ಕರ್ನಾಟಕ

karnataka

ETV Bharat / bharat

Viral Video: ಪ್ರಸಾದದೊಳಗೆ ಉಗಿದು ಭಕ್ತರಿಗೆ ಹಂಚುತ್ತಿರುವ ಬಾಬಾ - ಪ್ರಾಣ್​​ ಕೃಷ್ಣದಾಸ್ ಮಹಾರಾಜ್

ಗಾಜಿಯಾಬಾದ್ ಜಿಲ್ಲೆಯ ಹೋಟೆಲೊಂದರಲ್ಲಿ ರೊಟ್ಟಿ ತಯಾರಿಸುವ ವೇಳೆ ಯುವಕನೋರ್ವ ಉಗುಳುತ್ತಿದ್ದ ವಿಡಿಯೋ ವೈರಲ್ ಆದ ಬೆನ್ನಲ್ಲೇ ಮತ್ತೊಂದು ಇಂಥದ್ದೇ ವಿಡಿಯೋ ವೈರಲ್ ಆಗಿದೆ.

baba-distributing-prasad-to-devotees-by-spitting-in-mathura
Viral Video: ಪ್ರಸಾದದೊಳಗೆ ಉಗಿದು ಭಕ್ತರಿಗೆ ಹಂಚುತ್ತಿರುವ ಬಾಬಾ

By

Published : Jun 13, 2021, 10:47 AM IST

ಮಥುರಾ, ಉತ್ತರ ಪ್ರದೇಶ: ದೇವಾಲಯಕ್ಕೆ ಬಂದ ಭಕ್ತರಿಗೆ ಉಗುಳಿದ ಪ್ರಸಾದ ಹಂಚುತ್ತಿರುವ ಬಾಬಾನ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಉತ್ತರ ಪ್ರದೇಶದ ಗೋವರ್ಧನ ಜಿಲ್ಲೆಗೆ ಸಂಬಂಧಿಸಿದೆ ಎಂದು ಹೇಳಲಾಗುತ್ತಿದೆ.

ಇಲ್ಲಿನ ಶ್ರೀಧಾಮ ರಾಧಾಕುಂಡದ ಸೇರಿದ ಪ್ರಾಣ್​​ ಕೃಷ್ಣದಾಸ್ ಮಹಾರಾಜ್ ಈ ರೀತಿಯಾಗಿ ಪ್ರಸಾದದಲ್ಲಿ ಉಗುಳಿ ಭಕ್ತರಿಗೆ ಹಂಚಲಾಗುತ್ತಿದೆ ಎಂದು ಹೇಳಲಾಗುತ್ತಿದೆ. ಸ್ಥಳೀಯವಾಗಿ ಈ ಬಾಬಾನನ್ನು ಬೆಲಾವಾಲೆ ಬಾಬಾ ಎಂದು ಕರೆಯಲಾಗುತ್ತದೆ.

ವೈರಲ್ ಆಗಿರುವ ವಿಡಿಯೋ

ದೇವಾಲಯಕ್ಕೆ ಬರುವ ಭಕ್ತರಿಗೆ ಪ್ರತಿದಿನ ಕಿಚಡಿಯನ್ನ ಪ್ರಸಾದವನ್ನಾಗಿ ನೀಡುವ ಬಾಬಾ ಅದರಲ್ಲಿ ಉಗುಳಿ ಕೊಡುತ್ತಾನೆ. ಹಲವು ದಿನಗಳಿಂದ ಈ ಸಂಪ್ರದಾಯ ನಡೆದುಕೊಂಡು ಬಂದಿದೆ ಎಂದು ಅಲ್ಲಿನ ಸ್ಥಳೀಯರು ಹೇಳಿದ್ದಾರೆ.

ಇದನ್ನೂ ಓದಿ:ರಾಷ್ಟ್ರೀಯ ಸ್ಮಾರಕವಾಗಲಿದೆ ಅಮೆರಿಕದ ಪಲ್ಸ್ ನೈಟ್ ಕ್ಲಬ್

ಕೆಲವು ದಿನಗಳ ಹಿಂದೆ ಗಾಜಿಯಾಬಾದ್ ಜಿಲ್ಲೆಯ ಹೋಟೆಲೊಂದರಲ್ಲಿ ರೊಟ್ಟಿ ತಯಾರಿಸುವ ವೇಳೆ ಯುವಕನೋರ್ವ ಉಗುಳುತ್ತಿದ್ದ ವಿಡಿಯೋ ಕೂಡ ಇತ್ತೀಚಿಗೆ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ಆತನನ್ನು ಪೊಲೀಸರು ವಶಕ್ಕೆ ಪಡೆದು ಎಚ್ಚರಿಕೆ ನೀಡಿದ್ದರು.

ABOUT THE AUTHOR

...view details