ಕರ್ನಾಟಕ

karnataka

ETV Bharat / bharat

ನಾಲ್ಕು ಕೈ ಕಾಲುಗಳೊಂದಿಗೆ ವಿಚಿತ್ರ ಹೆಣ್ಣು ಮಗು ಜನನ: ಹುಟ್ಟಿದ 20 ನಿಮಿಷಗಳಲ್ಲೇ ಸಾವು - baby girl born with four arms and legs in chhapra

ಆಪರೇಷನ್​ ಮೂಲಕ ಮಹಿಳೆಗೆ ಹೆರಿಗೆ ಮಾಡಲಾಗಿದ್ದು, ತಾಯಿ ಈಗ ಆರೋಗ್ಯವಾಗಿದ್ದಾಳೆ.

doctor and special girl child
ವೈದ್ಯರು ಹಾಗೂ ವಿಚಿತ್ರ ಹೆಣ್ಣು ಮಗು

By

Published : Jun 13, 2023, 2:58 PM IST

ಛಾಪ್ರಾ:ಬಿಹಾರದ ಛಾಪ್ರಾದಲ್ಲಿರುವ ಸಂಜೀವನಿ ನರ್ಸಿಂಗ್ ಹೋಮ್​ನಲ್ಲಿ ಸರನ್ ಜಿಲ್ಲೆಯ ರಿವಿಲ್‌ಗಂಜ್‌ನ ಪ್ರಸೂತಾ ಪ್ರಿಯಾ ದೇವಿ ಎಂಬ ಹೆಸರಿನ ಮಹಿಳೆಯೊಬ್ಬರು ವಿಚಿತ್ರ ಹೆಣ್ಣು ಮಗುವಿಗೆ ಜನ್ಮ ನೀಡಿರುವ ಘಟನೆ ನಡೆದಿದೆ. ಈ ವಿಚಿತ್ರ ಮಗುವಿಗೆ ತಲೆ, ನಾಲ್ಕು ಕಿವಿಗಳು, ನಾಲ್ಕು ಕಾಲುಗಳು, ನಾಲ್ಕು ಕೈಗಳು, ಎರಡು ಹೃದಯಗಳು ಮತ್ತು ಎರಡು ಬೆನ್ನು ಹುರಿಗಳಿದ್ದು, ಮಗು ಹುಟ್ಟಿದ 20 ನಿಮಿಷಗಳವರೆಗೆ ಜೀವಂತವಾಗಿದ್ದು, ನಂತರ ಸಾವನ್ನಪ್ಪಿದೆ.

ವಿಚಿತ್ರವಾಗಿ ಹುಟ್ಟಿದ ಮಗುವನ್ನು ಕಂಡು ಆಸ್ಪತ್ರೆ ಸಿಬ್ಬಂದಿ ಕೂಡ ಅಚ್ಚರಿಗೊಂಡಿದ್ದಾರೆ. ಈ ವಿಷಯ ಆಸ್ಪತ್ರೆಯಲ್ಲಿ ಹಬ್ಬುತ್ತಿದ್ದಂತೆ, ಸಿಬ್ಬಂದಿ ಹಾಗೂ ಆಸ್ಪತ್ರೆಯಲ್ಲಿದ್ದ ರೋಗಿಗಳಲ್ಲಿ ಚರ್ಚೆಗೆ ಕಾರಣವಾಗಿದೆ.

ಕೆಲವೇ ಜನರಲ್ಲಿ ಈ ರೀತಿ ಕಂಡು ಬರುತ್ತಿದೆ: ಈ ಬಗ್ಗೆ ಆಸ್ಪತ್ರೆಯ ನಿರ್ದೇಶಕ ಡಾ. ಅನಿಲ್ ಕುಮಾರ್ ಮಾತನಾಡಿ, ಇದು ಕೆಲವೇ ಜನರಲ್ಲಿ ಕಾಣಸಿಗುತ್ತದೆ. ಗರ್ಭಾಶಯದಲ್ಲಿ ಒಂದೇ ಅಂಡಾಣುವಿನಿಂದ ಎರಡು ಮಕ್ಕಳು ಹುಟ್ಟಿದಾಗ ಈ ರೀತಿ ಆಗುತ್ತದೆ. ಈ ಪ್ರಕ್ರಿಯೆಯಲ್ಲಿ, ಇಬ್ಬರೂ ಸರಿಯಾದ ಸಮಯಕ್ಕೆ ಬೇರ್ಪಟ್ಟರೆ, ಅವಳಿ ಮಕ್ಕಳು ಹುಟ್ಟುತ್ತಾರೆ. ಆದರೆ ಕೆಲವು ಕಾರಣಗಳಿಂದ ಇಬ್ಬರೂ ಬೇರೆ ಬೇರೆಯಾಗಲು ಸಾಧ್ಯವಾಗುವುದಿಲ್ಲ. ಅಂತಹ ಸಂದರ್ಭದಲ್ಲಿ ಇಂತಹ ಮಕ್ಕಳು ಹುಟ್ಟುತ್ತಾರೆ ಎಂದು ಹೇಳಿದ್ದಾರೆ.

ಆಪರೇಷನ್ ಮೂಲಕ ಹೆಣ್ಣು ಮಗು ಜನನ: ಇಂತಹ ಮಗು ಜನಿಸುವ ಸಮಯದಲ್ಲಿ ಗರ್ಭಿಣಿಯರು ಸಾಕಷ್ಟು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಹಾಗಾಗಿ ಇಂತಹ ಸಂದರ್ಭದಲ್ಲಿ ಸಾಮಾನ್ಯ ಹೆರಿಗೆ ಸಾಧ್ಯವಾಗುವುದಿಲ್ಲ. ಆಪರೇಷನ್​ ಮೂಲಕ ಹೆರಿಗೆ ಮಾಡಿಸಬೇಕಾಗುತ್ತದೆ. ಆಪರೇಷನ್ ಮೂಲಕ ಹೆಣ್ಣು ಮಗು ಜನಿಸಿದ್ದರೂ 20 ನಿಮಿಷದಲ್ಲಿ ಮಗು ಸಾವನ್ನಪ್ಪಿದೆ. ಹೆರಿಗೆ ನೋವು ಕಾಣಿಸಿಕೊಂಡ ಮಹಿಳೆಗೆ ಇದು ಮೊದಲ ಮಗುವಾಗಿದ್ದು, ಹೆರಿಗೆಯಾದ ಬಳಿಕ ಈ ರೀತಿ ಮಗು ಜನಿಸಿರುವ ಬಗ್ಗೆ ತಿಳಿದು ತಾಯಿ ಕೂಡ ಆತಂಕಗೊಂಡಿದ್ದಾರೆ. ಎಲ್ಲಾ ರೀತಿಯ ಪರೀಕ್ಷೆಗಳನ್ನು ನಡೆಸಿ ಆಪರೇಷನ್​ ಮೂಲಕ ಮಗುವನ್ನು ಹೊರತೆಗೆಯಲಾಯಿತು. ಸದ್ಯ ಮಹಿಳೆ ಆರೋಗ್ಯವಾಗಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.

"ಇದು ಮಹಿಳೆಗೆ ಮೊದಲ ಮಗು. ಆಪರೇಷನ್ ನಂತರ ಮಗುವನ್ನು ಹೊರತೆಗೆಯಲಾಯಿತು. ಇದು ಸಾಮಾನ್ಯ ಪ್ರಕರಣವಲ್ಲ. ಕೆಲವು ಸಂದರ್ಭಗಳಲ್ಲಿ ಈ ರೀತಿ ಸಂಭವಿಸುತ್ತದೆ. ಪ್ರಸ್ತುತ ಮಹಿಳೆ ಆರೋಗ್ಯವಾಗಿದ್ದಾರೆ. ನವಜಾತ ಶಿಶು ಜನನದ 20 ನಿಮಿಷಗಳ ನಂತರ ಸಾವನ್ನಪ್ಪಿದೆ" ಎಂದು ಆಸ್ಪತ್ರೆ ನಿರ್ವಾಹಕ ಡಾ. ಅನಿಲ್ ಕುಮಾರ್ ತಿಳಿಸಿದ್ದಾರೆ.

ಇದನ್ನೂ ಓದಿ:ವೈದ್ಯಲೋಕಕ್ಕೆ ಅಚ್ಚರಿ ಮೂಡಿಸಿದ ವಿಚಿತ್ರ ಮಗು: ಒಂದೇ ದೇಹದಲ್ಲಿ ಎರಡು ಹೃದಯ, ನಾಲ್ಕು ಕೈ ಕಾಲು

ABOUT THE AUTHOR

...view details