ತೆಲಂಗಾಣದಲ್ಲಿ ಮಹಿಳಾ ಸುರಕ್ಷತೆಯ ವಿಭಾಗದಲ್ಲಿ ಬಗ್ಗೆ ಕೆಲಸ ಮಾಡುವ ದಕ್ಷ ಐಪಿಎಸ್ ಅಧಿಕಾರಿಯ ಬಗ್ಗೆ ಜನರಿಗೆ ಭಯ, ಗೌರವವಿದೆ. ಅತ್ಯಾಚಾರ, ಕಿರುಕುಳ ಮುಂತಾದ ದೌರ್ಜನ್ಯಗಳ ಬಗ್ಗೆ ಇವರು ಖಡಕ್ ನಿರ್ಧಾರಗಳನ್ನು ತೆಗೆದುಕೊಳ್ತಿದ್ದಾರೆ. ಈ ಅಧಿಕಾರಿ ಇತ್ತೀಚೆಗೆ ಕುತೂಹಲಕಾರಿ ವಿಡಿಯೋ ಹಂಚಿಕೊಂಡಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ನೀವೂ ಒಮ್ಮೆ ವಿಡಿಯೋ ನೋಡಿ..
ತಾಯಿ ಮತ್ತು ಮಗುವಿನ ಸಂಬಂಧದ ಬಗ್ಗೆ ವಿಶೇಷ ವರ್ಣನೆ ಬೇಕಿಲ್ಲ. ತಾಯಿಯ ಹೃದಯ ಸದಾ ತನ್ನ ಮಕ್ಕಳಿಗಾಗಿ ಮಿಡಿಯುತ್ತಿರುತ್ತದೆ. ತನ್ನ ಕರುಳ ಕುಡಿಗಳ ಬಗ್ಗೆ ವಿಶೇಷ ಕಾಳಜಿ ಇರುತ್ತದೆ. ಇಂತಹ ಭಾವನೆಗಳು ಮನುಷ್ಯರಲ್ಲಿ ಮಾತ್ರವಲ್ಲ, ಪ್ರಾಣಿಗಳಿಗೂ ಇದೆ. ಇದಕ್ಕೆ ಲೇಟೆಸ್ಟ್ ಉದಾಹರಣೆ ಥಾಯ್ಲೆಂಡ್ನಲ್ಲಿ ನಡೆದ ಘಟನೆ.
ಇಲ್ಲಿ ತನ್ನ ಮರಿ ಒಳಚರಂಡಿ ತೊಟ್ಟಿಗೆ ಬಿದ್ದಾಗ ತಾಯಿ ಸಿಕ್ಕಾಪಟ್ಟೆ ಆನೆ ಗಾಬರಿಗೊಂಡಿದೆ. ನಖೋನ್ ನಯೋಕ್ ಪ್ರಾಂತ್ಯದಲ್ಲಿ ಕಳೆದ ಬುಧವಾರ ಈ ಘಟನೆ ನಡೆಯಿತು. ಮರಿ ಆನೆ ಒಳಚರಂಡಿ ತೊಟ್ಟಿಗೆ ಕಾಲು ಜಾರಿ ಬಿದ್ದು ಸಹಾಯಕ್ಕಾಗಿ ಜೋರಾಗಿ ಘೀಳಿಡಲು ಪ್ರಾರಂಭಿಸಿದೆ. ತನ್ನ ಮರಿಯ ರಕ್ಷಣೆಯ ಒತ್ತಡಕ್ಕೆ ಬಿದ್ದ ತಾಯಿ ಆನೆ ಕೂಡ ಒಳಚರಂಡಿ ತೊಟ್ಟಿಗೆ ಬಿದ್ದಿದೆ. ಇದನ್ನು ಗಮನಿಸಿದ ದಾರಿಹೋಕರೊಬ್ಬರು ಅಧಿಕಾರಿಗಳಿಗೆ ಮಾಹಿತಿ ಮುಟ್ಟಿಸಿದ್ದು ರಾಷ್ಟ್ರೀಯ ಉದ್ಯಾನವನದ ಸಿಬ್ಬಂದಿ ತಾಯಿ ಆನೆಗೆ ಅರಿವಳಿಕೆ ಮದ್ದು ನೀಡಿದ್ದಾರೆ.
ಆ ಬಳಿಕ ರಕ್ಷಣಾ ತಂಡವು ಕ್ರೇನ್ ಸಹಾಯದಿಂದ ದೊಡ್ಡ ಆನೆಯನ್ನು ತೊಟ್ಟಿಯಿಂದ ಮೇಲೆತ್ತಿದರು. ನಂತರ ಪ್ರಜ್ಞೆ ತಪ್ಪಿದ್ದ ತಾಯಿ ಆನೆಗೆ ಸಿಪಿಆರ್ ಮಾಡಿ ಮತಿ ಭರಿಸುವ ಪ್ರಯತ್ನ ನಡೆಯಿತು. ಮರಿ ಆನೆ ಪ್ರತ್ಯೇಕ ದಾರಿಯ ಮೂಲಕ ಮೇಲೆ ಬಂದು ತಾಯಿಯ ಮಡಿಲು ಸೇರಿತು. ಸ್ವಲ್ಪ ಹೊತ್ತಿನ ನಂತರ ಪ್ರಜ್ಞೆ ಪಡೆದ ತಾಯಿ ಆನೆ ತನ್ನ ಮರಿಯೊಂದಿಗೆ ಕಾಡಿನ ಕಡೆ ಹೆಜ್ಜೆ ಹಾಕಿತು.
ಇದನ್ನೂ ಓದಿ:ನೀರಿನಲ್ಲಿ ಕೊಚ್ಚಿ ಹೋಗುತ್ತಿದ್ದ ವ್ಯಕ್ತಿಯನ್ನು ಬಚಾವ್ ಮಾಡಿದ ಆನೆ - ವಿಡಿಯೋ