ನಲ್ಲಿ ಆಮ್ಲಜನಕ ವ್ಯವಸ್ಥೆ ಮಾಡಲಾಯಿತಾದರೂ ಮಗು ಬಳಲಿ ಸಾವನ್ನಪ್ಪಿದೆ.

ಆಸ್ಪತ್ರೆಯ ವೈದ್ಯರ ನಿರ್ಲಕ್ಷ್ಯವೇ ಮಗುವಿನ ಸಾವಿಗೆ ಕಾರಣ ಎಂದು ಪಾಲಕರು ಆಸ್ಪತ್ರೆಯ ಮುಂದೆ ಆಕ್ರೋಶ ವ್ಯಕ್ತಪಡಿಸಿದ್ದು, ಕೆಲವು ಸಮಯದವರೆಗೆ ಸ್ಥಳದಲ್ಲಿ ಉದ್ವಿಗ್ನ ಪರಿಸ್ಥಿತಿ ಏರ್ಪಟ್ಟಿತ್ತು.

ABOUT THE AUTHOR

...view details