ಉಜ್ಜೈನಿ(ಮಧ್ಯಪ್ರದೇಶ):ದೇಶಾದ್ಯಂತ ಉಲ್ಬಣಗೊಂಡಿದ್ದ ಕೊರೊನಾ ಎರಡನೇ ಹಂತದ ಅಲೆ ಇದೀಗ ಕಡಿಮೆಯಾಗಿದ್ದು, ಹೀಗಾಗಿ ಎಲ್ಲವೂ ಈ ಹಿಂದಿನಂತೆ ಸಹಜ ಸ್ಥಿತಿಗೆ ಮರಳುತ್ತಿದೆ. ಇದೀಗ ದೇವಸ್ಥಾನಗಳು ರೀ ಓಪನ್ ಆಗ್ತಿದ್ದು, ಬರುವ ಜೂನ್ 28ರಿಂದ ಉಜ್ಜೈನಿ ವಿಶ್ವ ಪ್ರಸಿದ್ಧ ಮಹಾಕಾಳೇಶ್ವರ ದರ್ಶನ ನೀಡಲಿದ್ದಾನೆ.
ಸುಮಾರು 80 ದಿನಗಳ ಕಾಲ ಈ ದೇವಸ್ಥಾನ ಬಂದ್ ಆಗಿತ್ತು. ಆದರೆ, ಇದೀಗ ರೀ ಓಪನ್ ಆಗುತ್ತಿರುವ ಕಾರಣ ಕೊರೊನಾ ಮಾರ್ಗಸೂಚಿ ಪಾಲನೆ ಕಡ್ಡಾಯ ಎಂದು ದೇವಸ್ಥಾನದ ಆಡಳಿತ ಮಂಡಳಿ ಮಾಹಿತಿ ನೀಡಿದೆ. ಜತೆಗೆ ಇಲ್ಲಿಗೆ ಭೇಟಿ ನೀಡುವ ಪ್ರತಿಯೊಬ್ಬರು ಕೋವಿಡ್ ಲಸಿಕೆ ಪಡೆದುಕೊಳ್ಳುವುದು ಕಡ್ಡಾಯವಾಗಿದ್ದು, ಲಸಿಕೆ ಪಡೆದುಕೊಂಡಿರುವ ಪ್ರಮಾಣಪತ್ರ ತೋರಿಸಿದ ನಂತರ ದೇವರ ದರ್ಶನ ಪಡೆದುಕೊಳ್ಳಲು ಅನುಮತಿ ನೀಡಲಾಗುವುದು ಎಂದಿದೆ.