ಬಾಗೋದರ್(ಜಾರ್ಖಂಡ್):ಕಳೆದ ಕೆಲ ದಿನಗಳಿಂದ ಕಾಡಾನೆ ಹಿಂಡೊಂದು ಬಾಗೋದರ್ ಗ್ರಾಮದ ಸುತ್ತಮುತ್ತ ಸಂಚರಿಸುತ್ತಿತ್ತು. ಇದರಲ್ಲಿ ಮರಿಯಾನೆಯೊಂದು ನಿನ್ನೆ ರಾತ್ರಿ ಬಾವಿಗೆ ಬಿದ್ದಿದೆ. ಈ ಮಾಹಿತಿ ತಿಳಿದು ಸ್ಥಳಕ್ಕಾಗಿಸಿರುವ ಅರಣ್ಯ ಇಲಾಖೆ ಸಿಬ್ಬಂದಿ ಸ್ಥಳಕ್ಕೆ ತಲುಪಿ, ರಕ್ಷಣಾ ಕಾರ್ಯಾಚರಣೆ ನಡೆಸಿದರು.
ಬಾವಿಯಲ್ಲಿ ಬಿದ್ದ ಮರಿಯಾನೆ ಹೊರತೆಗೆಯಲು ಅರಣ್ಯ ಸಿಬ್ಬಂದಿ ಸುಮಾರು 6-7 ಗಂಟೆ ಕಾರ್ಯಾಚರಣೆ ನಡೆಸಿದ್ದರು. ಮೂರು ಜೆಸಿಬಿ ಯಂತ್ರಗಳ ಸಹಾಯದಿಂದ ಅದನ್ನ ಹೊರತೆಗೆಯಲಾಗಿದ್ದು, ಸುರಕ್ಷಿತವಾಗಿ ಹೊರಗೆ ತೆಗೆಯುವಲ್ಲಿ ಸಿಬ್ಬಂದಿ ಯಶಸ್ವಿಯಾಗಿದ್ದಾರೆ. ರಕ್ಷಣಾ ಕಾರ್ಯಾಚರಣೆ ನೋಡಲು ಗ್ರಾಮದ ನೂರಾರು ಜನರು ಸ್ಥಳಕ್ಕಾಗಮಿಸಿದ್ದಾರೆ.