ನವದೆಹಲಿ: ಇದು ತಮಾಷೆಯಾಗಿ ಕಂಡರೂ ಈ ಐಡಿಯಾ ಮಾತ್ರ ಯಶಸ್ವಿಯಾಗಿದೆ. ಕೋತಿಗಳನ್ನು ಸರ್ದಾರ್ ಪಟೇಲ್ ಕೋವಿಡ್ ಕೇರ್ ಸೆಂಟರ್ನಿಂದ ದೂರವಿರಿಸಲು ಬಾಬೂನ್ ಕಟೌಟ್‌ಗಳನ್ನು ಬಳಸಲಾಗಿದೆ.
ಇಂಡೋ-ಟಿಬೆಟಿಯನ್ ಬಾರ್ಡರ್ ಪೊಲೀಸ್ (ಐಟಿಬಿಪಿ) ದಕ್ಷಿಣ ದೆಹಲಿಯಲ್ಲಿರುವ 10,200 ಹಾಸಿಗೆಗಳ ಸೌಲಭ್ಯದ ಈ ಕೇಂದ್ರದಲ್ಲಿ ಕೋತಿಗಳ ಭೀತಿ ಹೆಚ್ಚಾದ ಹಿನ್ನೆಲೆ ಈ ತೀರ್ಮಾನ ಕೈಗೊಳ್ಳಲಾಗಿದೆ.
ಕಳೆದ ವರ್ಷ ಜುಲೈ 5 ರಂದು ಕೇಂದ್ರವನ್ನು ಉದ್ಘಾಟಿಸಿದಾಗಿನಿಂದ ಅಲ್ಲಿ ಪಿಪಿಇ ಕಿಟ್ ಧರಿಸಿದ ವೈದ್ಯಕೀಯ ಸಿಬ್ಬಂದಿ ಈ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ. ಕೋತಿ ಗುಂಪು ಗುಂಪಾಗಿ ಇಲ್ಲಿ ಸರಾಗವಾಗಿ ಸಂಚರಿಸುತ್ತವೆ. ಕೆಲವೊಮ್ಮೆ ದಾಳಿ ಕೂಡ ಮಾಡುತ್ತಿವೆ ಎಂದು ಐಟಿಬಿಪಿ ವಕ್ತಾರ ವಿವೇಕ್ ಪಾಂಡೆ ತಿಳಿಸಿದ್ದಾರೆ.
ಸುತ್ತಮುತ್ತಲಿನ ಕೋತಿ ಭೀತಿಯನ್ನು ಎದುರಿಸಲು, ಐಟಿಬಿಪಿ ಕೋವಿಡ್ ಆರೈಕೆ ಕೇಂದ್ರದ ಆವರಣದಲ್ಲಿ ಬಾಬೂನ್‌ಗಳ ಕಟೌಟ್‌ಗಳನ್ನು ಇರಿಸಿದೆ ಎಂದು ಪಾಂಡೆ ಮಾಹಿತಿ ನೀಡಿದ್ದಾರೆ.
ಬಾಬೂನ್‌ಗಳ ಕಟೌಟ್‌ಗಳು ಬಹಳ ಪರಿಣಾಮಕಾರಿ ಎಂದು ತೋರುತ್ತದೆ. ಈ ಕಟೌಟ್‌ಗಳನ್ನು ಹಾಕಿದ ನಂತರ ಕೋತಿ ಗುಂಪುಗಳು ಆವರಣಕ್ಕೆ ಪ್ರವೇಶಿಸುವುದನ್ನು ತಡೆಯುತ್ತಿವೆಯಂತೆ.