ನವದೆಹಲಿ:ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ನಂದಿಗ್ರಾಮದಿಂದ ಸ್ಪರ್ದಿಸಿದರೆ, ಭಾರತೀಯ ಜನತಾ ಪಕ್ಷ (ಬಿಜೆಪಿ) ಕೇಂದ್ರ ಸಚಿವ ಬಾಬುಲ್ ಸುಪ್ರಿಯೋ ಅವರನ್ನು ಭವಾನಿಪುರದಿಂದ ಕಣಕ್ಕಿಳಿಸಬಹುದು ಎಂದು ಮೂಲಗಳು ತಿಳಿಸಿವೆ.
ಬಂಗಾಳ ಚುನಾವಣಾ ಅಬ್ಬರ: ಮಮತಾ ವಿರುದ್ಧ ಸುಪ್ರಿಯೋ ಕಣಕ್ಕಿಳಿಯುವ ಸಾಧ್ಯತೆ - ಸುವೆಂದು ಅಧಿಕಾರಿ ಸುದ್ದಿ
ಮಮತಾ ಬ್ಯಾನರ್ಜಿ ಎರಡು ಕ್ಷೇತ್ರದಿಂದ ಸ್ಪರ್ಧಿಸಿದರೆ, ಬಿಜೆಪಿಯ ಸುಪ್ರಿಯೋ ಮತ್ತು ಸುವೆಂದು ಅಧಿಕಾರಿ ಕಣಕ್ಕಿಳಿಯಬಹುದು ಎಂದು ಬಿಜೆಪಿಯ ಹಿರಿಯ ಮುಖಂಡರೊಬ್ಬರು ಹೇಳಿದ್ದಾರೆ.
ಮಮತಾ ಬ್ಯಾನರ್ಜಿ-ಬಾಬುಲ್ ಸುಪ್ರಿಯೋ
ಬಿಜೆಪಿಯ ಹಿರಿಯ ಮುಖಂಡರೊಬ್ಬರು ಈ ಬಗ್ಗೆ ಮಾತನಾಡಿದ್ದು, " ಚುನಾವಣಾ ಅಭ್ಯರ್ಥಿಯನ್ನು ಯಾವ ಕ್ಷೇತ್ರದಿಂದ ಕಣಕ್ಕಿಳಿಸಬೇಕು ಎಂಬ ಬಗ್ಗೆ ಬಿಜೆಪಿ ಕೇಂದ್ರ ಚುನಾವಣಾ ಸಮಿತಿಯಲ್ಲಿ (ಸಿಇಸಿ) ಚರ್ಚಿಸಲಾಗಿದೆ. ಅವರು ಎರಡು ಕ್ಷೇತ್ರಗಳಿಂದ ಸ್ಪರ್ಧಿಸಿದರೆ ಸುಪ್ರಿಯೋ ಅವರ ವಿರುದ್ಧ ಕಣಕ್ಕಿಳಿಯಬಹುದು" ಎಂದಿದ್ದಾರೆ.
"ಭವಾನಿಪೋರ್‌ನಲ್ಲಿ ಸುಪ್ರಿಯೋ ಅಥವಾ ನಂದಿಗ್ರಾಮ್‌ನಲ್ಲಿ ಸುವೆಂದು ಅಧಿಕಾರಿಯಂತಹ ಪ್ರಬಲ ಅಭ್ಯರ್ಥಿಗಳೊಂದಿಗೆ ನಾವು ಎರಡೂ ಸ್ಥಾನಗಳಲ್ಲಿ ಮಮತಾರನ್ನು ಸೋಲಿಸಲಿದ್ದೇವೆ" ಎಂದು ಅವರು ಹೇಳಿದರು.