ಪೂರ್ಣಿಯಾ(ಬಿಹಾರ): ಇಲ್ಲಿನ ಮಹಿಳೆಯೊಬ್ಬರು ನಾಲ್ಕು ಕಾಲುಗಳು, ನಾಲ್ಕು ಕೈಗಳಿರುವ ಮಗುವಿಗೆ ಜನ್ಮ ನೀಡಿದ್ದು, ಜನರಲ್ಲಿ ಕುತೂಹಲ ಸೃಷ್ಟಿಸಿದೆ. ಮೌಜಾವರಿಯ ಮಹಿಳೆಯೊಬ್ಬರು ಡಿಸೆಂಬರ್ 18 ರಂದು ಪೂರ್ಣಿಯಾ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಗಂಡು ಮಗುವಿಗೆ ಜನ್ಮ ನೀಡಿದ್ದರು. ಆದರೆ ಮಗು ಹುಟ್ಟಿದ ಕೆಲವೇ ದಿನಗಳಲ್ಲೇ ಸಾವನ್ನಪ್ಪಿದೆ.
ಮಗುವಿನ ತಲೆ ಸಾಮಾನ್ಯ ಮಕ್ಕಳಿಗಿಂತ ಎರಡು ಪಟ್ಟು ದೊಡ್ಡದಾಗಿತ್ತು. ಅಲ್ಲದೇ ಬಾಯಿ, ಕಣ್ಣು ಮತ್ತು ಮೂಗು ಒಂದೇ ತಲೆಯ ಮೇಲೆ ಎರಡೂ ಬದಿಯಲ್ಲಿದ್ದು, ದೇಹದಲ್ಲಿರುವ ಕೆಲವೊಂದು ಭಾಗಗಳು ಒಂದೇ ಆಗಿದ್ದವು. ವಿಷಯ ತಿಳಿದ ಜನರ ದಂಡು ಆಸ್ಪತ್ರೆಗೆ ಮಗುವನ್ನು ನೋಡಲು ಜಮಾಯಿಸಿತ್ತು. ಅನೇಕರು ಇದೊಂದು ಪವಾಡವೆಂದೇ ಕರೆಯುತ್ತಿದ್ದರು ಎಂದು ವೈದ್ಯರು ಹೇಳಿದ್ದಾರೆ.