ಕರ್ನಾಟಕ

karnataka

ETV Bharat / bharat

"ನನ್ನನ್ನು ಅರೆಸ್ಟ್​ ಮಾಡುವವರು ಅಧಿಕಾರದಲ್ಲಿಲ್ಲ": ಬಾಬಾ ಮತ್ತೊಂದು ವಿಡಿಯೋ ವೈರಲ್​ - baba ramdev

ಬಾಬಾ ರಾಮದೇವ್ ಅವರ ಮತ್ತೊಂದು ವಿಡಿಯೋ ಹೊರಬಿದ್ದಿದೆ. ಈ ವಿಡಿಯೋದಲ್ಲಿ ದೇಶದ ಕೆಲ ಉದ್ಯಮಿಗಳ ಜೊತೆ ಅವರು ಮಾತನಾಡುತ್ತಿದ್ದಾರೆ. ಈ ವೇಳೆ ಅವರು, “ನನ್ನನ್ನು ಬಂಧಿಸುವ ಯಾವುದೇ ವ್ಯಕ್ತಿ ಅಧಿಕಾರದಲ್ಲಿಲ್ಲ” ಎಂದು ಹೇಳಿಕೆ ನೀಡಿದ್ದಾರೆ. ಅಷ್ಟೇ ಅಲ್ಲದೆ, ಸೋಷಿಯಲ್ ಮೀಡಿಯಾದಲ್ಲಿ ಟ್ರೆಂಡಿಂಗ್ ಅನ್ನು ಪಡೆಯುವುದು ಜನರ ಕೆಲಸ ಎಂದು ಬಾಬಾ ಹೇಳಿದ್ದಾರೆ.

ರಾಮ್​ದೇವ್​ಗೆ ಸಂಕಷ್ಟ
ರಾಮ್​ದೇವ್​ಗೆ ಸಂಕಷ್ಟ

By

Published : May 26, 2021, 4:03 PM IST

Updated : May 26, 2021, 5:16 PM IST

ಡೆಹ್ರಾಡೂನ್: ನಿರಂತರವಾಗಿ ವಿವಾದಗಳಲ್ಲಿ ಸಿಲುಕಿರುವ ಯೋಗ ಗುರು ಬಾಬಾ ರಾಮದೇವ್ ಅವರ ವೈರಲ್ ಹೇಳಿಕೆಗಳು ಒಂದರ ನಂತರ ಒಂದರಂತೆ ಮುಖ್ಯ ಭೂಮಿಕೆಯಲ್ಲಿವೆ. ಬಾಬಾ ಅವರ ಹೇಳಿಕೆಗಳು ದೇಶದ ವೈದ್ಯರನ್ನು ಕೆರಳಿಸಿದೆ. ಬಹುಶಃ ಇದಕ್ಕಾಗಿಯೇ ಯೋಗ ಗುರು ಬಾಬಾ ರಾಮದೇವ್ ವಿರುದ್ಧ ಐಎಂಎ ಕ್ರಮ ಕೈಗೊಳ್ಳಲು ಸಜ್ಜುಗೊಂಡಿದೆ. ದೇಶದ ಎಲ್ಲ ವೈದ್ಯರು ಬಾಬಾ ರಾಮ್‌ದೇವ್ ಅವರ ವಿರುದ್ಧ ಕ್ಯಾಂಪೇನ್​ ನಡೆಸುವ ಮೂಲಕ ಲೀಗಲ್ ನೋಟಿಸ್ ನೀಡಿದ್ದಾರೆ.

ಬಾಬಾ ರಾಮದೇವ್ ಅವರ ಮತ್ತೊಂದು ವಿಡಿಯೋ ಹೊರ ಬಿದ್ದಿದೆ. ಈ ವಿಡಿಯೋದಲ್ಲಿ ದೇಶದ ಕೆಲ ಉದ್ಯಮಿಗಳ ಜೊತೆ ಅವರು ಮಾತನಾಡುತ್ತಿದ್ದಾರೆ. ಈ ವೇಳೆ ಅವರು, “ನನ್ನನ್ನು ಬಂಧಿಸುವ ಯಾವುದೇ ವ್ಯಕ್ತಿ ಅಧಿಕಾರದಲ್ಲಿಲ್ಲ” ಎಂದು ಹೇಳಿಕೆ ನೀಡಿದ್ದಾರೆ. ಅಷ್ಟೇ ಅಲ್ಲದೆ, ಸೋಷಿಯಲ್ ಮೀಡಿಯಾದಲ್ಲಿ ಟ್ರೆಂಡಿಂಗ್ ಅನ್ನು ಪಡೆಯುವುದು ಜನರ ಕೆಲಸ ಎಂದು ಬಾಬಾ ಹೇಳಿದ್ದಾರೆ.

ಬಾಬಾ ಮತ್ತೊಂದು ವಿಡಿಯೋ ವೈರಲ್​

ಬಾಬಾ ಅವರ ಹೇಳಿಕೆಗಳ ನಂತರ ಐಎಂಎ ಈಗಾಗಲೇ 1 ಸಾವಿರ ಕೋಟಿ ರೂಪಾಯಿಗಳ ಮಾನನಷ್ಟ ನೋಟಿಸ್ ಕಳುಹಿಸಿದೆ. ಅಲೋಪಥಿಗಳು ಮತ್ತು ವೈದ್ಯರ ಕುರಿತ ಹೇಳಿಕೆಗೆ ಕ್ಷಮೆಯಾಚಿಸುವಂತೆ ದೇಶದ ಆರೋಗ್ಯ ಸಚಿವರು ಬಾಬಾ ರಾಮ್‌ದೇವ್ ಅವರನ್ನು ಕೋರಿದ್ದಾರೆ. ಅದರ ನಂತರ ಬಾಬಾ ಕೂಡ ತಮ್ಮ ಹೇಳಿಕೆಯನ್ನು ಹಿಂತೆಗೆದು ಕೊಂಡಿದ್ದರು.

Last Updated : May 26, 2021, 5:16 PM IST

ABOUT THE AUTHOR

...view details