ಕರ್ನಾಟಕ

karnataka

ETV Bharat / bharat

ಐಎಂಎ - ಫಾರ್ಮಾ ಕಂಪನಿಗಳಿಗೆ 25 ಪ್ರಶ್ನೆ ಕೇಳಿದ ಬಾಬಾ ರಾಮ್​ದೇವ್​ - ಬಾಬಾ ರಾಮ್​ದೇವ್​

ವಿವಾದಾತ್ಮಕ ಹೇಳಿಕೆ ಬಳಿಕ ಐಎಂಎ ಮತ್ತು ಫಾರ್ಮಾ ಕಂಪನಿಗಳಿಗೆ ಯೋಗ ಗುರು ಬಾಬಾ ರಾಮ್​ದೇವ್​​ 25 ಪ್ರಶ್ನೆಗಳನ್ನು ಕೇಳಿದ್ದಾರೆ.

ramdev
ramdev

By

Published : May 24, 2021, 9:17 PM IST

ಡೆಹರಡೂನ್​: ಬಾಬಾ ರಾಮ್‌ದೇವ್ ಅವರ ವಿವಾದಾತ್ಮಕ ಹೇಳಿಕೆ ಹಿನ್ನೆಲೆ ಅವರನ್ನು ಬಂಧಿಸುವಂತೆ ಕೇಂದ್ರ ಸರ್ಕಾರಕ್ಕೆ ಒತ್ತಾಯಿಸಿರುವ ಐಎಂಎ ಹಾಗೂ ಫಾರ್ಮಾ ಕಂಪನಿಗಳಿಗೆ ಬಾಬಾ ರಾಮದೇವ್​ 25 ಪ್ರಶ್ನೆಗಳನ್ನು ಕೇಳಿದ್ದಾರೆ.

ಅಲೋಪಥಿ ಔಷಧಗಳ ಪರಿಣಾಮಕಾರಿತ್ವವನ್ನು ಪ್ರಶ್ನಿಸುವ ತನ್ನ ಹೇಳಿಕೆಯನ್ನು ಹಿಂತೆಗೆದುಕೊಳ್ಳುವಂತೆ ಯೋಗ ಗುರು ಬಾಬಾ ರಾಮದೇವ್​​ಗೆ ಸೂಚಿಸಿದ ಬಳಿಕ ಭಾರತೀಯ ವೈದ್ಯಕೀಯ ಸಂಘ (ಐಎಂಎ)ಕ್ಕೆ ಬಾಬಾ ರಾಮ್​ದೇವ್​ ಅಧಿಕ ರಕ್ತದೊತ್ತಡ ಮತ್ತು ಮಧುಮೇಹದಂತಹ ಕಾಯಿಲೆಗಳಿಗೆ ಅಲೋಪಥಿ ಶಾಶ್ವತ ಪರಿಹಾರವನ್ನು ನೀಡುತ್ತದೆಯೇ ಎಂದು ಪ್ರಶ್ನಿಸಿದ್ದಾರೆ. ಇದರ ಜೊತೆಗೆ ಇನ್ನೂ ಹಲವು ಪ್ರಶ್ನೆ ಸೇರಿ ಐಎಂಎಗೆ ಒಟ್ಟು 25 ಪ್ರಶ್ನೆಗಳನ್ನು ಹಾಕಿದ್ದಾರೆ.

ಯೋಗ ಗುರು ಬಾಬಾ ರಾಮದೇವ್ ಅವರ ವಿವಾದಾತ್ಮಕ ಹೇಳಿಕೆಯ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗಿದೆ. ಇದಕ್ಕೆ ಅಸಮಾಧಾನ ವ್ಯಕ್ತಪಡಿಸಿರುವ ಐಎಂಎ ಅವರ ಬಂಧನಕ್ಕೆ ಒತ್ತಾಯಿಸಿತ್ತು.

ABOUT THE AUTHOR

...view details