ಪುಟ್ಟ ಕಂದಮ್ಮಗಳ ಆಟವೇ ಚೆಂದ. ಅದು ನಮ್ಮ ಮಕ್ಕಳೇ ಆಗಿರಬಹುದು ಅಥವಾ ಪ್ರಾಣಿಗಳ ಮರಿಗಳೇ ಆಗಿರಲಿ. ಚಿಕ್ಕ ಚಿಕ್ಕ ಕೈ, ಕಾಲುಗಳಲ್ಲಿ ಆಡುವ ತುಂಟಾಟವೇ ಅಂದ. ನೋಡಲು ಮನಸ್ಸಿಗೆ ಮುದ ನೀಡುವಂತಿರುತ್ತದೆ. ಅಂತಹದ್ದೊಂದು ಪುಟಾಣಿಯ ತುಂಟಾಟದ ವಿಡಿಯೋಗೆ ನೆಟ್ಟಿಗರು ಫುಲ್ ಫಿದಾ ಆಗಿದ್ದಾರೆ.
ಪುಟ್ಟ ಆನೆ ಮರಿಯೊಂದು ಮಡ್ ಬಾಥ್ ಎಂಜಾಯ್ ಮಾಡುವ ದೃಶ್ಯವೊಂದು ಸಾಮಾಜಿಕ ಮಾಧ್ಯಮದ ಬಳಕೆದಾರರ ಮನಗೆದ್ದಿದೆ. ಗುರುವಾರ, ಶೆಲ್ಡ್ರಿಕ್ ವನ್ಯಜೀವಿ ಟ್ರಸ್ಟ್‌ನ ಅಧಿಕೃತ ಟ್ವಿಟರ್ ಖಾತೆಯಲ್ಲಿ ಒಲೋರಿಯನ್ ಎಂಬ ಮರಿಯಾನೆ ಸ್ನಾನ ಮಾಡುವ ವಿಡಿಯೋ ತುಣುಕನ್ನು ಹಂಚಿಕೊಳ್ಳಲಾಗಿದೆ.
ಈ ದೃಶ್ಯದಲ್ಲಿ ಮಣ್ಣಿನಲ್ಲಿ ಮಿಂದೆದ್ದ ಒಲೋರಿಯನ್, ಕೆಸರಿನಲ್ಲಿ ಉರುಳುತ್ತಿರುವುದನ್ನು ಕಾಣಬಹುದು. ಅಲ್ಲದೇ ತನ್ನ ಒಡನಾಡಿಗಳ ಬಳಿಯೂ ತೆರಳಿ ತುಂಟಾವಾಡುತ್ತಿರುವ ದೃಶ್ಯ ಅಂತರ್ಜಾಲ ಬಳಕೆದಾರರ ಗಮನ ಸೆಳೆದಿದೆ.
ಕೀನ್ಯಾ ಮೂಲದ ಈ ವನ್ಯಜೀವಿ ಟ್ರಸ್ಟ್, ಅನಾಥ ಮರಿ ಆನೆಗಳ ರಕ್ಷಣೆ, ಪುನರ್ವಸತಿ ಮತ್ತು ಬಿಡುಗಡೆ ಮೇಲೆ ಕೇಂದ್ರೀಕರಿಸಿದೆ. ಮಸಾಯಿ ಮಾರಾದ ಸಿಯಾನಾ ಪ್ರದೇಶದ ಕುರಿಗಾಹಿಗಳು ತಮ್ಮ ಜಾನುವಾರುಗಳನ್ನು ಹಿಂಬಾಲಿಸಲು ಪ್ರಯತ್ನಿಸುತ್ತಿದ್ದ ಮರಿ ಆನೆಯ ಬಗ್ಗೆ ತಿಳಿಸಿದಾಗ, ಜೂನ್ 2020ರಲ್ಲಿ ಒಲೋರಿಯನ್ ಅನ್ನು ರಕ್ಷಿಸಲಾಯಿತು. ನಿನ್ನೆ ತಡರಾತ್ರಿ ಈ ವಿಡಿಯೋವನ್ನು ಪೋಸ್ಟ್ ಮಾಡಲಾಗಿದೆ. ಇಲ್ಲಿಯವರೆಗೆ, ಇದು 7,000 ವೀಕ್ಷಣೆಗಳನ್ನು ಪಡೆದಿದೆ.
ಓದಿ: ಕೇರಳದಲ್ಲಿ ಹೊಸದಾಗಿ 25 ಸಾವಿರ ಕೋವಿಡ್ ಕೇಸ್; ಸರ್ಕಾರದಿಂದ ಶಾಲಾರಂಭಕ್ಕೆ ಚಿಂತನೆ