ಹರಿದ್ವಾರ: ಪತಂಜಲಿ ಯೋಗಪೀಠ ಹರಿದ್ವಾರದಲ್ಲಿ ನಡೆಯುತ್ತಿರುವ ಗಿಡಮೂಲಿಕೆ ಕಾರ್ಯಕ್ರಮದಲ್ಲಿ ಯೋಗ ಗುರು ಬಾಬಾ ರಾಮದೇವ್ ಮತ್ತೊಮ್ಮೆ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಬಾಬಾ ರಾಮದೇವ್ ಮತ್ತೊಮ್ಮೆ ವೈದ್ಯಕೀಯ ವಿಜ್ಞಾನವನ್ನು ಗುರಿಯಾಗಿಸಿ ಮಾತನಾಡಿದ್ದಾರೆ. ಅಮೆರಿಕ ಅಧ್ಯಕ್ಷ ಜೋ ಬೈಡನ್ ಹೆಸರನ್ನು ಉಲ್ಲೇಖಿಸಿ ಮಾತನಾಡಿ, ಕೋವಿಡ್ ಲಸಿಕೆಯನ್ನು ವೈದ್ಯಕೀಯ ವಿಜ್ಞಾನದ ವೈಫಲ್ಯ ಎಂದು ಹೇಳಿದ್ದಾರೆ..
ಕೋವಿಡ್ ಲಸಿಕೆ ವೈಫಲ್ಯ - ಬಾಬಾ ರಾಮದೇವ್ ವಿವಾದಾತ್ಮಕ ಹೇಳಿಕೆ! - ಈಟಿವಿ ಭಾರತ ಕನ್ನಡ
ಅಮೆರಿಕದ ಅಧ್ಯಕ್ಷ ಜೋ ಬೈಡನ್ ಕೋವಿಡ್ ಲಸಿಕೆ ಪಡೆದ ನಂತರವೂ ಅವರು ಸೋಂಕಿಗೆ ತುತ್ತಾಗಿದ್ದಾರೆ. ಇದು ವೈದ್ಯಕೀಯ ವಿಜ್ಞಾನದ ವೈಫಲ್ಯ ಅನ್ನು ತೋರಿಸುತ್ತಿದೆ ಎಂದು ವೈದ್ಯಕೀಯ ವಿಜ್ಞಾನ ಕುರಿತು ಬಾಬಾ ರಾಮದೇವ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ಬಾಬಾ ರಾಮದೇವ್ ವಿವಾದಾತ್ಮಕ ಹೇಳಿಕೆ
ಅಮೆರಿಕದ ಅಧ್ಯಕ್ಷ ಜೋ ಬೈಡನ್ ಕೂಡ ಕೋವಿಡ್ ಲಸಿಕೆಯ ಎರಡೂ ಡೋಸ್ ಮತ್ತು ಬೂಸ್ಟರ್ ಡೋಸ್ ಅನ್ನು ಪಡೆದ ನಂತರವೂ ಅವರು ಕೋವಿಡ್ಗೆ ತುತ್ತಾಗಿದ್ದಾರೆ ಎಂದರು. ಯಾರು ಏನೇ ಹೇಳಿದರೂ ನಾವೇ ಶಕ್ತಿಶಾಲಿ, ನಮಗಿಂತ ದೊಡ್ಡವರು ಯಾರೂ ಇಲ್ಲ. ಇದು ವೈದ್ಯಕೀಯ ವಿಜ್ಞಾನದ ವೈಫಲ್ಯ ಅನ್ನು ತೋರಿಸುತ್ತಿದೆ. ಜಗತ್ತು ಮತ್ತೆ ಗಿಡಮೂಲಿಕೆಗೆ ಮರಳಲಿದೆ ಎಂದು ರಾಮ್ದೇವ್ ಹೇಳಿದ್ದಾರೆ.
ಇದನ್ನೂ ಓದಿ:43 ಸಾವಿರ ಜನರಿಗೆ ಚಿಕಿತ್ಸೆ ನೀಡಿದ್ದ ನಕಲಿ ಡಾಕ್ಟರ್ ಬಂಧನ