ಕಡಲೂರು (ತಮಿಳುನಾಡು): 13 ವರ್ಷದ ಬಾಲಕನೋರ್ವ ಬೈಕ್ ಚಲಾಯಿಸುವಾಗ 3 ವರ್ಷದ ಬಾಲಕಿಗೆ ಗುದ್ದಿ, ಆಕೆಯ ಸಾವಿಗೆ ಕಾರಣವಾಗಿರುವ ಘಟನೆ ತಮಿಳುನಾಡಿನ ಕಡಲೂರು ಜಿಲ್ಲೆಯಲ್ಲಿ ನಡೆದಿದೆ. ಈ ಘಟನೆ ಸಂಬಂಧ ಆರೋಪಿ ಬಾಲಕ ಮತ್ತು ಆತನ ತಂದೆಯನ್ನೂ ಪೊಲೀಸರು ಬಂಧಿಸಿದ್ದಾರೆ.
ಇಲ್ಲಿನ ವಿಜಯಮಾ ನಗರಂ ಗ್ರಾಮದ ನಿವಾಸಿ ಶಿವಗುರು ಎಂಬುವವರ ಪುತ್ರ ಇಂದು ಬೆಳಗ್ಗೆ ಹೊಲದಲ್ಲಿ ಬೈಕ್ ಸವಾರಿ ಮಾಡುತ್ತಿದ್ದ. ಈ ವೇಳೆ ಮಲಾರ್ವಿಝಿ ಎಂಬ ಬಾಲಕಿಗೆ ಡಿಕ್ಕಿ ಹೊಡೆದು ಸ್ವಲ್ಪ ದೂರ ಎಳೆದುಕೊಂಡು ಹೋಗಿದ್ದಾನೆ. ಪರಿಣಾಮ ಬಾಲಕಿ ಮೃತಪಟ್ಟಿದ್ದಳು.