ಬುಲಂದ್‌ಶಹರ್ (ಉತ್ತರ ಪ್ರದೇಶ):ಮಾನಸಿಕ ಅಸ್ವಸ್ಥ ಮಹಿಳೆಯೊಬ್ಬಳು ತನ್ನ 13 ತಿಂಗಳ ಗಂಡು ಮಗುವಿನ ಶಿರಚ್ಛೇದ ಮಾಡಿ ಹತ್ಯೆಗೈದು, ಬಳಿಕ ತಾನೂ ಆತ್ಮಹತ್ಯೆ ಮಾಡಿಕೊಂಡಿರುವ ಅಮಾನವೀಯ ಘಟನೆ ಉತ್ತರ ಪ್ರದೇಶದ ಬುಲಂದ್‌ಶಹರ್ ಜಿಲ್ಲೆಯ ಗ್ರಾಮವೊಂದರಲ್ಲಿ ನಡೆದಿದೆ.
ಜಿತೇಂದ್ರಿ (23) ಎಂಬ ಮಹಿಳೆ ಮಾನಸಿಕ ಅಸ್ವಸ್ಥರಾಗಿದ್ದು, ಆಕೆಯ ಪತಿ ರಾಜಸ್ಥಾನದಲ್ಲಿ ಟೈಲರ್ ಆಗಿ ಕೆಲಸ ಮಾಡುತ್ತಾರೆ. ಕತ್ತಿಯಿಂದ ಮಗುವಿನ ತಲೆ ಕತ್ತರಿಸಿ ಮನೆಯಿಂದ ಹೊರ ನೂಕಿದ್ದಾಳೆ. ಬಳಿಕ ಕೋಣೆಯೊಂದರ ಬಾಗಿಲು ಲಾಕ್ ಮಾಡಿಕೊಂಡು ತನ್ನ ಕುತ್ತಿಗೆ ಕೊಯ್ದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾಳೆ.