ಕರ್ನಾಟಕ

karnataka

ETV Bharat / bharat

ಜನಸಂದಣಿಯಿಂದಾಗಿ ಬಾಬಾ ಬಾಗೇಶ್ವರ ದಿವ್ಯ ದರ್ಬಾರ್ "ಹನುಮಂತ ಕಥಾ" ರದ್ದು - Dhirendra Sastry of Baba Bageshwar Dham

ನಿರೀಕ್ಷೆಗೂ ಮೀರಿದ ಜನ ಸೇರಿದರಿಂದ ಬಾಬಾ ಬಾಗೇಶ್ವರ್ ದಿವ್ಯ ದರ್ಬಾರು ರದ್ದಾಗಿದೆ.

ಬಾಬಾ ಬಾಗೇಶ್ವರ ದಿವ್ಯ ದರ್ಬಾರ್
ಬಾಬಾ ಬಾಗೇಶ್ವರ ದಿವ್ಯ ದರ್ಬಾರ್

By

Published : May 15, 2023, 8:47 PM IST

ಪಾಟ್ನಾ (ಬಿಹಾರ) :ಇಂದು ಕೂಡ ನೌಬತ್‌ಪುರದ ತಾರೆತ್ ಪಾಲಿ ಮಠದಲ್ಲಿ ನಡೆಯಬೇಕಿದ್ದ ಬಾಬಾ ಬಾಗೇಶ್ವರ ಧಾಮದ ಧೀರೇಂದ್ರ ಶಾಸ್ತ್ರಿ ಅವರ ದಿವ್ಯ ದರ್ಬಾರ್ ರದ್ದುಗೊಂಡಿದೆ. ಬಾಬಾ ಬಾಗೇಶ್ವರ ಅವರ, ಹನುಮಂತ್ ಕಥಾ ಪ್ರವಚನವನ್ನು ಮೇ 13 ರಿಂದ 17 ರವರೆಗೆ ತಾರೆತ್ ಪಾಲಿ ಮಠದಲ್ಲಿ ಆಯೋಜಿಸಲಾಗಿತ್ತು. ಆದರೆ ಅಧಿಕ ಜನಸಂದಣಿಯಿಂದಾಗಿ ನಿನ್ನೆ (ಭಾನುವಾರ) ತಡರಾತ್ರಿ ಕಾರ್ಯಕ್ರಮವನ್ನು ರದ್ದುಗೊಳಿಸುವುದಾಗಿ ಘೋಷಿಸಲಾಗಿದೆ.

ಇದನ್ನೂ ಓದಿ :ದೇಶದಲ್ಲಿ ಏಕರೂಪ ನಾಗರಿಕ ಸಂಹಿತೆ ಜಾರಿಗೆ ತರಲು ಸಾಧ್ಯವಿಲ್ಲ: ಎಐಯುಡಿಎಫ್ ನಾಯಕ ರಫೀಕುಲ್ ಇಸ್ಲಾಂ

ಸ್ಥಳದಲ್ಲಿ ಜಮಾಯಿಸಿದ್ದ 15 ಲಕ್ಷ ಜನರು.. ಪ್ರವಚನ ಕೇಳಲು ಆಸ್ಥಾನದಲ್ಲಿ ನಿರೀಕ್ಷೆಗಿಂತ ಹೆಚ್ಚಿನ ಜನರು ಸೇರಿದ್ದರು. ಸುಮಾರು 15 ಲಕ್ಷ ಜನ ಜಮಾಯಿಸಿದ್ದು, ಇದರಿಂದ ಅಲ್ಲಿನ ಜನರಿಗೆ ಉಸಿರಾಟದ ತೊಂದರೆ ಎದುರಿಸಿದ್ದಾರೆ. ಪಾಟ್ನಾದ ತಾಪಮಾನವು 42 ಡಿಗ್ರಿ ಸೆಲ್ಸಿಯಸ್‌ಗಿಂತ ಹೆಚ್ಚಿರುವುದರಿಂದ ಅನೇಕ ಜನರು ಸಹ ಅನಾರೋಗ್ಯಕ್ಕೆ ಒಳಗಾಗಿದ್ದರು. ಪರಿಸ್ಥಿತಿಯ ಗಂಭೀರತೆಯನ್ನು ಕಂಡ ಬಾಬಾ ಹನುಮಾನ್ ಕಥಾವನ್ನು ಶುರುವಾದ ಸ್ವಲ್ಪ ಹೊತ್ತಿನಲ್ಲೇ ಮುಗಿಸಿದ್ದಾರೆ.

ಜನಜಂಗುಳಿಯಿಂದ ಪ್ರವಚನ ರದ್ದು : ಈ ವಿಚಾರವಾಗಿ ಶ್ರೀ ಬಾಗೇಶ್ವರ ಬಿಹಾರ ಪ್ರತಿಷ್ಠಾನದ ಅಧ್ಯಕ್ಷ ಅರವಿಂದ್ ಠಾಕೂರ್ ಮಾತನಾಡಿ, ಬಾಬಾರ ಹನುಮಂತ ಕಥಾಕ್ಕೆ 10 ರಿಂದ 15 ಲಕ್ಷ ಭಕ್ತರು ಆಗಮಿಸಿದ್ದರು. ಜನರು ಆಸ್ಥಾನಕ್ಕೆ ಬರುವ ಮೂಲಕ ದೈವಿಕ ದರ್ಬಾರಿನಲ್ಲಿ ಚೀಟಿ ತೆಗೆದಕೊಂಡು ನಂತರ ಭಕ್ತರು ಜನಸಂದಣಿಯಿಂದ ಖಾಲಿ ಇರುವ ಕಡೆ ಪ್ರವಚನ ಕೇಳಲು ಬಾಬಾರ ಹತ್ತಿರ ತಲುಪಿದ್ದರು. ಇಂತಹ ಪರಿಸ್ಥಿತಿಯಲ್ಲಿ ಯಾವುದೇ ಅಹಿತಕರ ಘಟನೆ ಸಂಭವಿಸುವುದನ್ನು ತಪ್ಪಿಸಲು ಬಾಬಾ ಅವರು, ದಿವ್ಯ ದರ್ಬಾರನ್ನು ರದ್ದುಗೊಳಿಸಲು ನಿರ್ಧರಿಸಿದ್ದಾರೆ ಎಂದು ಹೇಳಿದರು.

ಇದನ್ನೂ ಓದಿ :ಬಜರಂಗದಳ ಅವಹೇಳನ ಆರೋಪ: ಮಲ್ಲಿಕಾರ್ಜುನ್​ ಖರ್ಗೆಗೆ ಪಂಜಾಬ್​ ಕೋರ್ಟ್​ ಸಮನ್ಸ್​

ಆಡಳಿತದ ಮೇಲೆ ಕಿಡಿಕಾರಿದ ಬಿಜೆಪಿ ಸಂಸದರು : ಮತ್ತೊಂದೆಡೆ, ಬಾಬಾ ಬಾಗೇಶ್ವರ್ ಅವರ ದಿವ್ಯ ದರ್ಬಾರು ರದ್ದತಿಗೆ ಆಡಳಿತವೇ ಕಾರಣ ಎಂದು ಪಾಟಲಿಪುತ್ರದ ಬಿಜೆಪಿ ಸಂಸದ ರಾಮಕೃಪಾಲ್ ಯಾದವ್ ಆರೋಪಿಸಿದರು. ಕಾರ್ಯಕ್ರಮಕ್ಕೆ ಎಷ್ಟು ಸಹಕಾರ ಸಿಗಬೇಕೋ ಅಷ್ಟು ಸಹಕಾರ ಸ್ಥಳೀಯ ಜಿಲ್ಲಾಡಳಿತದಿಂದ ಸಿಗುತ್ತಿಲ್ಲ. ದುರುದ್ದೇಶದಿಂದಲೇ ರಾಜ್ಯ ಸರ್ಕಾರ ಕೆಲಸ ಮಾಡುತ್ತಿರುವಂತೆ ಕಾಣುತ್ತಿದೆ. ಜನಸಂದಣಿಯ ಬಗ್ಗೆ ಸಂಘಟನಾ ಸಮಿತಿಯು ಈಗಾಗಲೇ ಸಾಧ್ಯತೆಯನ್ನು ವ್ಯಕ್ತಪಡಿಸಿದೆ. ಆದರೆ ಪೊಲೀಸರು ಮತ್ತು ಆಡಳಿತ ಗಮನಹರಿಸಲಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಯಾರಿಗೂ ಯಾವುದೇ ತೊಂದರೆಯಾಗದಂತೆ ದಿವ್ಯ ದರ್ಬಾರನ್ನು ರದ್ದುಗೊಳಿಸಬೇಕೆಂದು ಬಾಬಾ ಅವರು ನಿರ್ಧರಿಸಿದರು ಎಂದು ತಿಳಿಸಿದರು.

ಇದನ್ನೂ ಓದಿ :ಸುಪ್ರೀಂಕೋರ್ಟ್​ ನ್ಯಾಯಮೂರ್ತಿ ಎಂ ಆರ್​ ಶಾ ನಿವೃತ್ತಿ: ಮೇರಾ ನಾಮ್​ ಜೋಕರ್​ ಚಿತ್ರದ ಹಾಡಿನ ಮೂಲಕ ಭಾವುಕ ವಿದಾಯ

ABOUT THE AUTHOR

...view details